Post Office Scheme: ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೆ ನೋಡಿ ಈ ಉಳಿತಾಯ ಯೋಜನೆ; ಹೆಸರು ಸೇರಿಸೋಕೆ ಮುಗಿ ಬಿದ್ದ ಜನ!

Post Office Scheme: ಮಾಡುವಂತಹ 1.5 ಲಕ್ಷ ರೂಪಾಯಿಗಳ ಹೂಡಿಕೆಯಿಂದ ಕೋಟ್ಯಾಧಿಪತಿ ಆಗಬಹುದು ಅಂದ್ರೆ ನೀವು ನಂಬ್ತೀರಾ. ನೀವು ನಂಬ್ತೀರೋ ಬಿಡ್ತೀರೋ ಆದರೆ ಇದು ಆಗೋದಂತೂ ನಿಜ ಯಾಕೆಂದ್ರೆ ಇವತ್ತಿನ ಲೇಖನದಲ್ಲಿ ನಾವು ಹೇಳೋದಕ್ಕೆ ಹೊರಟಿರೋದು ಕೂಡ ಇದೇ ರೀತಿ ಮಹಿಳೆಯರನ್ನ ಕೋಟ್ಯಾಧಿಪತಿ ಮಾಡುವಂತ ಒಂದು ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ. ಈಗಾಗಲೇ ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಇವತ್ತು ನಾವು ಹೇಳಲು ಹೊರಟಿರುವಂತಹ ಯೋಜನೆ ಕೂಡ ಒಂದಾಗಿದ್ದು ಇದರಲ್ಲಿ ನೀವು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಅನ್ನು ಆಯ್ಕೆ ಮಾಡಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ (post office public provident fund scheme)

ದೀರ್ಘಕಾಲಿಕ ಹೂಡಿಕೆ ಮೂಲಕ ನೀವು ಹೆಚ್ಚಿನ ರಿಟರ್ನ್ ಅನ್ನು ಪಡೆದುಕೊಳ್ಳುವಂತಹ ಯೋಜನೆಯನ್ನು ಹೊಂದಿದ್ದರೆ ಖಂಡಿತವಾಗಿ ಪೋಸ್ಟ್ ಆಫೀಸ್ನ ಪ್ರಾವಿಡೆಂಟ್ ಫಂಡ್ ಯೋಜನೆ ನಿಮಗೆ ಹೇಳಿ ಮಾಡಿಸಿದ ಯೋಜನೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ನೀವು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯನ್ನು ಪ್ರಾರಂಭ ಮಾಡುವುದಕ್ಕೆ ನಿಮಗೆ 18 ವರ್ಷಕ್ಕಿಂತ ಮೇಲಿನ ವಯಸ್ಸು ಆಗಿರಬೇಕು ಹಾಗೂ ಪ್ರಮುಖವಾಗಿ ನೀವು ಭಾರತೀಯ ನಾಗರಿಕರಾಗಿರಬೇಕು. ನೂರು ರೂಪಾಯಿಗಳಿಂದ ಪ್ರಾರಂಭಿಸಿ ವರ್ಷಕ್ಕೆ 500 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಕೂಡ ನೀವು ಈ ಖಾತೆಯನ್ನು ಆಕ್ಟಿವ್ ಆಗಿಡಬಹುದು.

ಪ್ರಾವಿಡೆಂಟ್ ಫಂಡ್ ಯೋಜನೆಯ ನಿಯಮಗಳು.

  • ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ಅಡಿಯಲ್ಲಿ ವರ್ಷಕ್ಕೆ ಒಮ್ಮೆ ಅಥವಾ 12 ತಿಂಗಳಿಗೆ ಪ್ರತಿ ತಿಂಗಳಿನಂತೆ ಕೂಡ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಇನ್ನು ನಿಮಗೆ 80 ಸಿ ತೆರಿಗೆ ಕಾಯ್ದೆ ಅಡಿ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ಕನಿಷ್ಠ 1.5 ರೂಪಾಯಿಗಳ ಹೂಡಿಕೆಯ ಮೇಲೆ ನೀಡಲಾಗುತ್ತದೆ.
  • ನೀವು ಮಾಡುವಂತಹ ಹೂಡಿಕೆ ಮೇಲೆ ನಿಮ್ಮ ಲಾಭವನ್ನು ನಿರ್ಧಾರ ಮಾಡಲಾಗುತ್ತದೆ ಆದರೆ ಈ ಯೋಜನೆ ಅಡಿಯಲ್ಲಿ ನಿಮಗೆ 7.1 ಪ್ರತಿಶತ ಬಡ್ಡಿಯನ್ನು ನಿಗದಿಪಡಿಸಲಾಗುತ್ತದೆ
  • 15 ವರ್ಷಗಳವರೆಗೆ ಮೆಚುರಿಟಿ ಆಗುವವರೆಗೂ ಕೂಡ ನೀವು ಹಣವನ್ನು ತೆಗೆಯದೆ ಹೋದಲ್ಲಿ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವಂತಹ ಅವಕಾಶವಿದ್ದು 15 ವರ್ಷಗಳ ನಂತರ ಕೂಡ ನಿಮ್ಮ ಹೂಡಿಕೆಯನ್ನು ಮುಂದುವರಿಸಬಹುದಾಗಿದೆ.

ಉದಾಹರಣೆಗೆ ನೀವು 1.5 ಲಕ್ಷ ರೂಪಾಯ್ ಹಣವನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ಅಡಿಯಲ್ಲಿ 15 ವರ್ಷಗಳಿಗೆ ಹೂಡಿಕೆ ಮಾಡಿದರೆ ಹಾಗೂ ಅದಾದ ನಂತರ ಮತ್ತೆ 15 ವರ್ಷಗಳಿಗೆ ಅಂದರೆ ಒಟ್ಟಾರೆಯಾಗಿ 30 ವರ್ಷಗಳಿಗೆ ಹೂಡಿಕೆ ಮಾಡಿದರೆ 7.1% ಬಡ್ಡಿದರದ ಆಧಾರದ ಮೇಲೆ ಒಟ್ಟು 30 ವರ್ಷಗಳ ಹೂಡಿಕೆಯ ಸಮಯದ ನಂತರ ನೀವು 1.54 ಕೋಟಿ ರೂಪಾಯಿಗಳ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.

Post office Scheme