IPL 2024: ಈ 5 ಆಟಗಾರರು ಆರ್ಸಿಬಿಯಲ್ಲಿ ಆಡಿರೋದು ಯಾರಿಗೂ ಗೊತ್ತಿಲ್ಲ! ಪಾಕಿಸ್ತಾನದ ಆಟಗಾರ ಕೂಡ ಇದ್ದಾನೆ!

IPL 2024: 2008 ರಿಂದ ಐಪಿಎಲ್ ಪ್ರಾರಂಭವಾಗಿದ್ದು 2008ರಿಂದ ಕೂಡ ಐಪಿಎಲ್ ನಲ್ಲಿ ನಮ್ಮ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಟವಾಡುತ್ತಿದೆ. ಆದರೆ ಅಭಿಮಾನಿಗಳಿಗೆ ಇವತ್ತು ಕೂಡ ನಮ್ಮ ತಂಡ ಕಪ್ ಗೆದ್ದಿಲ್ಲ ಎನ್ನುವಂತಹ ಬೇಸರ ಖಂಡಿತವಾಗಿ ಇದೆ. ಕಪ್ ಗೆಲ್ಲಲೇ ಬಿಡಲಿ ನಮ್ಮ ಆರ್‌ಸಿಬಿ ತಂಡ ಯಾವತ್ತೂ ಕೂಡ ಟಾಪ್ ಅನ್ನೋದೇ ಅಭಿಮಾನಿಗಳ ಅಭಿಪ್ರಾಯ. ಇವತ್ತಿನ ಈ ಲೇಖನದ ಮೂಲಕ ಆರ್‌ಸಿಬಿ ಅಭಿಮಾನಿಗಳ ಆರ್ಸಿಬಿ ಬಗ್ಗೆ ಇರುವಂತಹ ಜ್ಞಾನದ ಬಗ್ಗೆ ಸ್ವಲ್ಪಮಟ್ಟಿಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿರುವಂತಹ ಕೆಲವೊಂದು ಆಟಗಾರರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಆರ್ಸಿಬಿ ಅಭಿಮಾನಿಗಳು ಕೂಡ ತಿಳಿಯದೆ ಇರುವಂತಹ ಆರ್ಸಿಬಿ ಪರವಾಗಿ ಆಡಿರುವಂತಹ 5 ಟಾಪ್ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.

ರ್ಸಿಬಿ ಪರವಾಗಿ ಆಡಿರುವಂತಹ ನೀವು ತಿಳಿಯದೆ ಇರುವ ಐದು ಆಟಗಾರರು!

ಶಿವನಾರಾಯಣ್ ಚಂದ್ರ ಪಾಲ್: ವೆಸ್ಟ್ ಇಂಡೀಸ್ ಪರವಾಗಿ 20,000ಕ್ಕೂ ಅಧಿಕ ರನ್ನು ಬಾರಿಸಿರುವಂತಹ ಶಿವನಾರಾಯಣ ಚಂದ್ರ ಪಾಲ್ ಟಿ20 ನಲ್ಲಿ ಕೂಡ ತಮ್ಮದಾಗಿರುವಂತಹ ಚಾಪನ್ನು ಹೊಂದಿದ್ದಾರೆ. ವಿಶೇಷ ವ್ಯಾಟಿಂಗ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವಂತಹ ಇವ್ರು ಕೂಡ ಆರ್ಸಿಬಿ ತಂಡದ ಪರವಾಗಿ ಆಡಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇವರನ್ನು 2008ರಲ್ಲಿ ಆಕ್ಷನ್ ಸಂದರ್ಭದಲ್ಲಿ ಖರೀದಿ ಮಾಡಿದ್ದು. ಇವರಿಗೆ ಅವಕಾಶ ನೀಡಿದಾಗ ಆರ್ಸಿಬಿ ಪರವಾಗಿ ಮೂರು ಪಂದ್ಯಗಳಿಂದ ಕೇವಲ 25 ರನ್ನುಗಳನ್ನು ಮಾತ್ರ ಗಳಿಸಲು ಯಶಸ್ವಿಯಾದರು. ಹೀಗಾಗಿ ಆರ್ಸಿಬಿ ತಂಡ ಇವರನ್ನು ಮುಂದಿನ ಬಾರಿ ತಂಡದಿಂದ ಕೈಬಿಡುತ್ತದೆ. ಅದಾದ ನಂತರ ಶಿವನಾರಾಯಣ ಚಂದ್ರ ಪಾಲ್ ಯಾವತ್ತೂ ಕೂಡ ಐಪಿಎಲ್ ನಲ್ಲಿ ಆಡೋದಿಕ್ಕೆ ಹೋಗಲಿಲ್ಲ.

ಇಯೋನ್ ಮಾರ್ಗನ್: 2010ರ ಹರಾಜು ಪ್ರಕ್ರಿಯೆಯಲ್ಲಿ ಇವರನ್ನು ಖರೀದಿಸಲಾಯಿತು. ಆದರೆ ಇವರು ಕೂಡ ನಿರೀಕ್ಷೆಗೆ ತಕ್ಕಂತೆ ತಂಡದ ಪರವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸುವುದಕ್ಕೆ ವಿಫಲರಾಗುತ್ತಾರೆ. ಆರು ಪಂದ್ಯಗಳಲ್ಲಿ ಕೇವಲ 35 ರನ್ಗಳನ್ನು ಗಳಿಸುವುದಕ್ಕೆ ಮಾತ್ರ ಯಶಸ್ವಿಯಾಗುತ್ತಾರೆ.

ನಥನ್ ಬ್ರೇಕೆನ್: ಆಸ್ಟ್ರೇಲಿಯಾ ತಂಡದ ಪರವಾಗಿ ನಿಗದಿತ ಓವರ್ ಗಳ ಪಂದ್ಯದಲ್ಲಿ ಪ್ರಮುಖ ಬೌಲರ್ ಆಗಿ ಇವರು ಕಾಣಿಸಿಕೊಂಡಿದ್ದರು. ಇವರನ್ನು 2008ರ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ತಂಡ ಪಡೆದುಕೊಳ್ಳುತ್ತದೆ ಆದರೆ ಸಾಧ್ಯವಾಗಲಿಲ್ಲ. 2008ರಲ್ಲಿ ಏಕದಿನ ಫಾರ್ಮ್ಯಾಟ್ ನ ನಂಬರ್ ಒನ್ ಬೌಲರ್ ಆಗಿದ್ದರೂ ಕೂಡ ಆರ್ಸಿಬಿ ತಂಡ ಇವರಿಗೆ ಆಡೋದಕ್ಕೆ ಚಾನ್ಸ್ ನೀಡಲಿಲ್ಲ. 2010ರ ವರೆಗೂ ಕೂಡ ಇವರು ತಂಡದಲ್ಲಿದ್ರು.

ಸ್ಟೀವ್ ಸ್ಮಿತ್: 2010ರಲ್ಲಿ ಯುವ ಆಸ್ಟ್ರೇಲಿಯಾ ಕ್ರಿಕೆಟರ್ ಸ್ಟೀವ್ ಸ್ಮಿತ್ ಆರ್‌ಸಿಬಿ ತಂಡದ ಪರವಾಗಿ ಆಯ್ಕೆಯಾಗ್ತಾರೆ ಆದರೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವುದಕ್ಕೆ ಅವರಿಗೆ ಅವಕಾಶವನ್ನು ನೀಡಲಾಗುವುದಿಲ್ಲ. ಅದಾದ ನಂತರ ಕೊಚ್ಚಿ ನಂತರ ಪುಣೆ ಹಾಗೂ ರಾಜಸ್ಥಾನ್ ತಂಡದ ಪರವಾಗಿ ಕೂಡ ಆಡಿರುವಂತಹ ಅನುಭವವನ್ನು ಹೊಂದಿದ್ದಾರೆ.

ಮಿಸ್ಬಾ ಉಲ್ ಹಕ್ : ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಆಗಿರುವಂತಹ ಮಿಸ್ಬಾ ಆರಂಭಿಕ ಐಪಿಎಲ್ ಅಲ್ಲೇ ಆರ್‌ಸಿಬಿ ತಂಡದ ಪರವಾಗಿ ಆಡುತ್ತಾರೆ. ಎಂಟು ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 117 ರನ್ನುಗಳು ಮಾತ್ರ. ಇವರು ಕೂಡ ತಂಡದಿಂದ ಡ್ರಾಪ್ ಆಗ್ತಾರೆ.

IPL 2024