Mangal Gochar 2024: ಮಂಗಳನ ಗೋಚಾರ ಫಲ; ಇಂತವರು ಶ್ರೀಮಂತರಾಗದೇ ಇರಲು ಸಾಧ್ಯವೇ ಇಲ್ಲ!

Mangal Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಗ್ರಹ ಇನ್ನೊಂದು ರಾಶಿಯನ್ನು ಪ್ರವೇಶಿಸಿದಾಗ ಅದು ಬೇರೆ ಬೇರೆ ರಾಶಿಯವರ ಮೇಲೆ ವೈವಿಧ್ಯಮಯವಾಗಿ ಪರಿಣಾಮ ಬೀರುತ್ತದೆ. ಜೀವನ ಒಂದನೇ ತಾರೀಕಿನಂದು ಮಂಗಳ ಗ್ರಹ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟದ ಪರಿಣಾಮಗಳು ಸಿಗಲಿದ್ದು ರಾಜಯೋಗವನ್ನು ಅನುಭವಿಸುವಂತಹ ಅವಕಾಶ ಸಿಗಲಿದೆ. ಆ ರಾಶಿಯವರು ಯಾರೆಲ್ಲ ಎನ್ನುವುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ ಬನ್ನಿ.

ಮೇಷ ರಾಶಿ(Aries)

ಜೂನ್ ಒಂದನೇ ತಾರೀಕಿನಂದು ಮಂಗಳ ಪ್ರವೇಶಿಸುತ್ತಿರುವುದು ಮೇಷ ರಾಶಿಯಲ್ಲಿಯೇ. ಹೀಗಾಗಿ ಮೇಷ ರಾಶಿಯವರಿಗೆ ತಪ್ಪದೆ ಈ ಪರಿಚಲನೆ ಎನ್ನುವುದು ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದಲ್ಲಿ ಮಂಗಳ ಒಂದು ವರ್ಷದ ನಂತರ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರ ಧೈರ್ಯ ಹೆಚ್ಚಾಗುವುದರಿಂದಾಗಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಯಶಸ್ಸು ದೊರಕಲಿದೆ. ಸಂಪತ್ತಿನ ಹೆಚ್ಚಳದೊಂದಿಗೆ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆ ಕಾಣಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಇರುವವರು ಕೈತುಂಬ ಲಾಭ ಸಂಪಾದನೆ ಮಾಡಲಿದ್ದಾರೆ. ಆಸ್ತಿ ಹಾಗು ವಾಹನಗಳನ್ನು ಖರೀದಿ ಮಾಡುವಂತಹ ಯೋಗ ಮೇಷ ರಾಶಿಯವರಿಗೆ ಸಿಗಲಿದೆ. ಮದುವೆ ಆಗದೆ ಉಳಿದುಕೊಂಡಿರುವಂತಹ ಸಿಂಗಲ್ ಗಳಿಗೆ ಮದುವೆ ಆಗುವಂತಹ ಯೋಗ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಮೇಷ ರಾಶಿಯವರಿಗೆ ಸಾಕಷ್ಟು ಸಮಯಗಳ ನಂತರ ನೆಮ್ಮದಿ ಕಾಣಲಿದೆ.

ಧನು ರಾಶಿ(Sagittarius)

ಮದುವೆಯಾಗಿ ಸಾಕಷ್ಟು ಸಮಯಗಳಿಂದ ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವ ಧನುರಾಶಿಯವರಿಗೆ ಶುಭ ಲಾಭ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಧನುರಾಶಿಯವರು ಪ್ರಗತಿಯನ್ನು ಸಾಧಿಸಲಿದ್ದಾರೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಲು ಹೊರಟಿರುವಂತಹ ಧನು ರಾಶಿಯ ವಿದ್ಯಾರ್ಥಿಗಳು ಗುಡ್ ನ್ಯೂಸ್ ಪಡೆಯಲಿದ್ದಾರೆ. ಧನು ರಾಶಿಯವರ ಜೀವನದಲ್ಲಿ ಕಷ್ಟಗಳು ದೂರವಾಗಿ ಸುಖದ ದಿನಗಳು ಕಾಣಿಸಿಕೊಳ್ಳಲಿವೆ.

ಮೀನ ರಾಶಿ(Pisces)

ಮೀನ ರಾಶಿಯವರಿಗೆ ಅನಿರೀಕ್ಷಿತವಾಗಿ ಧನ ಲಾಭವಾಗಲಿದೆ. ಈ ಸಮಯದಲ್ಲಿ ಮೀನ ರಾಶಿಯವರ ಪ್ರಭಾವ ಯಾವ ರೀತಿಯಲ್ಲಿ ಇದೆ ಎಂದರೆ ತಮ್ಮ ಮಾತಿನ ಮೂಲಕವೇ ಅವರು ಸಾಕಷ್ಟು ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಲಿದ್ದಾರೆ. ಜನರ ಮೇಲೆ ಕೂಡ ವಿಶೇಷ ಪ್ರಭಾವವನ್ನು ಬೀರುವುದರಿಂದ ಜನರು ಕೂಡ ಇವರನ್ನು ಇಷ್ಟಪಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಕಳೆದುಹೋಗಿರುವ ಅಥವಾ ಸಾಕಷ್ಟು ಸಮಯಗಳಿಂದ ನಿಮ್ಮ ಕೈಗೆ ಸಿಗಬೇಕಾಗಿರುವಂತಹ ಹಣ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಆಗಲಿದೆ. ಯಾವುದೇ ಕೆಲಸವನ್ನು ಮಾಡಿ ನಿಮ್ಮ ಕುಟುಂಬ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಸಾಕಷ್ಟು ಸಮಯಗಳಿಂದ ಖರೀದಿಸಬೇಕು ಎನ್ನುವಂತಹ ದುಬಾರಿ ವಸ್ತುಗಳನ್ನು ಖರೀದಿ ಮಾಡುವಂತಹ ಯೋಗ ಕೂಡ ಕೂಡಿ ಬರಲಿದೆ. ದೇವರ ಅನುಗ್ರಹ ನಿಮ್ಮ ಮೇಲೆ ಇರಲಿದೆ.

12 zodiac signsAstrologyHoroscopeMangal Gochar 2024ಜ್ಯೋತಿಷ್ಯಾಸ್ತ್ರ