Ratan Tata: ಇವರೇ ನೋಡಿ ರತನ್ ಟಾಟಾ ರವರ ಉತ್ತರಾಧಿಕಾರಿ; ಇದ್ದಕ್ಕಿದ್ ಹಾಗೆ ಪ್ರತ್ಯಕ್ಷ ಆದ ಈ ಮಹಿಳೆ ಗೊತ್ತಾ?

Ratan Tata: ಭಾರತದ ಇತಿಹಾಸದಲ್ಲಿ ಭಾರತ ದೇಶದ ಬೆಳವಣಿಗೆಗೆ ಸಾಕಷ್ಟು ವ್ಯಕ್ತಿಗಳು ಸಂಸ್ಥೆಗಳು ಕಾರಣವಾಗಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರಲ್ಲಿ ಟಾಟಾ ಸಂಸ್ಥೆ ಕೂಡ ಒಂದು ಎಂದು ಯಾವುದೇ ಅನುಮಾನವಿಲ್ಲದೆ ಜಂಶೆಡ್ ಜಿ ಟಾಟಾ ರವರ ಕಾಲದಿಂದ ಪ್ರಾರಂಭವಾಗಿ ರತನ್ ಟಾಟಾ ಅವರ ಕಾಲದವರೆಗೂ ಕೂಡ ಟಾಟಾ ಸಂಸ್ಥೆಯಿಂದ ಭಾರತ ದೇಶಕ್ಕೆ ಸಾಕಷ್ಟು ರೀತಿಯಲ್ಲಿ ಲಾಭ ಆಗಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ರತನ್ ಟಾಟ ಹಾಗೂ ಕುಟುಂಬಸ್ಥರು ಬೇರೆ ಶ್ರೀಮಂತರ ರೀತಿಯಲ್ಲಿ ಕೇವಲ ಹಣವನ್ನು ಸಂಪಾದನೆ ಮಾಡುವುದು ಮಾತ್ರ ಗುರಿಯಾಗಿಲ್ಲ.

ಅದನ್ನ ಜನರ ಉದ್ಧಾರಕ್ಕಾಗಿ ಜನರ ನಡುವೆ ಬೇರೆ ಬೇರೆ ರೀತಿಯಲ್ಲಿ ವಿನಯೋಗಿಸುವುದನ್ನ ಮೊದಲಿನಿಂದಲೂ ಕೂಡ ಟಾಟಾ ಕುಟುಂಬಸ್ಥರು ಮಾಡಿಕೊಂಡು ಬಂದಿದ್ದಾರೆ. ಅದೇ ಕಾರಣಕ್ಕಾಗಿ ದೇಶದ ಅಥವಾ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟಾಟಾ ರವರ ಹೆಸರು ಕಂಡು ಬರುವುದಿಲ್ಲ. ಯಾಕೆಂದ್ರೆ ಟಾಟಾ ಸಂಸ್ಥೆಯಿಂದ ಬರುವಂತಹ ಆದಾಯದ 65 ಪ್ರತಿಶತಕ್ಕಿಂತಲೂ ಹೆಚ್ಚಿನ ಆದಾಯವನ್ನು ಟಾಟಾ ಟ್ರಸ್ಟ್ ಸಂಸ್ಥೆಯ ಮೂಲಕ ಬೇರೆ ಬೇರೆ ಒಳ್ಳೆಯ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.

ರತನ್ ಟಾಟಾ ಕೂಡ ಸಾಮಾನ್ಯವಾಗಿ ನೀವು ಗಮನಿಸಿರಬಹುದು ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಆಸ್ತಿಯನ್ನು ಯಾವತ್ತೂ ಕೂಡ ಅವರು ಹೊಂದಿರುವುದಿಲ್ಲ. ಅದರಲ್ಲೂ ವಿಶೇಷವಾಗಿ ಯಾವುದೇ ರೀತಿ ಐಷಾರಾಮಿ ಕಾರುಗಳನ್ನು ಅವರು ಹೆಚ್ಚಾಗಿ ಹೊಂದಿಲ್ಲ. ಇಂತಹ ನಿಸ್ವಾರ್ಥ ಮನೋಭಾವವನ್ನು ಹೊಂದಿರುವ ರತನ್ ಟಾಟಾ ಅವರ ಸ್ಥಾನವನ್ನು ಟಾಟಾ ಗ್ರೂಪ್ ಆಫ್ ಕಂಪನಿಯಲ್ಲಿ ತುಂಬುವಂತಹ ಮುಂದಿನ ವ್ಯಕ್ತಿ ಯಾರು ಎನ್ನುವುದಾಗಿ ಪ್ರತಿಯೊಬ್ಬರು ಕೂಡ ತಲೆಕೆಡಿಸಿಕೊಂಡಿದ್ದರು. ಆದರೆ ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮಾಯಾ ಟಾಟಾ ಎನ್ನುವಂತಹ ಅವರ ಸೋದರ ಸೊಸೆ ಈ ಜವಾಬ್ದಾರಿಯನ್ನು ಪಡೆದುಕೊಳ್ಳಲಿದ್ದಾರೆ ಎನ್ನುವದಾಗಿ ತಿಳಿದು ಬಂದಿದೆ. ಬನ್ನಿ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಟಾಟಾ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿಯುವರೇ ನೋಡಿ!

ಮಾಯಾ ಟಾಟಾ 34 ವರ್ಷದವರಾಗಿದ್ದು ರತನ್ ಟಾಟಾ ರವರ ಸೋದರ ಸಂಬಂಧಿಯಾಗಿರುವ ಆಲು ಮಿಸ್ತ್ರಿ ಹಾಗೂ ನೋಯಲ್ ಟಾಟಾ ರವರ ಮಗಳಾಗಿದ್ದಾರೆ. ಈಗಾಗಲೇ ಟಾಟಾ ಮೆಡಿಕಲ್ ನ ಸೆಂಟ್ರಲ್ ಟ್ರಸ್ಟ್ ನಲ್ಲಿ ಮಾಯಾ ಟಾಟಾ ರವರು ಬೋರ್ಡ್ ನಲ್ಲಿ ತಮ್ಮ ಮಹತ್ವವಾದ ಸೇವೆಯನ್ನು ಸಲ್ಲಿಸಿ ಎಲ್ಲರ ಮನೆಗೆದ್ದಿದ್ದಾರೆ. ತನ್ನ ಒಡಹುಟ್ಟಿದವರಲ್ಲಿ ಅತ್ಯಂತ ಕಿರಿಯವರಾಗಿದ್ರು ಕೂಡ ಮಾಯಾ ಟಾಟಾ ಸಾಕಷ್ಟು ಮಾತ್ರವಾದ ಸಾಧನೆಯನ್ನು ಟಾಟಾ ಗ್ರೂಪ್ನಲ್ಲಿ ಮಾಡಿದ್ದಾರೆ.

ಟಾಟಾ ಸಂಸ್ಥೆಯಲ್ಲಿ ಅವರ ಮೊದಲ ಕೆಲಸ ಪ್ರಾರಂಭವಾಗಿದ್ದು ಟಾಟಾ ಕ್ಯಾಪಿಟಲ್ ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುವ ಮೂಲಕ. ನಂತರ ಟಾಟಾ ಡಿಜಿಟಲ್ ನಲ್ಲಿ ತಮ್ಮ ಗಮನವನ್ನು ಬದಲಾಯಿಸುತ್ತಾರೆ. ಸದ್ಯಕ್ಕೆ ಟಾಟಾ ಮೆಡಿಕಲ್ ಟ್ರಸ್ಟ್ ನಲ್ಲಿ ಬೋರ್ಡ್ ನ ಆರು ಸದಸ್ಯರಲ್ಲಿ ಮಾಯಾ ಟಾಟಾ ಕೂಡ ಒಬ್ಬರಾಗಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ಟಾಟಾ ಸಂಸ್ಥೆಯ ಉತ್ತರಾಧಿಕಾರವನ್ನು ನೀಡುವಂತಹ ಮಾತುಕತೆ ನಡೆಯುತ್ತಿದ್ದು ರತನ್ ಟಾಟಾ ರವರ ನಿರೀಕ್ಷೆಗೆ ಯಾವ ರೀತಿಯಲ್ಲಿ ಇವರು ಕಾರ್ಯ ನಿರ್ವಹಿಸಿ ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ratan tata