Mind Set: ಬೇಡದ ಯೋಚನೆಗಳು ನಿಮ್ಮ ತಲೆತುಂಬ್ಕೊಂಡಿದ್ಯಾ? ಹೀಗ್ ಮಾಡಿ ಸಾಕು ಮನಸ್ಸು ಕಂಟ್ರೋಲ್ ಆಗತ್ತೆ!

Mind Set: ಇಂದಿನ ಯುಗದಲ್ಲಿ ವಿಶೇಷವಾಗಿ ಯುವ ಜನತೆಯ ಮನಸ್ಸು ಅನ್ನೋದು ಮಂಗನ ರೀತಿಯಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿದಂತೆ ಚಂಚಲವಾಗಿರುತ್ತದೆ. ಇದು ಯುವ ಜನತೆಗೆ ಮಾನಸಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ನೀಡುತ್ತದೆ. ಈ ರೀತಿ ಅನಗತ್ಯ ಆಲೋಚನೆಗಳು ನಮ್ಮ ಮನಸ್ಸಿನಲ್ಲಿ ಬಾರದೆ ಇರೋ ಹಾಗೆ ಮಾಡುವುದರಿಂದ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇವುಗಳನ್ನು ಕಂಟ್ರೋಲ್ ಮಾಡೋದಕ್ಕೆ ಯಾವೆಲ್ಲ ಅಭ್ಯಾಸಗಳನ್ನು ಮಾಡಬೇಕು ಅನ್ನೋದನ್ನ ಬನ್ನಿ ತಿಳ್ಕೊಳೋಣ.

ಅನಗತ್ಯ ಆಲೋಚನೆಗಳನ್ನು ಕಂಟ್ರೋಲ್ ಮಾಡೋದಕ್ಕೆ ಇಲ್ಲಿದೆ ಉಪಾಯ!

  • ಸಾಕಷ್ಟು ಬಾರಿ ನಮ್ಮ ಮನಸ್ಸು ಪ್ರಸ್ತುತ ಕ್ಷಣದಲ್ಲಿ ಇರುವುದಿಲ್ಲ. ಮುಂದೆ ಏನು ಮಾಡಬೇಕು ಅನ್ನೋದರ ಬಗ್ಗೆ ಯೋಚನೆ ಮಾಡುತ್ತಿರುತ್ತದೆ. ಆ ಸಂದರ್ಭದಲ್ಲಿ ನೀವು ಮಾಡಬೇಕಾದ ಮುಖ್ಯ ಕೆಲಸ ಮನಸ್ಸನ್ನು ಪ್ರಸ್ತುತ ಕ್ಷಣಕ್ಕೆ ವಾಪಸ್ ಕರೆ ತರುವುದು. ಅದಕ್ಕಾಗಿ ದೈನಂದಿನ ಕಾರ್ಯಗಳು ವಾಕಿಂಗ್ ಅಥವಾ ನಿಮ್ಮನ್ನು ನೀವು ಶುಚಿ ಗಳಿಸುವುದು ಅಥವಾ ಯಾವುದೇ ರೀತಿಯ ಪ್ರಕ್ರಿಯೆನ ಮಾಡಬಹುದಾಗಿದೆ.
  • ಮೊದಲಿಗೆ ನೀವು ಭೂಮಿಗೆ ಪಾದ ಸ್ಪರ್ಶವನ್ನು ಮಾಡುವ ಅಭ್ಯಾಸವನ್ನು ಮಾಡಿ. ನಂತರ ಉಸಿರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಿ. ನೀವು ಇರೋ ಸ್ಥಳ ಅತ್ಯಂತ ಸುರಕ್ಷತೆ ಎಂಬುದನ್ನ ನೀವು ಮನಸ್ಸಿನಲ್ಲಿ ಭಾವಿಸಿ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಮತ್ತೆ ಸಕಾರಾತ್ಮಕತೆ ಹೆಚ್ಚುತ್ತದೆ.
  • ನಿಮ್ಮ ಐದು ಸೆನ್ಸಸ್ ಗಳನ್ನು ಅನುಭವಿಸುವಂತಹ ಕೆಲಸವನ್ನು ಮಾಡಿ. ಅಂದರೆ ನೋಡಬಹುದಾದ ಐದು ವಿಷಯಗಳು, ಸ್ಪರಿಶಿಸಬಹುದಾದ ನಾಲ್ಕು ವಿಷಯಗಳು, ಕೇಳಬಹುದಾದ ಮೂರು ವಿಷಯಗಳು, ವಾಸನೆ ನೋಡಬಹುದಾದ ಎರಡು ವಿಷಯಗಳು ಹಾಗೂ ರುಚಿಸಬಹುದಾದ ಒಂದು ವಸ್ತು. ಈ ರೀತಿಯಲ್ಲಿ ನಿಮ್ಮ ಐದು ಇಂದ್ರಿಯಗಳನ್ನು ಕೆಲಸಕ್ಕೆ ಪ್ರಾರಂಭ ಮಾಡುವಂತಹ ಅಭ್ಯಾಸವನ್ನು ಮಾಡಬಹುದಾಗಿದೆ.
  • ದೈನಂದಿನ ದಿನಚರಿಯ ಬಗ್ಗೆ ನೀವು ಗಮನ ವಹಿಸುವುದು ಅತ್ಯಂತ ಉತ್ತಮವಾಗಿರುತ್ತದೆ ಹಾಗೂ ಇಂತಹ ಬೇಡದ ಯೋಚನೆಗಳಿಗೆ ಆಲೋಚನೆ ಮಾಡಲು ಸಮಯವನ್ನು ನೀಡದೆ ಇರುವುದು ಕೂಡ ಉತ್ತಮವಾಗಿದೆ. ಇದರ ಜೊತೆಗೆ ನಿಮ್ಮ ಆಲೋಚನೆಗಳನ್ನು ಕಾಗದದ ಮೇಲೆ ಬರೆದಿರುವುದು ಅವುಗಳನ್ನು ಮರೆತು ಬಿಡುವುದಕ್ಕೆ ಅಥವಾ ಕಂಟ್ರೋಲ್ ಮಾಡುವುದಕ್ಕೆ ನಿಮಗೆ ಸಹಾಯ ಮಾಡುತ್ತದೆ.
  • ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ ಮನಸ್ಸನ್ನು ಒಂದೇ ಕಡೆಗೆ ಕೇಂದ್ರೀಕೃತವಾಗಿರಿಸಲು ಯಾವುದಾದರೂ ಕ್ರಿಯೆಯನ್ನು ಪ್ರಾಕ್ಟೀಸ್ ಮಾಡಬೇಕು ಅಂತ ಇದ್ರೆ, ಖಂಡಿತವಾಗಿ ಧ್ಯಾನ ಮಾಡುವುದು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಎಲ್ಲಾ ವಿಚಾರಗಳನ್ನ ಕಂಟ್ರೋಲ್ ಮಾಡಬಹುದಾಗಿದೆ. ಆರಂಭದಲ್ಲಿ ಕಷ್ಟ ಎನಿಸಬಹುದು ಆದರೆ ಅಭ್ಯಾಸ ಮಾಡುತ್ತಾ ಹೋದಂತೆ ಅದೇ ಸುಲಭವಾಗಿ ಆಗುತ್ತದೆ. ನೀವೆಷ್ಟು ಪ್ರಕ್ರಿಯೆಗಳನ್ನು ನೀವು ನಿಮ್ಮ ಮನಸ್ಸನ್ನು ಕಂಟ್ರೋಲ್ ಮಾಡುವುದಕ್ಕೆ ಅಭ್ಯಾಸ ಮಾಡಿದರೆ ಒಳ್ಳೆಯದು.
Mind Set