Shani Transit: 200 ವರ್ಷಗಳ ನಂತರ ಶನಿಯ ಈ ಸಂಚಾರದಿಂದ ಅದೃಷ್ಟವನ್ನು ಸಂಪಾದಿಸಲಿರುವ ಮೂರು ರಾಶಿಯವರು ಯಾರೆಲ್ಲಾ ಗೊತ್ತಾ?

Shani Transit: ನವಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಚಲಿಸುವಂತಹ ಗ್ರಹ ಅಂದ್ರೆ ಅದು ಶನಿ. ಒಂದು ರಾಶಿಯಲ್ಲಿ ಎರಡುವರೆ ವರ್ಷಗಳ ಕಾಲ ಆತ ಇರಲಿದ್ದಾನೆ. ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆತನ ಚಲನೆ ಅತ್ಯಂತ ನಿಧಾನವಾಗಿ ಇರುವ ಕಾರಣದಿಂದಾಗಿ ಒಂದು ಚಿಕ್ಕ ಬದಲಾವಣೆ ಕೂಡ ಸಾಕಷ್ಟು ಪರಿಣಾಮವನ್ನು ಬೀರಬಹುದಾಗಿದೆ. ಇದೇ ಸಂದರ್ಭದಲ್ಲಿ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರದಿಂದ ಈ ಮೂರು ರಾಶಿಯವರಿಗೆ ಸಾಕಷ್ಟು ಲಾಭ ಸಿಗಲಿದೆ. ಶನಿಯ ಈ ವಿಶೇಷವಾದ ಯೋಗದ ಲಾಭವನ್ನು ಪಡೆದುಕೊಳ್ಳಲು ಇರುವಂತಹ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ(Aries)

ಈ ಸಂದರ್ಭದಲ್ಲಿ ಶನಿಯ ಪ್ರಭಾವದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಧನಾಗಮನವಾಗಲಿದೆ. ಸಾಕಷ್ಟು ರೀತಿಯಲ್ಲಿ ದೊಡ್ಡಮಟ್ಟದ ಆರ್ಥಿಕ ಧನ ಲಾಭ ಉಂಟಾಗಲಿದೆ. ವ್ಯಾಪಾರ ಮಾಡುವಂತಹ ಮೇಷ ರಾಶಿಯವರಿಗೆ ಲಾಭ ಕಟ್ಟಿಟ್ಟ ಬುತ್ತಿಯಾಗಿದ್ದು ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಹೆಚ್ಚುವಂತಹ ಆತ್ಮವಿಶ್ವಾಸದಿಂದಾಗಿ ನೀವು ಯಾವುದೇ ಕೆಲಸವನ್ನು ಕೂಡ ಬೇಗ ಮಾಡಿ ಮುಗಿಸಬಹುದಾಗಿದೆ. ಜೀವನದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳಿಂದ ನೀವು ಹೊರಬರಲಿದ್ದೀರಿ. ಕೆಲಸದಲ್ಲಿ ಸಂಬಳದ ಹೆಚ್ಚಳ ಹಾಗೂ ಪ್ರಮೋಷನ್ ಕಂಡು ಬರಲಿದೆ.

ತುಲಾ ರಾಶಿ (Libra)

ತಂದೆಯ ಜೊತೆಗೆ ಇರುವಂತಹ ತುಲಾ ರಾಶಿಯವರ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ. ಮಕ್ಕಳಿಂದ ಗುಡ್ ನ್ಯೂಸ್ ಸಿಗಲಿದೆ. ಸಮಾಜದಲ್ಲಿ ತುಲಾ ರಾಶಿಯವರ ಗೌರವ ಅಪರಿಮಿತವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಪ್ರಾಫಿಟ್ ಪಡೆದುಕೊಳ್ಳಲಿದ್ದಾರೆ ಹಾಗೂ ಉದ್ಯೋಗದಲ್ಲಿ ಇರುವಂತಹ ತುಲಾ ರಾಶಿಯವರು ಈ ಸಂದರ್ಭದಲ್ಲಿ ಪ್ರಾಫಿಟ್ ಗಾಗಿ ಪ್ರಯತ್ನ ಪಡಲಿದ್ದಾರೆ. ಮದುವೆಯಾಗಿ ಸಾಕಷ್ಟು ಸಮಯ ಕಳೆದಿರುವಂತಹ ದಂಪತಿಗಳಿಗೆ ಸಂತಾನ ಭಾಗ್ಯ ಕೂಡ ದೊರೆಯುತ್ತದೆ. ತುಲಾ ರಾಶಿಯವರು ತಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ವಿಶೇಷವಾದ ಸಾಕಷ್ಟು ಘಟನೆಗಳ ಸಾಕ್ಷಿಕರಿಸಲಿದ್ದೀರಿ.

ಕುಂಭ ರಾಶಿ(Aquarius)

ಈ ಸಂದರ್ಭದಲ್ಲಿ ಕುಂಭ ರಾಶಿಯವರ ವ್ಯಕ್ತಿತ್ವದಲ್ಲಿ ಸಾಕಷ್ಟು ಪಾಸಿಟಿವ್ ಬದಲಾವಣೆಗಳು ಕಂಡು ಬರಲಿವೆ. ನೀವು ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಖಂಡಿತವಾಗಿ ನಿಮ್ಮ ಪರವಾಗಿ ಮುಂದಿನ ಭವಿಷ್ಯದಲ್ಲಿ ಕಾಣಿಸಿಕೊಳ್ಳಲಿದೆ. ಒಂದು ವೇಳೆ ಈಗಾಗಲೇ ನೀವು ಮದುವೆಯಾಗಿದ್ದರೆ ಸಾಕಷ್ಟು ಸುಖಮಯವಾಗಿ ನಡೆಯಲಿದೆ ಹಾಗೂ ದಾಂಪತ್ಯ ಜೀವನ ಕೂಡ ಚೆನ್ನಾಗಿರಲಿದೆ. ಪಾರ್ಟ್ 2 ಶಿಪ್ ವ್ಯಾಪಾರವನ್ನು ಮಾಡಬೇಕೆಂದು ಅಂದುಕೊಂಡಿರುವವರಿಗೆ ಕೈ ತುಂಬ ಲಾಭ ಸಂಪಾದನೆ ಮಾಡುವುದಕ್ಕೆ ಇದು ಸರಿಯಾದ ಅವಕಾಶ.

AstrologyHoroscopeShani Transit