Post Office Scheme: ಮನೆಯಲ್ಲಿ ಇಬ್ಬರು ಮಕ್ಕಳಿಗೆ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ. ಸಿಗುತ್ತೆ ಲಕ್ಷ ಲಕ್ಷ.

Post Office Scheme: ದುಡಿದಂತಹ ಹಣವನ್ನು ಅದೇ ಸಂದರ್ಭದಲ್ಲಿ ಖರ್ಚು ಮಾಡಿಕೊಂಡರೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಇನ್ನು ಉಳಿತಾಯ ಮಾಡಿದ್ರೆ ಕೇವಲ ಕೆಲವೊಂದು ನಿರ್ದಿಷ್ಟ ಸಮಯಗಳ ವರೆಗೆ ಮಾತ್ರ ನೀವು ಅದರ ಲಾಭವನ್ನು ಪಡೆದುಕೊಳ್ಳಬಹುದು. ಹಣವನ್ನು ಹೂಡಿಕೆ ಮಾಡುವುದನ್ನು ಪ್ರಾರಂಭ ಮಾಡಿದರೆ ಅದರಿಂದ ನಿಮಗೆ ಸಾಕಷ್ಟು ಲಾಭಗಳು ಸಿಗುತ್ತವೆ. ಇನ್ನು ಸದ್ಯಕ್ಕೆ ಪೋಸ್ಟ್ ಆಫೀಸ್ನಲ್ಲಿ ನೋಡೋದಾದರೆ ನಿಮಗೆ ಸಾಕಷ್ಟು ಫಿಕ್ಸೆಡ್ ಡೆಪಾಸಿಟ್ ಯೋಜನೆಗಳನ್ನು ಕಾಣಬಹುದಾಗಿದ್ದು ನಿರ್ದಿಷ್ಟ ಹಣವನ್ನು ಠೇವಣಿ ಇಟ್ಟ ನಂತರ ಅದರ ಮೇಲೆ ಆದಾಯ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ಇನ್ನು ಇದೇ ರೀತಿಯ ಯೋಜನೆಗಳಲ್ಲಿ ಕಾಣಿಸಿಕೊಳ್ಳುವಂತಹ ಸ್ಕೀಮಾ ಅಂದ್ರೆ ಅದು ಬಾಲ ಜೀವನ ಭೀಮಾ ಯೋಜನೆ.

ಬಾಲ ಜೀವನ ಭೀಮಾ ಯೋಜನೆ!

ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಸಾಕು. ಲಕ್ಷಗಟ್ಟಲೆ ಹಣವನ್ನು ಮೆಚ್ಯುರಿಟಿ ಸಂದರ್ಭದಲ್ಲಿ ಪಡೆದುಕೊಳ್ಳುತ್ತೀರಿ. ಈ ಯೋಜನೆ ಅಡಿಯಲ್ಲಿ ದಿನಕ್ಕೆ ಆರು ರೂಪಾಯಿ ಉಳಿತ ಮಾಡಿದರೆ ಒಂದು ಲಕ್ಷ ರೂಪಾಯಿಗಳ ಹಣವನ್ನು ಪಡೆದುಕೊಳ್ಳುತ್ತೀರಿ. 18 ರೂಪಾಯಿ ಉಳಿತಾಯ ಮಾಡಿದ್ರೆ 3 ಲಕ್ಷ ರೂಪಾಯಿ ಪಡೆಯಬಹುದಾಗಿದೆ ಹಾಗೂ ಇದರಿಂದಾಗಿ ನಿಮ್ಮ ಉಳಿತಾಯ ಅಭ್ಯಾಸ ಉತ್ತಮವಾಗುವುದು ಮಾತ್ರವಲ್ಲದೆ ಉತ್ತಮ ಇನ್ವೆಸ್ಟ್ಮೆಂಟ್ ಕೂಡ ಆಗುತ್ತದೆ.

ಐದರಿಂದ ಇಪ್ಪತ್ತು ವರ್ಷಗಳ ನಡುವಿನ ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಯನ್ನು ಮಾಡಲಾಗುವುದು. ಮಕ್ಕಳ ಹೆಸರಿನಲ್ಲಿ ಪೋಷಕರು ಕೂಡ ಇಲ್ಲಿ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಮನೆಯಲ್ಲಿ ಸಾಕಷ್ಟು ಮಕ್ಕಳು ಇದ್ದರೆ ಪ್ರತಿಯೊಬ್ಬರಿಗೂ ಕೂಡ ಈ ಯೋಜನೆ ಅನ್ವಯ ಆಗುವುದಿಲ್ಲ ಕೇವಲ ಒಂದು ಕುಟುಂಬದಿಂದ ಎರಡು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಇನ್ನು ಮಕ್ಕಳ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಪೋಷಕರ ವಯಸ್ಸು 45 ಕ್ಕಿಂತ ಮೀರಿರಬಾರದು.

ಒಂದು ವೇಳೆ ಎರಡು ಮಕ್ಕಳ ಹೆಸರಿನಲ್ಲಿ ದಿನಕ್ಕೆ 36 ರೂಪಾಯಿಗಳ ರೀತಿಯಲ್ಲಿ ಉಳಿತಾಯ ಮಾಡಿದರೆ ಮೆಚುರಿಟಿ ಸಂದರ್ಭಗಳಲ್ಲಿ ಆರು ಲಕ್ಷ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಪಾಲಿಸಿ ಪ್ರಾರಂಭ ಮಾಡಿದ 60 ತಿಂಗಳಲ್ಲಿ ಇದನ್ನು ಸರಂಡರ್ ಕೂಡ ಮಾಡಬಹುದಾಗಿದೆ. ಈ ಯೋಜನೆಯ ವಿಚಾರದಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಅಲ್ಲಿನ ಅಧಿಕಾರಿಗಳ ಜೊತೆಗೆ ಭೇಟಿಯಾಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಮಕ್ಕಳ ಭವಿಷ್ಯದ ನಿಟ್ಟಿನಲ್ಲಿ ಈ ರೀತಿಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ನಿಜಕ್ಕೂ ಕೊಡ ಭವಿಷ್ಯದಲ್ಲಿ ಸಾಕಷ್ಟು ಲಾಭವನ್ನು ಹಾಗೂ ಆರ್ಥಿಕ ಸಹಾಯವನ್ನು ನಿಮಗೆ ಬಹುತೇಕ ಪ್ರಮುಖ ಕಾರ್ಯಗಳಲ್ಲಿ ನೀಡಲಿದೆ.

Post office Scheme