Cricket News: ಅವರ ತಂಟೆಗೆ ಹೊಗ್ಬೇಡಿ ಅಂತ ಸುನಿಲ್ ಗವಾಸ್ಕರ್ ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು; ಮತ್ತೆ ಹೊರಬಂತು ನೋಡಿ ಹೊಸ ಹೇಳಿಕೆ!

Cricket News: ಇತ್ತೀಚಿನ ದಿನಗಳಲ್ಲಿ ಐಪಿಎಲ್ ಅನ್ನೋದು ಸಾಕಷ್ಟು ಗಂಭೀರವಾಗಿ ಪ್ರಮುಖ ಘಟ್ಠಗಳನ್ನು ಪಡೆದುಕೊಂಡಿದೆ. ಟೂರ್ನಮೆಂಟ್ ನ ಆರಂಭದಲ್ಲಿ ನೋಡೋದಾದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಮಗಿಲ್ಲರಿಗೂ ತಿಳಿದಿರಬಹುದು ಸತತವಾಗಿ 8 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತಿತ್ತು. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಆಗೋದು ಅಷ್ಟೊಂದು ಸುಲಭದ ಮಾತಲ್ಲ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಪ್ರಾರಂಭಿಸಿದರು ಅದರಲ್ಲೂ ವಿಶೇಷವಾಗಿ ಕೆಲವೊಂದು ಹಿರಿಯ ಕ್ರಿಕೆಟಿಗರು ಕಳೆದ ಪ್ರಮುಖ ಆಟಗಾರ ಆಗಿರುವಂತಹ ವಿರಾಟ್ ಕೊಹ್ಲಿ ಅವರ ನಿಧಾನಗತಿಯ ಸ್ಟ್ರೈಕ್ ರೇಟ್ ಮೇಲೆ ಅನುಮಾನವನ್ನ ತೋರ್ಪಡಿಸಿದ್ರು.

ಇಂದು ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆಲುವನ್ನು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ರೀತಿಯಲ್ಲಿ ತಾನು ಯಾವುದೇ ಪರಿಸ್ಥಿತಿಯಲ್ಲಿ ಬೇಕಾದ್ರೂ ಕೂಡ ಗೆಲ್ಲುವಂತಹ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬುದನ್ನು ಸಾಬೀತುಪಡಿಸಿದೆ. ಅದರಲ್ಲಿ ವಿಶೇಷವಾಗಿ ಈ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ಅವರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ ತಂಡ ಗೆಲ್ಲುವುದಕ್ಕೆ ಪ್ರಮುಖ ಕಾರಣವಾಗಿದ್ದಾರೆ. ಆರಂಭದಲ್ಲಿ ಸುನಿಲ್ ಗವಾಸ್ಕರ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಅವರ ವಿರುದ್ಧ ಅತ್ಯಂತ ನಿಧಾನಗತಿಯಲ್ಲಿ ಆಡುತ್ತಾರೆ ಸ್ಟ್ರೈಕ್ ರೇಟ್ ಇಲ್ಲ ಎನ್ನುವುದಾಗಿ ತಮ್ಮ ಆರೋಪವನ್ನು ಹಾಕುವುದಕ್ಕೆ ಪ್ರಾರಂಭಿಸಿದರು.

ಈಗ ವಿರಾಟ್ ಕೊಹ್ಲಿ ಮೇಲೆ ಹೊಸ ಹೇಳಿಕೆ ನೀಡಿದ ಸುನಿಲ್ ಗವಾಸ್ಕರ್!

ಈ ವಿಚಾರದಲ್ಲಿ ಸುನಿಲ್ ಗವಾಸ್ಕರ್ ಹಾಗೂ ವಿರಾಟ್ ಕೊಹ್ಲಿ ರವರ ನಡುವೆ ಐಪಿಎಲ್ ಪಂದ್ಯಾವಳಿಗಳ ಇಂಟರ್ವ್ಯೂ ಮಧ್ಯದಲ್ಲಿಯೇ ಸಾಕಷ್ಟು ಪರೋಕ್ಷವಾದ ಮಾತಿನ ಚಕಮಕಿ ನಡಿತಾ ಇತ್ತು ಅಂತ ಹೇಳಬಹುದಾಗಿದೆ. ಕೊನೆಗೂ ವಿರಾಟ್ ಕೊಹ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಫಾಸ್ಟ್ ಬ್ಯಾಟಿಂಗ್ ಮೂಲಕ ಹಾಗೂ ಸಿಕ್ಸರ್ ಗಳ ವಿಚಾರದಲ್ಲಿ ಬಂದರೆ ಈ ಬಾರಿಯ ಸೀಸನ್ ನಲ್ಲಿ ಹೈಯೆಸ್ಟ್ ಸಿಕ್ಸರ್ ಬಾರಿಸಿರುವ ಅಂತಹ ಸಾಧನೆಯನ್ನು ಕೂಡ ಅವರೇ ಮಾಡಿದ್ದಾರೆ ಅಂತ ಹೇಳಬಹುದಾಗಿದೆ. ತಮ್ಮ ಬ್ಯಾಟಿಂಗ್ ನಲ್ಲಿ ಕೂಡ ಅವರು ಸಾಕಷ್ಟು ಬದಲಾವಣೆಗಳನ್ನು ತಂದಿರುವುದು ಎದ್ದು ಕಾಣುತ್ತಿದೆ.

ವಿರಾಟ್ ಕೊಹ್ಲಿ ಅವರ ಪ್ರತಿ ಜೀವನ ಆರಂಭವಾಗಿದ್ದು ಸಂದರ್ಭದಲ್ಲಿ ಅವರು ಈಗಿನ ರೀತಿಯಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡ್ತಾ ಇರಲಿಲ್ಲ. ಆ ಸಂದರ್ಭದಲ್ಲಿ ಪದೇ ಪದೇ ಮಹೇಂದ್ರ ಸಿಂಗ್ ಧೋನಿ ರವರು ವಿರಾಟ್ ಕೊಹ್ಲಿ ಅವರಿಗೆ ಅವಕಾಶವನ್ನು ನೀಡಿ ಆಯ್ಕೆ ಮಾಡಿದ ಕಾರಣಕ್ಕಾಗಿ ಇವತ್ತು ವಿರಾಟ್ ಕೊಹ್ಲಿ ಅವರು ತಮ್ಮ ಜೀವನದಲ್ಲಿ ಇಷ್ಟೊಂದು ಸಾಧನೆ ಮಾಡೋದಕ್ಕೆ ಸಾಧ್ಯ ಆಗಿರುವುದು ಎನ್ನುವಂತಹ ಹೇಳಿಕೆ ನೀಡಿದ್ದಾರೆ. ಈಗಾಗಲೇ ಇವರಿಬ್ಬರ ನಡುವೆ ಸಾಕಷ್ಟು ಮನಸ್ತಾಪಗಳನ್ನ ನಾವು ಈ ಮೂಲಕವೇ ನೋಡಬಹುದಾಗಿದ್ದು ಈಗ ಮತ್ತೆ ತುಪ್ಪ ಸುರಿಯುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

Cricket news