Watch: ಎಡಗೈಗೆ ಮಾತ್ರ ವಾಚ್ ಕಟ್ಟೋದ್ರಿಂದ ಏನು ಉಪಯೋಗ? ನಿಜವಾದ ಕಾರಣ ಗೊತ್ತಾದ್ರೆ ನಿಮಗೆ ಟೆನ್ಶನ್ ಆಗೋದ್ ಗ್ಯಾರಂಟಿ!

watch: ಮಕ್ಕಳಿಂದ ಮುದುಕ್ರ ವರೆಗೂ ಕೂಡ ಪ್ರತಿಯೊಬ್ಬರೂ ವಾಚ್ ಧರಿಸುವುದನ್ನು ಇಷ್ಟಪಡುತ್ತಾರೆ. ವಾಚ್ ನಲ್ಲಿ ಕೂಡ ವಾಲ್ ಕ್ಲಾಕ್ ಕೈಗಡಿಯಾರ ಹೀಗೆ ವಿಧವಿಧವಾದ ವಾಚ್ ಗಳನ್ನು ಕೂಡ ನಾವು ಕಾಣಬಹುದಾಗಿದೆ. ಕೆಲವರು ವಾಚ್ ಅನ್ನು ಸಮಯ ನೋಡುವುದಕ್ಕಾಗಿ ಬಳಸಿಕೊಂಡರೆ ಇನ್ನು ಕೆಲವರು ಅದನ್ನು ಅಲಂಕಾರಿಕ ವಸ್ತುವಿನ ರೀತಿಯಲ್ಲಿ ತಮ್ಮ ಮಣಿ ಗಂಟಿಗೆ ಕಟ್ಟಿಕೊಳ್ಳುತ್ತಾರೆ. ಇನ್ನು ವಾಚ್ ಕಟ್ಟುವ ವಿಧಾನದಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನ ನಾವು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಕಾಣಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಹೆಚ್ಚಿನ ಜನರು ನೀವು ಗಮನಿಸಬಹುದು ವಾಚ್ ಅನ್ನು ಬಲಗೈಗೆ ಕಟ್ಟುವುದಿಲ್ಲ ಬದಲಾಗಿ ಎಡಗೈಗೆ ಕಟ್ಟಿಕೊಳ್ಳುತ್ತಾರೆ. ಇದರ ಹಿಂದಿನ ಕಾರಣ ಏನಿರಬಹುದು ಅನ್ನೋದು ಸಾಕಷ್ಟು ಜನರಲ್ಲಿ ಕುತೂಹಲವನ್ನು ಮೂಡಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕುತೂಹಲವನ್ನು ಇವತ್ತಿನ ಈ ಲೇಖನದ ಮೂಲಕ ಬಗೆಹರಿಸುವಂತಹ ಪ್ರಯತ್ನವನ್ನು ಮಾಡೋಣ ಬನ್ನಿ.

ವಾಚ್ ಅನ್ನು ಎಡಗೈ ಕಟ್ಟುವುದರಿಂದ ಆಗುವ ಲಾಭಗಳು!

ವಾಚ್ ಅನ್ನು ಯಾವ ಕೈಗೆ ಕಟ್ಟಿಕೊಂಡರು ಒಳ್ಳೆಯದು ಅನ್ನೋದರ ಬಗ್ಗೆ ಸೋಶಿಯಲ್ ಮೀಡಿಯಾದಿಂದ ಹಿಡಿದು ಪ್ರತಿಯೊಂದು ಕಡೆಗಳಲ್ಲಿ ಕೂಡ ನೆಟ್ಟಿಗರು ತಮ್ಮದೇ ಆದಂತಹ ವೈಯಕ್ತಿಕ ಅಭಿಪ್ರಾಯವನ್ನು ನೀಡುತ್ತಾರೆ. ಆದರೆ ವಾಚ್ ಅನ್ನು ಎಡಗೈಗೆ ಕಟ್ಟಿಕೊಳ್ಳುವುದರ ವೈಜ್ಞಾನಿಕ ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗುತ್ತದೆ.

ಮೊದಲಿಗೆ ಈ ವಿಚಾರದ ಬಗ್ಗೆ ಉತ್ತರವನ್ನು ಹುಡುಕಲು ಹೊರಟ್ರೆ ಸಾಮಾನ್ಯವಾಗಿ ಬಲಗೈಯಲ್ಲಿ ಪ್ರತಿಯೊಬ್ಬರು ಕೂಡ ಹೆಚ್ಚಿನ ಕೆಲಸವನ್ನು ಮಾಡುತ್ತಾರೆ ಹೀಗಾಗಿ ಖಾಲಿ ಇರುವಂತ ಎಡಗೈನಲ್ಲಿ ವಾಚ್ ಅನ್ನು ಕಟ್ಟಿಕೊಂಡರೆ ಅದು ಸುರಕ್ಷಿತವಾಗಿರುತ್ತದೆ ಎನ್ನುವಂತಹ ಭಾವನೆಯಾಗಿದೆ. ಈ ಸಂದರ್ಭದಲ್ಲಿ ವಾಚ್ ಬೀಳುವಂತಹ ಅಪಾಯ ಕೂಡ ಅತ್ಯಂತ ಕಡಿಮೆಯಾಗಿರುತ್ತದೆ ಅನ್ನೋದನ್ನ ಇದು ತೋರಿಸುತ್ತದೆ. ಇನ್ನು ಬಹುತೇಕ ಕಂಪನಿಗಳು ಕೂಡ ಜನರು ಎಡಗೈಗೆ ವಾಚ್ ಧರಿಸುತ್ತಾರೆ ಎನ್ನುವ ಕಾರಣಕ್ಕಾಗಿ ವಾಚ್ ತಯಾರಿಕ ಕಂಪನಿಗಳು ಕೂಡ ವಾಚ್ ಅನ್ನು ಸೆಟ್ ಮಾಡಲು ಎಡಗೈಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಿರುತ್ತಾರೆ ಹೀಗಾಗಿ ಇದು ಕೂಡ ಒಂದು ಕಾರಣವಾಗಿದೆ.

12 ಗಂಟೆ ನಂತರ ಪ್ರತಿಯೊಂದು ಮುಳ್ಳುಗಳು ಕೂಡ ಬಲಕ್ಕೆ ಚಲಿಸುವ ಕಾರಣದಿಂದಾಗಿ ಇದನ್ನು ಎಡಗೈಗೆ ಕಟ್ಟಿದರೆ ಇದು ಸರಿಯಾಗಿ ಕಾಣಿಸುತ್ತದೆ ಎನ್ನುವಂತಹ ಒಂದು ಪದ್ಧತಿ ಕೂಡ ಇದಕ್ಕೆ ಕಾರಣವಾಗಿದೆ. ಹಳೆಯ ಕಾಲದಲ್ಲಿ ವಾಚಿನ ಪದ್ದತಿಯ ಬಗ್ಗೆ ಮಾತನಾಡುವುದಾದರೆ ಇದನ್ನ ಕೈಗೆ ಕಟ್ಟಿಕೊಳ್ಳುವುದಕ್ಕಿಂತ ಹೆಚ್ಚಾಗಿ ಜನರು ಕಿಸೆಯಲ್ಲಿ ಇಟ್ಕೊಂಡು ಆ ಸಂದರ್ಭದಲ್ಲಿ ಸಮಯವನ್ನು ನೋಡುತ್ತಾ ಇದ್ದರು.

Watch