Astrology: ಈ ಮೂರು ರಾಶಿಯವರಿಗೆ ಬುಧಾದಿತ್ಯ ರಾಜಯೋಗದಿಂದಾಗಿ ಶುರುವಾಗಿದೆ ನೋಡಿ ಸುವರ್ಣ ಗಳಿಗೆ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನ ರಾಶಿ ಆಗಿರುವಂತಹ ವೃಷಭ ರಾಶಿಯಲ್ಲಿ ಈಗ ಬುಧ ಹಾಗೂ ಸೂರ್ಯ ಇಬ್ಬರೂ ಕೂಡ ಸಂದಿಸಿದ್ದಾರೆ. ಒಂದು ವರ್ಷಗಳ ನಂತರ ಈಗ ಬುಧಾದಿತ್ಯ ರಾಜಯೋಗ ವೃಷಭ ರಾಶಿಯಲ್ಲಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ವಿಶೇಷವಾಗಿ ಮೂರು ರಾಶಿಯವರು ಕೈತುಂಬ ಹಣವನ್ನು ಸಂಪಾದನೆ ಮಾಡಲಿದ್ದಾರೆ ಹಾಗೂ ತಮ್ಮ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವನ್ನು ಸಂಪಾದನೆ ಮಾಡಲಿದ್ದಾರೆ. ಸಮಾಜದಲ್ಲಿ ಇವರ ಸ್ಥಾನಮಾನಗಳು ಕೂಡ ಹೆಚ್ಚಾಗುತ್ತದೆ ಹಾಗಿದ್ದರೆ ಬನ್ನಿ, ಆ ಮೂರು ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ(Taurus)

ವಿಶೇಷವಾಗಿ ವೃಷಭ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ಸ್ ಹಾಗೂ ಸಂಬಳದಲ್ಲಿ ಹೆಚ್ಚಳದ ಯೋಗವನ್ನು ಪಡೆದುಕೊಳ್ಳಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಒಳ್ಳೆಯ ಕೆಲಸದಿಂದಾಗಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ ಹಾಗೂ ಸಮಾಜದಲ್ಲಿ ಕೂಡ ಜನರ ನಡುವೆ ನಿಮ್ಮ ಮಾತುಕತೆ ಹೆಚ್ಚಾಗಿ ನಡೆಯೋದಕ್ಕೆ ಪ್ರಾರಂಭವಾಗುತ್ತದೆ. ಆದಾಯದ ವಿಚಾರದಲ್ಲಿ ವೃಷಭ ರಾಶಿಯವರಿಗೆ ಯಾವುದು ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಕೈತುಂಬಾ ಹಣ ಸಂಪಾದನೆಯಾಗಲಿದೆ. ಸಾಕಷ್ಟು ಸಮಯಗಳಿಂದ ಮದುವೆಯಾಗದೆ ಒಂಟಿಯಾಗಿ ಕುಳಿತುಕೊಂಡಿರುವಂತಹ ವೃಷಭ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಸಂಸಾರದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರಲಿದೆ.

ಕರ್ಕ ರಾಶಿ(Cancer)

ಆರ್ಥಿಕ ಪರಿಸ್ಥಿತಿಯಲ್ಲಿ ಕರ್ಕ ರಾಶಿಯವರಿಗೆ ಅನ್ವಯಿಸಿದ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದೀರಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಕರ್ಕ ರಾಶಿಯವರಿಗೆ ಕೈ ತುಂಬ ಲಾಭ ಸಂಪಾದನೆ ಆಗಲಿದೆ. ಎಲ್ಲಾ ಅನಿರೀಕ್ಷಿತ ಬೆಳವಣಿಗೆಗಳ ಕಾರಣದಿಂದಾಗಿ ಕರ್ಕ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಮಕ್ಕಳು ಕೂಡ ನಿಮಗೆ ಖಂಡಿತವಾಗಿ ಖುಷಿಯಾಗುವಂತಹ ಸುದ್ದಿಯನ್ನು ಹೊತ್ತು ತರಲಿದ್ದಾರೆ. ಕರ್ಕ ರಾಶಿಯವರ ಜೀವನದಲ್ಲಿ ಈ ಸಮಯದಲ್ಲಿ ಸಾಕಷ್ಟು ಸಂತೋಷ ನೀಡುವಂತಹ ಘಟನೆಗಳು ಜರುಗಲಿವೆ.

ಸಿಂಹ ರಾಶಿ (Leo)

ವೃತ್ತಿ ವ್ಯವಹಾರದಲ್ಲಿ ಸಿಂಹ ರಾಶಿಯವರು ಸಿಗುವಂತಹ ಸಾಕಷ್ಟು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಅವುಗಳಿಂದ ಕೈತುಂಬ ಸಂಪಾದನೆಯನ್ನು ಗಳಿಸಲಿದ್ದಾರೆ. ಯಾವುದೇ ಕೆಲಸ ಮಾಡಿದ್ರೂ ಕೂಡ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ರೀತಿಯಲ್ಲಿ ಎಲ್ಲಾ ಕೆಲಸಗಳು ಕೂಡ ಯಶಸ್ವಿಯಾಗುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಮಯ ಸಿಂಹ ರಾಶಿಯವರ ಜೀವನದಲ್ಲಿ ಸಾಕಷ್ಟು ಅದೃಷ್ಟದ ಸಮಯ ಆಗಿರುವ ಕಾರಣದಿಂದಾಗಿ ಹಣ ಸಂಪಾದನೆ ಮಾಡುವುದಕ್ಕೆ ಕೂಡ ಯಶಸ್ವಿಯಾಗುತ್ತಾರೆ. ಒಂದು ವೇಳೆ ಈ ಸಮಯದಲ್ಲಿ ಕೆಲಸವನ್ನು ಹುಡುಕ್ತಾ ಇದ್ರೆ ಕೈ ತುಂಬಾ ಸಂಬಳ ನೀಡುವಂತಹ ಕೆಲಸ ಕೂಡ ಸಿಗಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಸಿಂಹ ರಾಶಿಯವರು ಈ ಸಂದರ್ಭದಲ್ಲಿ ತಮ್ಮ ಜೀವಮಾನದ ಶ್ರೇಷ್ಠ ಸಾಧನೆಯನ್ನು ಮಾಡಲಿದ್ದಾರೆ. ಪ್ರತಿಯೊಂದು ಕೆಲಸಗಳಲ್ಲಿ ಕೂಡ ಬೇರೆಯವರು ಮೆಚ್ಚಿಕೊಳ್ಳುವ ರೀತಿಯಲ್ಲಿ ಫಲಿತಾಂಶವನ್ನು ಹೊತ್ತು ತರಲಿದ್ದಾರೆ.

Astrology