RCB: RCB ಸೋಲೋದಕ್ಕೆ ಇದೇ ಮುಖ್ಯ ಕಾರಣ ಎಂದು ಅಭಿಮಾನಿಗಳು! ತಂಡದ ಆಟಗಾರರು ಅಲ್ವೇ ಅಲ್ಲ!

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮೇ 18ನೇ ದಿನಾಂಕದಂದು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ತನ್ನ ಬದ್ಧ ಎದುರಾಳಿ ಆಗಿರುವಂತಹ ಚೆನ್ನೈ ಸೂಪರ್ ಕಿಂಗ್ ತಂಡವನ್ನು ಸೋಲಿಸಿ, ಪ್ಲೇ ಆಫ್ ಹಂತವನ್ನು ತಲುಪಿತ್ತು. ಇನ್ನು ಪ್ಲೇ ಆಫ್ ಹಂತದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಸೋತು ಟೂರ್ನಮೆಂಟ್ ನಿಂದ ಹೊರ ಬಿದ್ದಿದೆ ‌ ಸಾಕಷ್ಟು ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ಕನಸನ್ನು ಕಂಡಿದ್ದ ಆರ್ಸಿಬಿ ಅಭಿಮಾನಿಗಳಿಗೆ ಈ ಸೋಲು ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಸರವನ್ನು ತರಿಸಿದೆ ಎಂದು ಹೇಳಬಹುದಾಗಿದೆ.

ತಂಡದ ಸೋಲಿಗೆ ಇವರೇ ಕಾರಣ ಎಂದ ಅಭಿಮಾನಿಗಳು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಗಿರುವಂತಹ ಈ ಸೋಲಿನ ಹಣೆಪಟ್ಟಿಯನ್ನು ಕೆಲವು ಆಟಗಾರರಿಗೆ ಹಾಗೂ ಕೆಲವು ಮಾಜಿ ಆಟಗಾರರ ಮೇಲೆ ಕೂಡ ಕಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರವನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಮೊದಲನೆಯದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರು ತಂಡದ ಕೈಹಿಡಿಯಬೇಕಾಗಿತ್ತು ಆದರೆ ಇಂತಹ ಪ್ರಮುಖ ಪಂದ್ಯಾಟದಲ್ಲಿ ಕೂಡ ಗ್ಲೆನ್ ಮ್ಯಾಕ್ಸ್ ರವರು ತಂಡದ ಉಪಯೋಗಕ್ಕೆ ಬಾರದೆ ಮೊದಲ ಎಸೆತದಲ್ಲಿ ಔಟ್ ಆಗಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಬೌಲಿಂಗ್ ನಲ್ಲಿ ಯಶ್ ದಯಾಳ್ ರವರು ಕೂಡ ಚನ್ನೆ ತಂಡದ ವಿರುದ್ಧ ಗೆಲುವು ಸಾಧಿಸೊದಕ್ಕೆ ಪ್ರಮುಖವಾದ ಕಾರಣ ಆಗಿದ್ರು ಆದರೆ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಮಾತ್ರ ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಯಾವುದೇ ವಿಕೆಟ್ಗಳನ್ನು ಕೂಡ ಅವರು ಕಬಳಿಸಲಿಲ್ಲ.

ಇದೆಲ್ಲದಕ್ಕಿಂತ ಪ್ರಮುಖವಾಗಿ ಪ್ರತಿ ಬಾರಿ ಮಾಜಿ ಕ್ರಿಕೆಟಿಗೆ ಆಗಿರುವಂತಹ ಸುನಿಲ್ ಗವಾಸ್ಕರ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಅವರ ವಿರುದ್ಧ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತಮ್ಮ ನೆಗೆಟಿವ್ ಕಾಮೆಂಟ್ಗಳನ್ನು ನೀಡಿಕೊಂಡು ಬರುತ್ತಿದ್ದರು. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ ನಡೆಯುವುದಕ್ಕಿಂತ ಸ್ವಲ್ಪ ಮುಂಚೆ ಈ ಬಾರಿ ಕಪ್ ಗೆಲ್ಲೋದು ಆರ್‌ಸಿಬಿ ತಂಡ ಅನ್ನೋದಾಗಿ ಹೇಳಿಕೊಂಡಿದ್ದರು. ಯಾವತ್ತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಸುನಿಲ್ ಗವಸ್ಕರ್ ಉತ್ತಮವಾದ ಕಾಮೆಂಟ್ ಮಾಡಿದವರಲ್ಲ ಆದರೆ ಮೊದಲ ಬಾರಿಗೆ ಹೀಗೆ ಮಾಡಿದ್ದು ತಂಡದ ಸೋಲಿಗೆ ಕಾರಣವಾಗಿರಬಹುದು ಅನ್ನೋದಾಗಿ ಕೂಡ ಆರ್ಸಿಬಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ಬಾರಿಯ ಟೂರ್ನಮೆಂಟ್ ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿರುವ ಅಂತಹ ಆಟಗಾರ ಆಗಿಯೂ ಕೂಡ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ ಅನ್ನೋದೇ ಬೇಸರ.

RCB