Astrology: ಮೂರು ರಾಶಿಯವರ ಮೇಲೆ ಸೂರ್ಯನ ಆಶೀರ್ವಾದ; ಇವತ್ತಿನಿಂದ ಕೈ ತುಂಬ ಹಣ ಇರತ್ತೆ ಚಿಂತೆನೇ ಬೇಡ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಆಗಿರುವಂತಹ ಸೂರ್ಯ ಕೃತಿಕ ನಕ್ಷತ್ರದಿಂದ ರೋಹಿಣಿ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಇದರಿಂದಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳಕರ ಯೋಗ ನಿರ್ಮಾಣವಾಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ವಿಶೇಷವಾದ ಅದೃಷ್ಟ ದೊರಕಲಿತೆ ಎಂಬುದಾಗಿ ಕೂಡ ಉಲ್ಲೇಖಿಸಲಾಗಿದೆ. ಹಾಗಿದ್ರೆ ಬನ್ನಿ ಈ ಪರಿಣಾಮದಿಂದ ಅದೃಷ್ಟವನ್ನು ಸಂಪಾದನೆ ಮಾಡಲಿರುವ ಆ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ(Aries)

ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಕೈ ಹಾಕುವುದಕ್ಕೆ ಮೇಷ ರಾಶಿಯವರಿಗೆ ಇದು ಅದ್ಭುತ ಸಮಯವಾಗಿದೆ. ಮೇಷ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ವಾಗಲಿದೆ. ಕೈ ತುಂಬಾ ಹಣದ ಜೊತೆಗೆ ಸಮಾಜದಲ್ಲಿ ನಿಮ್ಮ ಮೇಲೆ ಜನರಿಗೆ ಇರುವಂತಹ ಗೌರವ ಹಾಗೂ ನಿಷ್ಠೆ ಕೂಡ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸದಿಂದಾಗಿ ವರಿಷ್ಠ ಅಧಿಕಾರಿಗಳು ಕೂಡ ಮೆಚ್ಚುಗೆಯನ್ನು ಸೂಚಿಸಲಿದ್ದಾರೆ. ನಿರುದ್ಯೋಗಿಗಳು ಕೂಡ ತಮಗೆ ಇಷ್ಟ ಆಗುವಂತಹ ಕೈ ತುಂಬ ಸಂಬಳ ಸಿಗುವಂತಹ ಕೆಲಸವನ್ನು ಹೊಂದಲಿದ್ದಾರೆ. ಉದ್ಯಮಿಗಳು ಕೂಡ ದೊಡ್ಡಮಟ್ಟದ ಡೀಲ್ ಅನ್ನು ತಮ್ಮ ಉದ್ಯಮದಲ್ಲಿ ಪಡೆದುಕೊಳ್ಳಲಿದ್ದಾರೆ ಹಾಗೂ ವಿದೇಶಿ ಪ್ರಯಾಣ ಕೂಡ ಅವರಿಗೆ ಲಭ್ಯವಿರಲಿದೆ.

ಕರ್ಕ ರಾಶಿ(Cancer)

ಸಾಕಷ್ಟು ಸಮಯಗಳಿಂದ ಆರ್ಥಿಕ ಸಮಸ್ಯೆಯನ್ನು ಕಾಣುತ್ತಿರುವಂತಹ ಕರ್ಕ ರಾಶಿ ಅವರಿಗೆ ಹಣವನ್ನು ಸಂಪಾದನೆ ಮಾಡುವುದಕ್ಕೆ ಆದಾಯದ ಸಾಕಷ್ಟು ಮೂಲಗಳು ತೆರೆದುಕೊಳ್ಳಲಿವೆ. ಇದರಿಂದಾಗಿ ಕರ್ಕ ರಾಶಿಯವರಿಗೆ ಹಣದ ಹರಿವು ಹೆಚ್ಚಾಗಿ ಕಂಡುಬರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಕೂಡ ಸಕಾರಾತ್ಮಕ ಪರಿಣಾಮ ಕಂಡು ಬರಲಿದೆ. ಇನ್ನು ಕಾಲೇಜಿನಲ್ಲಿ ಕಲಿಯುತ್ತಿರುವಂತಹ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಸೆಲೆಕ್ಟ್ ಆಗುವಂತಹ ಸಾಧ್ಯತೆ ಇದೆ. ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗಳು ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಲಿದ್ದಾರೆ‌. ಪ್ರೈವೇಟ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳಿಗೆ ಕೈತುಂಬ ಬೋನಸ್ ಕೂಡ ಸಿಗಲಿದೆ. ಒಟ್ಟಾರೆಯಾಗಿ ಕರ್ಕ ರಾಶಿಯವರು ಹಣದ ವಿಚಾರದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ.

ಧನು ರಾಶಿ(Sagittarius)

ಈ ಸಂದರ್ಭದಲ್ಲಿ ವಿಶೇಷವಾಗಿ ಧನುರಾಶಿಯ ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವಂತಹ ಜನರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸ್ಥಾನಮಾನಗಳನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಕೂಡ ಯಶಸ್ಸನ್ನು ಸಂಪಾದನೆ ಮಾಡಲಿದ್ದಾರೆ. ಬೇರೆ ಕೆಲಸ ಮಾಡುತ್ತಿರುವವರಿಗೂ ಕೂಡ ಕೆಲಸದಲ್ಲಿ ಪ್ರಮೋಷನ್ ಸಿಗಲಿದೆ. ಸಾಂಸಾರಿಕ ಜವಾಬ್ದಾರಿಗಳನ್ನು ನೀವು ಈ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಲಿದ್ದೀರಿ. ಉದ್ಯಮಿಗಳು ಕೆಲವೊಂದು ಯೋಜನೆಗಳ ವಿಚಾರವಾಗಿ ವಿದೇಶಕ್ಕೆ ಹೋಗುವಂತಹ ಸಾಧ್ಯತೆ ಕೂಡ ಇದೆ. ಸಾಕಷ್ಟು ಸಮಯಗಳಿಂದ ನೀವು ಖರೀದಿ ಮಾಡಬೇಕು ಎಂದುಕೊಂಡಿರುವ ಹೊಸ ಮನೆ ಅಥವಾ ಹೊಸ ಕಾರನ್ನು ನೀವು ನಿಮ್ಮ ಮನೆಯ ಮುಂದೆ ತಂದು ಖರೀದಿಸಿ ನಿಲ್ಲಿಸಲಿದ್ದೀರಿ.

Astrology