Gruhalakshmi Scheme: ಗೃಹಲಕ್ಷ್ಮಿ ಹಣಕ್ಕೂ ಬಂತು ನೋಡಿ ಹೊಸ ಸಂಕಷ್ಟ; ಮಹಿಳೆಯರೇ ನೀವು ಕಟ್ಬೇಕು ಟಾಕ್ಸ್!

Gruhalakshmi Scheme: ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅವರು ಚುನಾವಣೆಗೂ ಮುಂಚೆ ಜನರಿಗೆ ಗ್ಯಾರಂಟಿ ನೀಡಿದ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಕ್ಷೀಪ್ರಗತಿಯಲ್ಲಿ ಮಾಡುತ್ತಾರೆ. ಅವುಗಳಲ್ಲಿ ಮಹಿಳೆಯರಿಗೆ ಅಂದರೆ ಮನೆಯ ಒಡತಿಗೆ ಪ್ರತಿ ತಿಂಗಳು 2000 ನೀಡುವಂತಹ ಗೃಹಲಕ್ಷ್ಮಿ ಯೋಜನೆ ಕೂಡ ಒಂದು.

ಈಗಾಗಲೇ 10 ಕಂತುಗಳ ಆಧಾರದ ಮೇಲೆ ರಾಜ್ಯದ ಮಹಿಳೆಯರು ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 20,000 ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಈಗ ಈ ಹಣದ ಮೇಲೆ ಕೂಡ ಟ್ಯಾಕ್ಸ್ ತಲೆನೋವು ಪ್ರಾರಂಭವಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಜಿಎಸ್ಟಿ ಸುಳಿಯಲ್ಲಿ ಗೃಹಲಕ್ಷ್ಮಿ ಹಣ!

ಈಗಲೂ ಕೂಡ ಸಾಕಷ್ಟು ಕಡೆಗಳಲ್ಲಿ ಒಂದು ಕಂಚಿನ ಹಣ ಹೋದರೆ ಇನ್ನೊಂದು ಕಂತಿನ ಹಣ ಹೋಗ್ತಾ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನು ಕೆಲವರು ಗ್ರಹಲಕ್ಷ್ಮಿ ಯೋಜನೆಯ ಅರ್ಹತೆ ಇಲ್ಲದೆ ಇದ್ದರೂ ಕೂಡ ಆ ಹಣವನ್ನು ಪಡೆದುಕೊಳ್ಳುತ್ತಿರುವ ವಿಚಾರದ ಬಗ್ಗೆ ಕೂಡ ಸರ್ಕಾರ ಈಗಾಗಲೇ ತನಿಖೆ ನಡೆಸಿ ಈ ವಿಚಾರವನ್ನು ಈಗಾಗಲೇ ಹೊರ ತೆಗೆದಿದ್ದು ಅಂತವರಿಗೂ ಕೂಡ ಗೃಹಲಕ್ಷ್ಮಿ ಹಣ ಹೋಗದಂತೆ ತಡೆಹಿಡುವಂತಹ ಪ್ರಕ್ರಿಯೆಯನ್ನು ಕೂಡ ಸರ್ಕಾರ ಪ್ರಾರಂಭ ಮಾಡಿದೆ. ಅರಹ ಕುಟುಂಬದ ವ್ಯಕ್ತಿಗಳಿಗೆ ಮಾತ್ರ ಈ ಹಣ ತಲುಪಿಸುವುದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಕೆಲಸಗಳನ್ನು ಕೂಡ ಸರ್ಕಾರ ಮಾಡುತ್ತಿದೆ.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯನ್ನು ಆದಾಯದ ತೆರಿಗೆಯನ್ನು ಕಟ್ಟುವಂತಹ ಕುಟುಂಬದ ಮಹಿಳೆಯರಿಗೆ ನೀಡಲು ಸಾಧ್ಯವಿಲ್ಲ ಎನ್ನುವ ವಿಚಾರದ ಬಗ್ಗೆ ಸರ್ಕಾರ ಅಧಿಕೃತವಾದ ಸ್ಪಷ್ಟನೆ ಈ ಮೊದಲೇ ನೀಡಿದೆ. ಹೀಗಾಗಿ ಯಾರೆಲ್ಲಾ ಜಿಎಸ್‌ಟಿ ಹಾಗೂ ಆದಾಯ ತೆರಿಗೆಯನ್ನು ಕಟ್ಟುತ್ತಿದ್ದಾರೋ ಅವರಿಗೆ ಯಾವುದೇ ಕಾರಣಕ್ಕೂ ಕೂಡ ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ 2000 ಹಣವನ್ನು ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರ ಬಹಿರಂಗವಾಗಿ ಸ್ಪಷ್ಟಪಡಿಸಿದ್ದು ಅಂಥವರನ್ನು ಲಿಸ್ಟಿನಿಂದ ತೆಗೆದುಹಾಕಲಾಗುತ್ತದೆ.

ಈಗಾಗಲೇ ಕೆವೈಸಿ ಸರಿಯಾಗಿ ಮಾಡಿಸಿಕೊಂಡಿಲ್ಲ ಹಾಗೂ ರೇಷನ್ ಕಾರ್ಡ್ ನಲ್ಲಿ ಮತ್ತು ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಇರುವಂತಹ ಹೆಸರು ಎರಡು ಕೂಡ ಸೇಮ್ ಆಗಿಲ್ಲ ಎನ್ನುವಂತಹ ಸಾಕಷ್ಟು ಕಾರಣಗಳ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ತಮ್ಮನ ತಾವು ನೋಂದಾಯಿಸಿಕೊಂಡಿದ್ದ ಸಾಕಷ್ಟು ಜನ ಮಹಿಳೆಯರನ್ನು ಈಗಾಗಲೇ ಲಿಸ್ಟಿನಿಂದ ಸರ್ಕಾರ ತೆಗೆದುಹಾಕುವಂತಹ ಕೆಲಸವನ್ನು ಮಾಡಿರುವುದು ನಮಗೆ ಕೇಳಿ ಬಂದಿತ್ತು. ಆದರೆ ಸರ್ಕಾರ ಈಗ ತೆರಿಗೆಯನ್ನು ಕಟ್ಟುತ್ತಿರುವಂತಹ ಕುಟುಂಬಸ್ಥರಿಗೂ ಕೂಡ ಗೃಹಲಕ್ಷ್ಮಿ ಯೋಜನೆ, ಸಿಗುವುದಿಲ್ಲ ಎನ್ನುವುದನ್ನ ಸ್ಪಷ್ಟಪಡಿಸಿದೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣವನ್ನ ನೀಡುತ್ತಿರುವುದು ಅನ್ನೋದನ್ನ ಸ್ಪಷ್ಟಿಸಿದೆ ಎಂದು ಹೇಳ ಬಹುದಾಗಿದೆ.

Gruhalakshmi Scheme