Post office Scheme: ತಿಂಗಳಿಗೆ ನಿಮಗೆ ರೂ.7,000 ಉಳಿತಾಯ ಮಾಡುವುದಕ್ಕೆ ಸಾಧ್ಯ ಆಗುತ್ತಾ? ಹಾಗಿದ್ರೆ ಪೋಸ್ಟ್ ಆಫೀಸ್ ನಿಂದ ನಿಮಗಾಗಿ ಕಾದಿದೆ ನೋಡಿ ಸಿಹಿ ಸುದ್ದಿ!

Post office Scheme: ಸದ್ಯದ ಮಟ್ಟಿಗೆ ಹೂಡಿಕೆ ವಿಚಾರಕ್ಕೆ ಬಂದರೆ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ನಂಬುವಂತಹ ಹಾಗೂ ಹೆಚ್ಚು ಲಾಭವನ್ನು ಗಳಿಸಬಹುದಾದಂತಹ ಸ್ಥಳ ಅಂದ್ರೆ ಅದು ಪೋಸ್ಟ್ ಆಫೀಸ್ ಯೋಜನೆಗಳು ಮಾತ್ರ. ಅದರಲ್ಲಿ ವಿಶೇಷವಾಗಿ ನಾವು ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳುವುದಕ್ಕೆ ಹೊರಟಿರುವಂತಹ ಆ ಲಾಭದಾಯಕ ಯೋಜನೆ ರಿಕರಿಂಗ್ ಡೆಪಾಸಿಟ್ ಯೋಜನೆ.

ರಿಕರಿಂಗ್ ಡೆಪಾಸಿಟ್ ಯೋಜನೆ!

ರಿಕರಿಂಗ್ ಡೆಪಾಸಿಟ್ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಕಂಡುಬರುವಂತಹ ಅತ್ಯಂತ ಲಾಭದಾಯಕ ಯೋಜನೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದರ ಮೇಲೆ ಹೂಡಿಕೆ ಮಾಡುವವರಿಗೆ 6.7% ಬಡ್ಡಿದರ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಹಣಕ್ಕೆ, ಎಷ್ಟು ರಿಟರ್ನ್ ಸಿಗುತ್ತದೆ ಅನ್ನೋದರ ಬಗ್ಗೆ ಕೂಡ ಉದಾಹರಣೆ ರೂಪದಲ್ಲಿ ಇವತ್ತಿನ ಈ ಲೇಖನದ ಮೂಲಕ ನಿಮಗೆ ಮಾಹಿತಿಯನ್ನು ತಿಳಿಸುತ್ತೇವೆ ಬನ್ನಿ.

ಉದಾಹರಣೆಗೆ ನೀವು ರಿಕರಿಂಗ್ ಡೆಪಾಸಿಟ್ ಯೋಜನೆ ನಲ್ಲಿ ತಿಂಗಳಿಗೆ 3000 ರೂಪಾಯಿಗಳ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಿಕೊಂಡು ಹೋದರೆ ಐದು ವರ್ಷಗಳಿಗೆ 1.80 ಲಕ್ಷ ರೂಪಾಯಿಗಳ ಠೇವಣಿಯನ್ನು ಹೂಡಿಕೆ ಮಾಡಿದ ರೀತಿಯಲ್ಲಿ ಆಗುತ್ತದೆ. ರಿಕರಿಂಗ್ ಡೆಪಾಸಿಟ್ ಯೋಜನೆ ನಲ್ಲಿ 6.7% ಬಡ್ಡಿ ದರದ ಲೆಕ್ಕಾಚಾರದಲ್ಲಿ ನೀವು ಈ ಯೋಜನೆಯ ಮೇಲೆ ಮಾಡಿರುವಂತಹ ಹೂಡಿಕೆಯ ಮೇಲೆ ಹೆಚ್ಚುವರಿ ಯಾಗಿ 34097 ರೂಪಾಯಿಗಳನ್ನು ಪಡೆದುಕೊಳ್ಳಲಿದ್ದೀರಿ.

ಅದೇ ರೀತಿಯಲ್ಲಿ ನೀವು ರಿಕರಿಂಗ್ ಡೆಪಾಸಿಟ್ ಯೋಜನೆ ನಲ್ಲಿ ಪ್ರತಿ ತಿಂಗಳಿಗೆ 7,000 ಉಳಿತಾಯವನ್ನು ಮಾಡಲು ಸಾಧ್ಯವಾದರೆ ಐದು ವರ್ಷಗಳ ನಂತರ ಈ ಯೋಜನೆಯಲ್ಲಿ ನೀವು ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಕೂಡ ತಿಳಿದುಕೊಳ್ಳೋಣ ಬನ್ನಿ. ಐದು ವರ್ಷಗಳವರೆಗೆ ರೂ.7,000 ಹಣವನ್ನು ನೀವು ಪ್ರತಿ ತಿಂಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಒಟ್ಟಾರೆಯಾಗಿ 4.20 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದಂತಾಗುತ್ತದೆ. ಇದರ ಮೇಲೆ ನೀವು ಹೆಚ್ಚುವರಿ ಆಗಿ 77400 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.

ರಿಕರಿಂಗ್ ಡೆಪಾಸಿಟ್ ಯೋಜನೆ ಅನ್ನೋದು ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಅತ್ಯಂತ ಲಾಭದಾಯಕ ಹಾಗೂ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವಂತಹ ಹೂಡಿಕೆಯಾಗಿದೆ. ಹೀಗಾಗಿ ನೀವು ಸುಲಭ ಹಾಗೂ ನಿಸ್ಸಂಕೋಚವಾಗಿ ಈ ಯೋಜನೆಯಲ್ಲಿ ನೀವು ಹಣವನ್ನ ಹೂಡಿಕೆ ಮಾಡಬಹುದಾಗಿದೆ ಹಾಗೂ ಪ್ರತಿ ತಿಂಗಳ ಸಂಬಳದಲ್ಲಿ ಇದಕ್ಕಾಗಿ ಒಂದಿಷ್ಟು ಹಣವನ್ನು ಮೀಸಲಾಗಿರಿಸಿ ನೀವು ಹೂಡಿಕೆ ಮಾಡಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ನೀವು ನಿಮ್ಮ ಆರ್ಥಿಕ ಗುರಿಗಳನ್ನು ಸಾಧಿಸುವಂತಹ ಅವಕಾಶ ಹೆಚ್ಚಾಗಿರುತ್ತದೆ.

Post office Scheme