Shani: 2028 ರ ವರೆಗೆ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಶನಿ ನಿಮ್ ಜೀವನದಲ್ಲಿ ಎಂಥಾ ಬದಲಾವಣೆ ತರ್ನಾನೆ ನೋಡಿ!

Shani: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನ್ಯಾಯಾಧಾತ ಆಗಿರುವಂತಹ ಶನಿ ಕುಂಭ ರಾಶಿಯಲ್ಲಿ ಇದ್ದು ಮುಂದಿನ ವರ್ಷ ಅಂದರೆ 2025 ರಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಮಕರ ರಾಶಿ ಅವರಿಗೆ ಸಾಡೇಸಾತಿಯಿಂದ ವಿಮುಕ್ತಿ ಸಿಗುತ್ತದೆ. ಇನ್ನು ಕುಂಭ ರಾಶಿಯವರ ಸಾಡೇಸಾತಿ ಎನ್ನುವುದು 2028ಕ್ಕೆ ಕೊನೆಗೊಳ್ಳುತ್ತದೆ ಹಾಗೂ ಈ ಸಂದರ್ಭದಲ್ಲಿ ಉಳಿದ ಮೂರು ರಾಶಿಯವರಿಗೆ ಅದೃಷ್ಟದ ಪರಿಣಾಮ ಸಿಗಲಿದ್ದು ಆ ಅದೃಷ್ಟವಂತರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ(Gemini)

2025 ರಲ್ಲಿ ಮಿಥುನ ರಾಶಿಯವರು ಯಾವುದೇ ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಅಂತ ಇದ್ರೆ ಖಂಡಿತವಾಗಿ ಅವರಿಗೆ ವ್ಯಾಪಾರದಲ್ಲಿ ಶುಭಾರಂಭ ಸಿಗಲಿದೆ ಹಾಗೂ ಕೈತುಂಬ ಲಾಭ ಸಂಪಾದನೆ ಆಗಲಿದೆ. ಒಂದು ವೇಳೆ ನೀವು ನಿಮ್ಮ ಕೆಲಸದ ಸ್ಥಳವನ್ನು ಇನ್ನಷ್ಟು ವಿಸ್ತರಣೆ ಮಾಡಬೇಕು ಎನ್ನುವಂತಹ ಯೋಜನೆಯನ್ನು ಹೊಂದಿದ್ದರೆ ಖಂಡಿತವಾಗಿ ಇದೊಂದು ಶುಭ ಸಮಯ ಎಂದು ಹೇಳಬಹುದಾಗಿದೆ. ವ್ಯವಹಾರದಲ್ಲಿ ಖಂಡಿತವಾಗಿ ನೀವು ಕೈತುಂಬ ಲಾಭ ಸಂಪಾದನೆ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ನಿಮ್ಮ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗುವುದರಿಂದಾಗಿ ದೂರ ಪ್ರಯಾಣ ಮಾಡುವಂತಹ ಸಾಧ್ಯತೆ ಇದೆ ಆದರೆ ಇದರಲ್ಲಿ ಕೂಡ ನಿಮಗೆ ಲಾಭ ಸಿಗುತ್ತೆ.

ಕರ್ಕ ರಾಶಿ(Cancer)

ಕರ್ಕ ರಾಶಿಯವರು ತಾವು ಮಾಡುವಂತಹ ಕೆಲಸದಲ್ಲಿ ಸಂಗಾತಿಯಿಂದ ಸಂಪೂರ್ಣ ಸಹಕಾರವನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಮಾಡುವ ಕೆಲಸ ಖಂಡಿತವಾಗಿ ಯಶಸ್ವಿಯಾಗಲಿದೆ. ಸಾಕಷ್ಟು ಸಮಯಗಳಿಂದ ಒಂಟಿಯಾಗಿರುವವರು ಸ್ನೇಹಿತರ ರೂಪದಲ್ಲಿ ಸಾಕಷ್ಟು ಆಗಂತುಕರನ್ನು ಕೂಡ ಭೇಟಿಯಾಗುವ ಸಾಧ್ಯತೆ ಇದೆ ಅವರ ಜೊತೆಗೆ ನಿಮ್ಮ ಸ್ನೇಹ ಪರಿವರ್ತನೆ ಆಗಲಿದೆ. ಒಂದು ವೇಳೆ ನೀವು ಸಾಕಷ್ಟು ಸಮಯಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಎಲ್ಲಾ ಸಮಸ್ಯೆಗಳು ದೂರವಾಗಲಿವೆ.

ಮೀನ ರಾಶಿ(Pisces)

ಕುಂಭ ರಾಶಿಯನ್ನು ತೊರೆದು ಶನಿ ಮೀನ ರಾಶಿಯನ್ನೇ ಪ್ರವೇಶಿಸುವ ಕಾರಣದಿಂದಾಗಿ ಮೀನ ರಾಶಿಯವರನ್ನು ಶನಿ ಇರುವಂತಹ ಎಲ್ಲಾ ಸಮಸ್ಯೆಗಳಿಂದ ಹೊರತರಲ್ಲಿದ್ದಾನೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಎನ್ನುವುದನ್ನು ಶನಿಯ ಕೃಪಾಕಟಾಕ್ಷದಿಂದ ಕಳೆದುಕೊಳ್ಳಬಹುದಾಗಿದೆ. ಆರ್ಥಿಕವಾಗಿ ಕೂಡ ಮೀನ ರಾಶಿಯವರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ಈ ಸಮಯದಲ್ಲಿ ಕೈತುಂಬ ಹಣವನ್ನು ಸಂಪಾದನೆ ಮಾಡುವ ಮೂಲಕ ನೀವು ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಹಾಗೂ ಯಾವುದೇ ಸಾಲ ಇದ್ದರೂ ಕೂಡ ಎಲ್ಲವನ್ನು ತೀರಿಸಿಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಅಂದುಕೊಂಡಿದ್ದೆಲ್ಲವನ್ನು ಕೂಡ ಸಾಧಿಸುವಂತಹ ದೈವಾನುಗ್ರಹ ನಿಮಗೆ ಈ ಸಂದರ್ಭದಲ್ಲಿ ಆಗಲಿದೆ.

Shani