Astrology: ಜೂನ್ ತಿಂಗಳಿನಿಂದ ಈ ರಾಶಿಯವರು ಆಡಿದ್ದೆ ಆಟ. ಸಿಗಲಿದೆ ಕೈತುಂಬ ಅದೃಷ್ಟ.

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ ತಿಂಗಳಿನಲ್ಲಿ ಸಾಕಷ್ಟು ಗ್ರಹಗಳು ರಾಶಿ ಬದಲಾವಣೆಯನ್ನು ಮಾಡಲಿದ್ದಾರೆ. ಇದರಿಂದಾಗಿ ಇದರ ಪರಿಣಾಮ ನೇರವಾಗಿ ದ್ವಾದಶ ರಾಶಿಗಳ ಮೇಲೆ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ನಾವು ಮಾತನಾಡೋಕೆ ಹೊರಟಿರೋದು ಇದರಿಂದಾಗಿ ಲಾಭವನ್ನು ಪಡೆದುಕೊಳ್ಳಲಿರುವಂತಹ ಆ ಮೂರು ವಿಶೇಷ ರಾಶಿಯವರ ಬಗ್ಗೆ. ಹಾಗಿದ್ರೆ ಬನ್ನಿ ಜೂನ್ ತಿಂಗಳಿನಲ್ಲಿ ವಿಶೇಷ ಲಾಭವನ್ನು ಪಡೆದುಕೊಳ್ಳಲಿರುವಂತಹ ಆ ಮೂರು ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ(Aries)

ಈ ಸಂದರ್ಭದಲ್ಲಿ ಮೇಷ ರಾಶಿಯವರು ಅಂದುಕೊಂಡ ರೀತಿಯಲ್ಲಿ ಅವರಿಗೆ ಬೇಕಾಗುವಂತಹ ಪ್ರತಿಯೊಂದು ಸುಖ ಸಮೃದ್ಧಿ ಸಿಗಲಿದೆ ಹಾಗೂ ಕೈತುಂಬ ಹಣ ಸಂಪಾದನೆ ಮಾಡುವಂತಹ ಅವಕಾಶ ಕೂಡ ದೊರಕಲಿದೆ. ಇದರಿಂದಾಗಿ ನಿಮ್ಮ ಹದಗೆಟ್ಟಿರುವಂತಹ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಮೇಷ ರಾಶಿಯವರಿಗೆ ನೀಡಲಾಗುವಂತಹ ಹೊಸ ಜವಾಬ್ದಾರಿಗಳನ್ನು ಅವರು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಾರೆ. ಪ್ರತಿಯೊಂದು ಕೆಲಸಗಳನ್ನು ಕೂಡ ಅವರು ನೀಡಿರುವ ಸಮಯಕ್ಕಿಂತ ಒಳಗೆ ಮುಗಿಸಿ ಕೊಡುತ್ತಾರೆ. ನಿಮ್ಮ ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ಕೂಡ ನಿಮಗೆ ಸಹಾಯ ಮಾಡುತ್ತಾರೆ. ವ್ಯಾಪಾರದಲ್ಲಿ ತಮ್ಮ ನಿರೀಕ್ಷೆಗಿಂತ ಹೆಚ್ಚಾಗಿ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ.

ವೃಷಭ ರಾಶಿ(Taurus)

ಸಾಕಷ್ಟು ಸಮಯಗಳಿಂದ ವಿದೇಶ ಯಾತ್ರೆ ಮಾಡಬೇಕು ಎನ್ನುವಂತಹ ವೃಷಭ ರಾಶಿಯವರ ಕನಸು ನನಸಾಗಲಿದೆ ಹಾಗೂ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಂತಹ ಅವಕಾಶ ದೊರಕಲಿದ್ದು ತಮ್ಮನ್ನು ತಾವು ಆಧ್ಯಾತ್ಮಿಕವಾಗಿ ಬದಲಾಯಿಸಿಕೊಳ್ಳಲಿದ್ದಾರೆ. ಜೀವನ ಸಂಗಾತಿಯ ಜೊತೆಗೆ ಸ್ವಲ್ಪಮಟ್ಟಿಗೆ ಮನಸ್ತಾಪ ಮೂಡಿ ಬರಬಹುದು ಆದರೆ ಅದೇ ರೀತಿಯಲ್ಲಿ ಪ್ರೀತಿ ಕೂಡ ಹೆಚ್ಚಾಗುತ್ತೆ. ಉನ್ನತ ವ್ಯಾಸಂಗಕ್ಕಾಗಿ ಬೇರೆ ದೇಶಗಳಿಗೆ ಹೋಗುವಂತಹ ಅವಕಾಶ ಕೂಡ ನಿಮಗೆ ಹುಡುಕಿಕೊಂಡು ಬರಬಹುದಾಗಿದೆ. ಮಾಡುತ್ತಿರುವ ಕೆಲಸದಲ್ಲಿ ಪರಿಶ್ರಮ ಇಟ್ಟು ಕೆಲಸ ಮಾಡಿಕೊಂಡು ಒಂದಲ್ಲ ಒಂದು ದಿನ ಒಳ್ಳೆಯ ಪ್ರತಿಫಲವನ್ನು ಪಡೆದುಕೊಳ್ಳುತ್ತೀರಿ.

ಮಿಥುನ ರಾಶಿ(Gemini)

ಸಾಕಷ್ಟು ವರ್ಷಗಳಿಂದ ಒಂದೇ ಕೆಲಸದಲ್ಲಿ ಪರಿಶ್ರಮದಿಂದ ಕೆಲಸ ಮಾಡುತ್ತಿರುವಂತಹ ಮಿಥುನ ರಾಶಿಯವರು ಆ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ ಹಾಗೂ ದೊಡ್ಡ ಮಟ್ಟದ ಜವಾಬ್ದಾರಿಯನ್ನು ಕೂಡ ಅವರಿಗೆ ವಹಿಸಲಾಗುತ್ತದೆ. ವರಿಷ್ಠ ಅಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಲಿದೆ. ಯಾವುದೇ ಕ್ಷೇತ್ರದಲ್ಲಿ ಮಿಥುನ ರಾಶಿಯವರಿಗೆ ಹಣವನ್ನು ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಹೊಸ ವ್ಯಾಪಾರವನ್ನು ಕೂಡ ಶುರು ಮಾಡಿದ್ರೆ ಕೈ ತುಂಬಾ ಲಾಭವನ್ನು ಆರಂಭದಿಂದಲೇ ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಂಡಿತವಾಗಿ ನೀವು ನಿಮ್ಮ ಕನಸಿನಲ್ಲಿ ಅಂದುಕೊಂಡಿರುವುದನ್ನು ನನಸು ಮಾಡಿಕೊಳ್ಳೋದಕ್ಕೆ ಇದು ಸೂಕ್ತ ಸಮಯ.

Astrology