Tulsi Plant: ಈ ಮೂರು ವಿಶೇಷ ತಿಂಗಳುಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಲಕ್ಷ್ಮಿ ಸದಾ ಕಾಲಕ್ಕೂ ನಿಮ್ಮಲ್ಲಿ ನೆಲೆಸಿರ್ತಾಳೆ, ದುಡ್ದಿಗೂ ಕೊರತೆ ಇಲ್ಲ!

ತುಳಸಿ ಗಿಡ ಶಾಸ್ತ್ರಗಳ ಪ್ರಕಾರ ಅದನ್ನು ನೆಟ್ಟಿರುವಂತಹ ಒಬ್ಬ ಮನುಷ್ಯನ ಜೀವನದಲ್ಲಿ ಸಾಕಷ್ಟು ಧನಾತ್ಮಕ ರೂಪದಲ್ಲಿ ಪರಿಣಾಮ ಬೀರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ ಯಾಕೆಂದರೆ ಇದರಲ್ಲಿ ಶ್ರೀಮನ್ನಾರಾಯಣನ ಜೊತೆಗೆ ಮಹಾಲಕ್ಷ್ಮಿ ಕೂಡ ನೆಲೆಸಿರುತ್ತಾಳೆ ಎಂಬುದಾಗಿ ಶಾಸ್ತ್ರಗಳು ಪ್ರತಿಪಾದಿಸುತ್ತವೆ. ಹೀಗಾಗಿ ದೈನಂದಿನ ತುಳಸಿಯ ಪೂಜೆಯ ಮೂಲಕ ನೀವು ಅವರಿಬ್ಬರನ್ನು ಕೂಡ ಪ್ರಸನ್ನಗೊಳಿಸಬಹುದಾಗಿದೆ. ಆದರೆ ಇದಕ್ಕಿಂತ ಮುಂಚೆ ನೀವು ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಅವುಗಳನ್ನು ಯಾವ ದಿಕ್ಕಿನಲ್ಲಿ ನೆಡುವುದು ಹಾಗೂ ಯಾವ ತಿಂಗಳಿನಲ್ಲಿ ನೆಟ್ಟರೆ ಶುಭಫಲವನ್ನು ಪಡೆಯಬಹುದೆನ್ನುವುದರ ಬಗ್ಗೆ ಕೂಡ ನೀವು ಗಮನಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗುತ್ತದೆ.

  • ತುಳಸಿ ಗಿಡ ಅತ್ಯಂತ ಪವಿತ್ರ ಗಿಡವಾಗಿದ್ದು ಇದನ್ನು ಸರಿಯಾದ ದಿಕ್ಕಿನಲ್ಲಿ ನೀಡುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗಾಗಿ ಇಷ್ಟೊಂದು ಪವಿತ್ರತೆಯನ್ನು ಹೊಂದಿರುವಂತಹ ಹಾಗೂ ಮನೆಗೆ ಶುಭವನ್ನು ತರುವಂತಹ ತುಳಸಿ ಗಿಡವನ್ನು ನಾವು ಪೂರ್ವ ದಿಕ್ಕಿನಲ್ಲಿ ನೀಡುವುದು ಸಾಕಷ್ಟು ಉತ್ತಮ ಪರಿಣಾಮವನ್ನು ನೀಡುತ್ತದೆ ಎಂಬುದಾಗಿ ಹೇಳಬಹುದಾಗಿದೆ. ಹೀಗಾಗಿ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಡುವಾಗ ಪೂರ್ವ ದಿಕ್ಕಿನಲ್ಲಿ ನೆಡಿ.
  • ಇನ್ನು ತುಳಸಿ ಗಿಡವನ್ನು ಯಾವ ದಿನದಲ್ಲಿ ನೆಟ್ಟರೆ ಶುಭ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎನ್ನುವ ವಿಚಾರದ ಬಗ್ಗೆ ಕೂಡ ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ವಿಶೇಷವಾಗಿ ಚೈತ್ರ ಮಾಸದ ಗುರುವಾರ ಹಾಗೂ ಶುಕ್ರವಾರದ ದಿನದಂದು ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದಾಗಿ ಸಾಕಷ್ಟು ಶುಭ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಬೆಳಗಿನ ಸಮಯದಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡಿದರೆ ನಿಮಗೆ ಇನ್ನೂ ಸಾಕಷ್ಟು ಶುಭ ಫಲಿತಾಂಶ ಸಿಗಲಿದೆ.
  • ತುಳಸಿ ಗಿಡವನ್ನು ನೆಡುವುದಕ್ಕೆ ಶಾಸ್ತ್ರಗಳಲ್ಲಿ ಮೂರು ತಿಂಗಳುಗಳ ಆಯ್ಕೆಯನ್ನು ಕೂಡ ನೀಡಲಾಗಿದ್ದು ಈ ಮೂರು ತಿಂಗಳಲ್ಲಿ ಇದನ್ನು ನೆಡುವುದರ ಮೂಲಕ ನೀವು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ. ಅಕ್ಟೋಬರ್ ನವೆಂಬರ್ ಹಾಗೂ ಫೆಬ್ರವರಿ ತಿಂಗಳಲ್ಲಿ ಹೆಚ್ಚಿನ ಉಷ್ಣಾಂಶ ಇರುವುದಿಲ್ಲ ಹಾಗೂ ತುಂಬಾ ಕೋಲ್ಡ್ ಆಗಿ ಕೂಡ ಇರೋದಿಲ್ಲ ಈ ಸಂದರ್ಭದಲ್ಲಿ ನೆಡುವುದು ಒಳ್ಳೆಯದು ಎಂಬುದಾಗಿ ಪರಿಗಣಿಸಲಾಗುತ್ತದೆ.
  • ಸೋಮವಾರ ಭಾನುವಾರ ಹಾಗೂ ಬುಧವಾರದ ದಿನದಂದು ಪವಿತ್ರವಾಗಿರುವಂತಹ ತುಳಸಿ ಗಿಡವನ್ನು ಶಾಸ್ತ್ರಗಳ ಪ್ರಕಾರ ಯಾವತ್ತೂ ಕೂಡ ನೆಡಬಾರದು ಎಂಬುದಾಗಿ ಪರಿಗಣಿಸಲಾಗುತ್ತದೆ.

ತುಳಸಿ ಗಿಡವನ್ನು ನೆಡುವ ಸಂದರ್ಭದಲ್ಲಿ ಈ ಮೇಲೆ ಹೇಳಿರುವಂತಹ ಶಾಸ್ತ್ರಗಳ ಪ್ರಕಾರ ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ನೆಡುವುದು ಅಥವಾ ನೆಡದೇ ಇರುವುದು ಅದಕ್ಕೆ ತಕ್ಕದಾಗಿರುವಂತಹ ಪರಿಣಾಮವನ್ನು ಫಲಿತಾಂಶವನ್ನು ನಿಮ್ಮ ಜೀವನದಲ್ಲಿ ತರುತ್ತದೆ ಎಂಬುದಾಗಿ ಹೇಳಿದೆ. ಹೀಗಾಗಿ ಈ ಮಾರ್ಗದರ್ಶನವನ್ನು ಅನುಸರಿಸುವುದರ ಮೂಲಕ ನಿಮ್ಮ ಮನೆಯಲ್ಲಿ ಭಗವಾನ್ ಶ್ರೀಮನ್ನಾರಾಯಣ ಜೊತೆಗೆ ನೆಲೆಸಿರುವಂತಹ ಲಕ್ಷ್ಮೀದೇವಿಯ ಪ್ರತಿಕವಾಗಿರುವ ತುಳಸಿ ಗಿಡವನ್ನು ಪಾಲನೆ ಪೋಷಣೆ ಮಾಡಬಹುದಾಗಿದೆ.

Tulsi Plant