Government Rules: ಭಾರತದಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳಿಗೆ ಕೊನೆಯ ದಿನಾಂಕವನ್ನು ಘೋಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ!

Government Rules: ದೇಶದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯಾವ ರೀತಿಯಲ್ಲಿ ಏರಿಕೆ ಕಂಡಿದೆ ಅನ್ನೋದನ್ನ ವಿಶೇಷವಾಗಿ ವಿವರಿಸಿ ನಿಮಗೆ ಹೇಳಬೇಕಾದ ಅಗತ್ಯವಿಲ್ಲ ಇದರ ಜೊತೆಗೆ ಈ ಇಂಧನಗಳನ್ನು ಬಳಸಿಕೊಂಡು ಓಡಾಡುವಂತಹ ವಾಹನಗಳಿಂದ ಪರಿಸರ ಮಾಲಿನ್ಯ ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ. ಇದರ ನಡುವಲ್ಲಿಯ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಹಾಗೂ ಗ್ರಾಹಕರಲ್ಲಿ ಇದರ ಬೇಡಿಕೆ ಕೂಡ ಏರಿಕೆಯಾಗುತ್ತಿದೆ.

ಇನ್ನು ಕೇಂದ್ರ ಸರ್ಕಾರದ ಸಾರಿಗೆ ಹಾಗೂ ರಸ್ತೆ ಸಚಿವ ಆಗಿರುವಂತಹ ನಿತಿನ್ ಗಡ್ಕರಿ ಅವರು ಈ ವಿಚಾರದ ಬಗ್ಗೆ ಮಾತನಾಡುತ್ತಾ ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ರಸ್ತೆಗಳ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಮಾಯ ಮಾಡುವ ಬಗ್ಗೆ ಮಾತನಾಡಿದ್ದಾರೆ. ಹೆಚ್ಚಾಗುತ್ತಿರುವಂತಹ ಪರಿಸರ ಮಾಲಿನ್ಯವನ್ನು ನಿಯಂತ್ರಣ ಮಾಡಲು ಈ ನಿಯಮವನ್ನು ಹಾಗೂ ಕಾರ್ಯತಂತ್ರಗಳನ್ನು ರೂಪಿಸುವಂತಹ ವಿಚಾರದ ಬಗ್ಗೆ ಕೇಂದ್ರ ಸಚಿವರಾಗಿರುವಂತಹ ನಿತಿನ್ ಗಡ್ಕರಿ ರವರು ಮುಕ್ತವಾಗಿ ಮಾತನಾಡಿದ್ದಾರೆ.

ಹೌದು ನಿತಿನ್ ಗಡ್ಕರಿ ರವರು ಮುಂದಿನ 10 ವರ್ಷಗಳಲ್ಲಿ ಭಾರತದ ರಸ್ತೆಗಳ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಓಡಾಟವನ್ನ ನಿಲ್ಲಿಸಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳು ಓಡಾಡುವಂತಹ ಪ್ರಕ್ರಿಯೆಯನ್ನು ಜಾರಿಗೆ ತರುವಂತಹ ತಮ್ಮ ದೂರಾಲೋಚನೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ 10 ವರ್ಷದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್, ಎಥೆನಾಲ್ ಹಾಗೂ ಬಯೋಫ್ಯುಯಲ್ ಮೂಲಕ ಭಾರತದ ರಸ್ತೆಗಳಲ್ಲಿ ಓಡಾಟ ನಡೆಸುವಂತಹ ವಾಹನಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸುವಂತಹ ಉದ್ದೇಶವನ್ನು ಹೊಂದಿದ್ದಾರೆ.

2034ರ ವೇಳೆಗೆ ಕೇವಲ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ ಖಾಸಗಿ ವಲಯದಲ್ಲಿ ಕೂಡ ಭಾರತದ ರಸ್ತೆಗಳ ಮೇಲೆ ಒಂದೇ ಒಂದು ಪೆಟ್ರೋಲ್ ಹಾಗೂ ಡೀಸೆಲ್ ಗಳಿಂದ ಓಡುವಂತಹ ವಾಹನಗಳು ಇರೋದಿಲ್ಲ ಎಂಬುದಾಗಿ ಹೇಳಿದ್ದಾರೆ. ಪೆಟ್ರೋಲ್ ವಾಹನಗಳಿಗೆ ನೂರು ರೂಪಾಯಿ ಖರ್ಚು ಮಾಡುವ ಜಾಗದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಕೇವಲ ನಾಲ್ಕು ರೂಪಾಯಿಗಳ ಖರ್ಚು ನಡೆಯುತ್ತದೆ. ಇದೇ ವಿಚಾರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯ ಸಂಖ್ಯೆಯ ಬಗ್ಗೆ ಮಾತನಾಡುತ್ತಾ 2023ರಲ್ಲಿ 15 ಲಕ್ಷಕ್ಕೂ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಹಾಗೂ ಚಿಪ್ ಕಂಡಕ್ಟರ್ ಅನ್ನು ಭಾರತದಲ್ಲಿ ಉತ್ಪಾದನೆ ಮಾಡುವ ಮೂಲಕ ಈ ಬೆಲೆಯನ್ನು ಇನ್ನಷ್ಟು ಮುಂದಿನ ದಿನಗಳಲ್ಲಿ ತಗ್ಗಿಸುವಂತಹ ಕೆಲಸವನ್ನು ಮಾಡುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಕೂಡ ಪ್ರತಿಯೊಬ್ಬರೂ ಬೆಲೆಯ ವಿಚಾರದಲ್ಲಿ ಕೂಡ ಇಷ್ಟಪಡುವ ಹಾಗೆ ಮಾಡುತ್ತೇವೆ ಎಂಬುದಾಗಿ ಆಶ್ವಾಸನೆ ನೀಡಿದ್ದಾರೆ.

Government Rules