Astrology: ಜೂನ್ ತಿಂಗಳಿಂದ ಈ ಐದು ರಾಶಿಯವರ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೀವನ ತಿಂಗಳಿನಲ್ಲಿ ಸಾಕಷ್ಟು ಗ್ರಹಗಳ ಚಲನೆ ಕಂಡು ಬರಲಿವೆ. ಇವುಗಳಿಂದ ರಾಶಿ ಚಕ್ರಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೀವನ ತಿಂಗಳಿನಲ್ಲಿ ಮಹಾಲಕ್ಷ್ಮಿಯ ಆಶೀರ್ವಾದ ವಿಶೇಷವಾಗಿ ಈ ಐದು ರಾಶಿಯವರ ಮೇಲೆ ಇರುತ್ತದೆ ಎಂಬುದಾಗಿ ಪರಿಗಣಿಸಲಾಗಿದ್ದು ಆ ಐದು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ

ಕುಟುಂಬದ ಜೊತೆಗೆ ಮೇಷ ರಾಶಿಯವರು ಈ ಸಂದರ್ಭದಲ್ಲಿ ದೂರ ಪ್ರಯಾಣ ಮಾಡುವಂತಹ ಸಾಧ್ಯತೆಯಿದ್ದು ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಂತಹ ಸಾಧ್ಯತೆ ಹೆಚ್ಚಾಗಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ. ವ್ಯಾಪಾರಸ್ಥರಿಗೆ ತಮ್ಮ ವ್ಯಾಪಾರದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿನ ನಿಗವಹಿಸಿದರೆ ಸಾಕು ಕೈ ತುಂಬಾ ಲಾಭ ಸಂಪಾದನೆ ಮಾಡುವ ಸಾಧ್ಯತೆ ಇದೆ.

ಮಿಥುನ ರಾಶಿ

ಕೆಲಸ ಮಾಡುವ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲವನ್ನ ಪಡೆದುಕೊಳ್ಳುತ್ತೀರಿ ಹೀಗಾಗಿ ಉತ್ತಮ ಕೆಲಸದ ಫಲಿತಾಂಶವನ್ನು ಕೂಡ ನೀವು ಪಡೆಯುತ್ತೀರಿ. ನಿಮ್ಮ ಜೀವನದ ಎಲ್ಲಾ ಕಿರಿಕಿರಿಗಳು ಜೂನ್ ಮೊದಲ ವಾರದಲ್ಲಿ ಮುಗಿಯಲಿದೆ. ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಶಾಂತಿ ತುಂಬಿರಲಿದೆ. ದೂರ ಪ್ರಯಾಣದಲ್ಲಿ ಕೂಡ ನಿಮಗೆ ಸಂತೋಷ ಸಿಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಸಾಕಷ್ಟು ಸಮಯಗಳಿಂದ ಕೆಲಸಕ್ಕಾಗಿ ಹುಡುಕುತ್ತಿರುವಂತಹ ಕರ್ಕ ರಾಶಿ ಅವರಿಗೆ ಈ ಸಂದರ್ಭದಲ್ಲಿ ಅವರಿಗೆ ಇಷ್ಟ ಆಗುವಂತಹ ಕೆಲಸ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕುಟುಂಬದ ಸಮಸ್ಯೆಗಳಿಂದ ಕೂಡ ಪರಿಹಾರ ಸಿಗಲಿದೆ. ಯಾರೊಂದಿಗೂ ಕೂಡ ವಾದ ಮಾಡುವುದಕ್ಕೆ ಹೋಗಬೇಡಿ ನಿಮ್ಮ ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಕೊಳ್ಳಿ. ಲಕ್ಷ್ಮೀದೇವಿ ನಿಮ್ಮ ಮೇಲೆ ಕಷ್ಟದ ಸಂದರ್ಭದಲ್ಲಿ ಕರುಣೆ ತೋರುತ್ತಾಳೆ.

ತುಲಾ ರಾಶಿ

ಈ ಸಂದರ್ಭದಲ್ಲಿ ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿ ಆಶೀರ್ವಾದದಿಂದಾಗಿ ನಿಮ್ಮ ಆದಾಯ ಹೆಚ್ಚಾಗಬಹುದು ಅದೇ ರೀತಿಯಲ್ಲಿ ನೀವು ಖರ್ಚನ್ನು ಕೂಡ ಹೆಚ್ಚು ಮಾಡಿಕೊಳ್ಳುತ್ತೀರಿ ಆದರೆ ಇಲ್ಲಿ ನೀವು ಉಳಿತಾಯ ಮಾಡುವುದಕ್ಕೆ ಪ್ರಾರಂಭ ಮಾಡಬೇಕಾಗಿದೆ. ನೀವು ಮಾಡುವಂತಹ ಕೆಲಸದಲ್ಲಿ ನಿಮ್ಮ ಒಡಹುಟ್ಟಿದವರ ಸಹಾಯವನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ.

ಮಕರ ರಾಶಿ

ಈ ಸಂದರ್ಭದಲ್ಲಿ ಮಕರ ರಾಶಿಯವರು ಬಳಲುತ್ತಿರುವ ಮಾನಸಿಕ ಅನಾರೋಗ್ಯದಿಂದ ಹೊರಬರುವುದಕ್ಕೆ ಮಹಾಲಕ್ಷ್ಮಿ ಆಶೀರ್ವಾದ ಸಹಾಯ ಮಾಡುತ್ತದೆ. ಇದರಿಂದ ಹೊರಗೆ ಬಂದು ಆಧ್ಯಾತ್ಮಿಕದ ಕಡೆಗೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ. ಸಾಕಷ್ಟು ಸಮಯಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವಂತಹ ಅವಕಾಶ ಸಿಗಲಿದೆ. ಕೆಲಸದ ಸ್ಥಳದಲ್ಲಿ ಕೂಡ ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆದುಕೊಳ್ಳಬಹುದಾಗಿದೆ. ಆರ್ಥಿಕ ವಿಚಾರಕ್ಕೆ ಬಂದರೆ ಹಣಕಾಸಿನ ಸಂಪಾದನೆ ಸ್ವಲ್ಪ ಮಟ್ಟಿಗೆ ಈ ಸಂದರ್ಭದಲ್ಲಿ ಹೆಚ್ಚಾಗಲಿದೆ.

Astrology