Free Training: ಕಂಪ್ಯೂಟರ್ ಡಿಟಿಪಿ ಹಾಗೂ ಗ್ರಾಫಿಕ್ ಡಿಸೈನಿಂಗ್ ಉಚಿತ ತರಬೇತಿ; ಅರ್ಜಿ ಸಲ್ಲಿಸಲು ಡೈರೆಂಟ್ ಲಿಂಕ್ ಇಲ್ಲಿದೆ!

Free Training: ಒಂದು ವೇಳೆ ನಿಮಗೆ ಕಂಪ್ಯೂಟರ್ ಗ್ರಾಫಿಕ್ಸ್ ಡಿಸೈನಿಂಗ್ ಹಾಗೂ ಡಿಟಿಪಿ ನಲ್ಲಿ ಆಸಕ್ತಿ ಇದ್ರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ರುಡೆಟ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಉಚಿತವಾಗಿ 45 ದಿನಗಳ ಕಂಪ್ಯೂಟರ್ ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಅನ್ನು ಮಾಡಬಹುದಾಗಿದೆ. ಈ ಕೋರ್ಸ್ ಜುಲೈ 10 ರಿಂದ ಪ್ರಾರಂಭವಾಗಲಿದ್ದು ವಿಶೇಷವಾಗಿ ಗ್ರಾಮೀಣ ಭಾಗದ ಯುವಕ ಹಾಗೂ ಯುವತಿಯರನ್ನ ಕೇಂದ್ರೀಕರಿಸಿಕೊಂಡು ಈ ಆಹ್ವಾನವನ್ನು ಮಾಡಲಾಗಿದೆ ಎಂದು ಹೇಳಬಹುದಾಗಿದೆ.

ಗ್ರಾಫಿಕ್ ಡಿಸೈನಿಂಗ್/ಡಿಟಿಪಿ ಉಚಿತ ಟ್ರೈನಿಂಗ್!

ಗ್ರಾಮೀಣ ಭಾಗದ ಯುವಕ ಯುವತಿಯರಿಗೆ 45 ದಿನಗಳ ಕಾಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ಕಡೆಯಿಂದ ಕಂಪ್ಯೂಟರ್ ಗ್ರಾಫಿಕ್ ಡಿಸೈನಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ವಿಶೇಷವಾಗಿ ಈ ವಿಭಾಗದಲ್ಲಿ ಗ್ರಾಮೀಣ ಭಾಗದ ಯುವತಿಯರು ಹಾಗೂ ಯುವಕರು ಉತ್ತಮ ಜ್ಞಾನವನ್ನು ಪಡೆದುಕೊಳ್ಳಲು ಈ ಕಾರ್ಯಕ್ರಮದ ಆಯೋಜನೆಯಾಗಿದೆ. ಈ ತರಬೇತಿಯಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಡಿಸೈನಿಂಗ್ ಜೊತೆಗೆ ಡೆಸ್ಕ್ ಟಾಪ್ ಪಬ್ಲಿಷಿಂಗ್, ಸಾಫ್ಟ್ವೇರ್ ನಲ್ಲಿ ಇರುವಂತಹ ಬೇರೆ ಬೇರೆ ಕ್ಯಾಟಗರಿಯ ಸಂಪೂರ್ಣ ಜ್ಞಾನವನ್ನು ಹಾಗೂ ಮಾಹಿತಿಯನ್ನು ಪಡೆದುಕೊಳ್ಳುವುದು ಕೂಡ ಸೇರಿಕೊಂಡಿದೆ. ಪ್ರಿಂಟಿಂಗ್ ಹಾಗೂ ವೆಬ್ ಡಿಸೈನ್ ಗಳಂತಹ ಬೇರೆ ಬೇರೆ ಕ್ಷೇತ್ರಗಳಲ್ಲಿ ಇರುವಂತಹ ಉದ್ಯೋಗಗಳಿಗೆ ನಿಮ್ಮನ್ನು ಸಿದ್ಧಪಡಿಸುವಂತಹ ತರಬೇತಿ ಕೂಡ ಎಲ್ಲಿ ನಡಿತಾ ಇದೆ ಅನ್ನೋದು ಮತ್ತೊಂದು ವಿಶೇಷ ಆಗಿದ್ದು ನೀವು ಈ ಎಲ್ಲಾ ಮಾಹಿತಿಗಳನ್ನು ಈ ತರಬೇತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಗ್ರಾಫಿಕ್ ಡಿಸೈನ್ ನಲ್ಲಿ ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿದರೆ ಖಂಡಿತವಾಗಿ 45 ದಿನಗಳ ಈ ತರಬೇತಿ ಎನ್ನುವುದು ನಿಮಗೆ ಸಾಕಷ್ಟು ಸಹಾಯಕಾರಿಯಾಗಿ ಪರಿಣಮಿಸಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!

ವಯೋ ಮಾನ್ಯತೆಯ ಬಗ್ಗೆ ಮಾತನಾಡುವುದಾದರೆ 18ರಿಂದ 45 ವರ್ಷಗಳ ಒಳಗೆ ಇರುವವರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಓದಲು ಮತ್ತು ಬರೆಯಲು ಬರಬೇಕಾಗಿದೆ. ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಲೇಬೇಕು. ಇನ್ನು ಈ ತರಬೇತಿ ಆಹ್ವಾನಕ್ಕೆ ಗ್ರಾಮೀಣ ಪ್ರತಿಭೆಗಳಿಗೆ ಮೊದಲ ಆದ್ಯತೆ ಸಿಗ್ತಾ ಇದೆ.

ತರಬೇತಿ ನಿಮಗೆ ಉಚಿತವಾಗಿ ಸಿಕ್ತಾ ಇದೆ ಇದರ ಜೊತೆಗೆ ವಸತಿ ಹಾಗೂ ಊಟ ಕೂಡ ಉಚಿತವಾಗಿ ನಿಮಗೆ ಇಲ್ಲಿ ನಿಮಗೆ ದೊರಕುತ್ತದೆ. ಜೂನ್ 15 ನಿಮಗೆ ಅರ್ಜಿ ಸಲ್ಲಿಸುವುದಕ್ಕೆ ಇಲ್ಲಿ ಕೊನೆಯ ದಿನಾಂಕವಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ!

ಈ ತರಬೇತಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ನೀವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯ ರುಡ್ಲೆಟ್ ಸಂಸ್ಥೆಯನ್ನು ನೀವು ಸಂಪರ್ಕಿಸಬಹುದಾಗಿದ್ದು, ಮೊಬೈಲ್ ಸಂಖ್ಯೆ 9740982585.

Free Training