Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಬಗ್ಗೆ ಬಂತು ನೋಡಿ ಲೇಟೆಸ್ಟ್ ಅಪ್ಡೇಟ್; ನಿಮ್ಮ ಅಔಂಟ್ ಚೆಕ್ ಮಾಡಿ!

Gruhalakshmi Scheme: ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವಂತಹ ಐದು ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯು ಪ್ರಾರಂಭವಾಗಿ 10 ತಿಂಗಳು ಕಳೆದಿದ್ದು 10 ಕಂತಿನ ಹಣವನ್ನು ಕೂಡ ಈಗಾಗಲೇ ಸಂಬಂಧಪಟ್ಟಂತಹ ರಿಜಿಸ್ಟರ್ ಮಾಡಿಕೊಂಡಿರುವ ಮನೆಯ ಒಡತಿಯ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ಮಹಿಳೆಯರಿಗೆ ಪ್ರತಿ ತಿಂಗಳಿಗೆ 2000 ಗಳ ಸಹಾಯಧನವನ್ನು ನೀಡುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಈ ಮೂಲಕ ಮಾಡುತ್ತಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗಿರುವಂತಹ ಈ ಯೋಜನೆ ಇಂದಿನವರೆಗೂ ಕೂಡ ಅವಿರತವಾಗಿ ಯಾವುದೇ ತಡೆಯಿಲ್ಲದೆ ನಡೆದುಕೊಂಡು ಬರುತ್ತಿದೆ. ಆರಂಭದಲ್ಲಿ ಸಾಕಷ್ಟು ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದ ಈ ಯೋಜನೆ ಈಗ ರಾಜ್ಯದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನು ಈಗ ಚುನಾವಣೆಯ ಫಲಿತಾಂಶದ ನಂತರ 11ನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬುದಾಗಿ ಕಾಯುತ್ತಿದ್ದ ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ರಾಜ್ಯ ಸರ್ಕಾರದಿಂದ 11ನೇ ಕ್ರಾಂತಿಯ ಹಣದ ವರ್ಗಾವಣೆಯ ಬಗ್ಗೆ ಈಗ ಅಧಿಕೃತ ಅಪ್ಡೇಟ್ ಸಿಕ್ಕಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಬಗ್ಗೆ ಅಪ್ಡೇಟ್!

ಗೃಹಲಕ್ಷ್ಮಿ ಯೋಜನೆಯ 11ನೇ ಕ್ರಾಂತಿನ ಹಣ ವರ್ಗಾವಣೆ ಆಗೋದಕ್ಕಿಂತ ಮುಂಚೆ ರಾಜ್ಯದಲ್ಲಿ ಸಾಕಷ್ಟು ಮಹಿಳೆಯರಿಗೆ ಅವರ ಖಾತೆಗೆ ಹತ್ತನೇ ಕಂತಿನ ಹಣ ವರ್ಗಾವಣೆ ಆಗಿಲ್ಲ ಎನ್ನುವಂತಹ ಮಾಹಿತಿಗಳು ಕೂಡ ಕೇಳಿ ಬಂದಿದ್ದು ಇದರಲ್ಲಿ ಕೆಲವೊಂದು ಸರ್ವರ್ ಸಮಸ್ಯೆಗಳು ಕೂಡ ಇದೆ ಎಂಬುದಾಗಿ ಇಲಾಖೆಯ ಮೂಲಗಳಿಂದ ತಿಳಿದು ಬಂದಿದ್ದು ಇದು 11ನೇ ಕಂತಿನ ಹಣದ ಜೊತೆಗೆ ಖಂಡಿತವಾಗಿ ನಿಮಗೆ ಸಿಗಲಿದೆ ಎಂಬುದಾಗಿ ಇಲಾಖೆ ಹೇಳಿರುವಂತಹ ಮಾಹಿತಿ ಕೂಡ ಸಿಕ್ಕಿದೆ.

ಇನ್ನು 11ನೇ ಕಂತಿನ ವರ್ಗಾವಣೆ ಎನ್ನುವುದು ನಾಳೆಯಿಂದಲೇ ಉಡುಪಿ ಚಿಕ್ಕಮಗಳೂರು ಹಾಸನ ದಕ್ಷಿಣ ಕನ್ನಡ ಚಿತ್ರದುರ್ಗ ತುಮಕೂರು ಚಾಮರಾಜನಗರ ಜಿಲ್ಲೆಗಳಿಂದ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವರ್ಗಾವಣೆ ಆಗೋದಕ್ಕೆ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುವುದು ಬಾಕಿ ಇದ್ದರೆ ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗುವುದು ಬಾಕಿ ಇದ್ದರೆ ಯಾವುದೇ ತಡ ಮಾಡದೆ ಆದಷ್ಟು ಬೇಗ ಹೋಗಿ ಈ ಕೆಲಸಗಳನ್ನು ಮುಗಿಸಿಕೊಂಡು ಬನ್ನಿ ಇಲ್ಲವಾದಲ್ಲಿ ನೀವು ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರಬಹುದು.

Gruhalakshmi Scheme