Darshan Case: ಡಿ ಬಾಸ್ ಗಾಗಿ ಹೊರಗಡೆ ಜೈಕಾರ ಹಾಕಿದ ಅಭಿಮಾನಿಗಳಿಗೆ ಏನಾಗ್ತಿದೆ ಗೊತ್ತಾ? ಬೇಕಿತ್ತಾ ಇವೆಲ್ಲಾ!

Darshan Case: ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಕೂಡ ನೆನ್ನೆಯಿಂದ ಕರಾಳ ದಿನ ಆವರಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರೇಣುಕಾ ಸ್ವಾಮಿ ಎನ್ನುವ ಯುವಕರ ಮರ್ಡ-ರ್ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿ ಕೇಳಿ ಬರ್ತಾ ಇದ್ದು ಇದನ್ನು ಸಾಬೀತು ಪಡಿಸುವುದಕ್ಕೆ ಈಗಾಗಲೇ ಆರು ದಿನಗಳ ಪೊಲೀಸ್ ಕಸ್ಟಡಿಯನ್ನು ಕೂಡ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಒಟ್ಟಾರೆಯಾಗಿ 15 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಮಾಧ್ಯಮಗಳಲ್ಲಿ ರಾತ್ರಿ ನೀವು ನೋಡಿರಬಹುದು ಇವರಿಗೆ ಊಟಕ್ಕಾಗಿ ಬಿರಿಯಾನಿಯನ್ನು ಕೂಡ ತಂದಿರುವುದನ್ನ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನಟಿಗರು ಛೀಮಾರಿ ಹಾಕುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಪರ ಹಾಗೂ ವಿರೋಧ ಎರಡು ವಿಚಾರದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ಕಂಡುಬಂದಿದೆ. ಇನ್ನು ಈಗಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳು ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ತುಳಿಯೋದಕ್ಕಾಗಿ ಮಾಡಿರುವಂತಹ ಪಿತೂರಿ ಎಂಬುದಾಗಿ ತಮ್ಮ ನಟನನ್ನು ಸಮರ್ಥಿಸಿಕೊಳ್ಳುವಂತಹ ಕೆಲಸವನ್ನು ಇದರ ವಿರುದ್ಧವಾಗಿ ಕೂಡ ಸಾಕಷ್ಟು ಜನ ಮಾಧ್ಯಮ ಮೂಲದವರು ಹಾಗೂ ಇನ್ನಿತರರು ಇನ್ನಾದ್ರು ಬುದ್ಧಿ ಕಲಿಯಿರಿ ಎಂಬುದಾಗಿ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ನೆನ್ನೆಯಿಂದ ಜೈಕಾರ ಕೂಗುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ಈಗ ಏನಾಗಿದೆ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನ ಬಂಧಿಸಿದ ನಂತರ ಪೊಲೀಸ್ ಠಾಣೆಯ ಎದುರಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು ಜೈ ಡಿ ಬಾಸ್ ಎಂಬುದಾಗಿ ಘೋಷಣೆಯನ್ನು ಕೂಗ್ತಾ ಇದ್ರು. ಆದರೆ ಇವತ್ತು ಪೊಲೀಸ್ ಠಾಣೆಯ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಟಿ ರುಚಿಯನ್ನು ತೋರಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಪೊಲೀಸರು ಈ ವಿಚಾರದಲ್ಲಿ ಸಧ್ಯದ ಮಟ್ಟಿಗೆ ಸಂಪೂರ್ಣವಾಗಿ ಕಟ್ಟುನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತದೆ.

ಹೀಗಾಗಿ ಅಭಿಮಾನಿಗಳು ಪ್ರಕರಣ ನಡೆಯುವವರೆಗೂ ಕೂಡ ಈ ವಿಚಾರದ ಬಗ್ಗೆ ಪೊಲೀಸ್ ಠಾಣೆಯ ಮುಂದೆ ನಿಲ್ಲುವುದು ಇನ್ನಷ್ಟು ಶಿಕ್ಷೆಯನ್ನು ಪಡೆದುಕೊಳ್ಳುವಂತಹ ಸಾಧ್ಯತೆ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಸದ್ಯದ ಮಟ್ಟಿಗೆ ಇಡೀ ದೇಶದ ಪ್ರತಿಯೊಂದು ಭಾಷೆಯ ಮಾಧ್ಯಮಗಳಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಸಂಬಂಧಪಟ್ಟಂತಹ ಈ ಪ್ರಕರಣದ ಸುದ್ದಿ ಬಿತ್ತರವಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಕುಂಠಿತಗೊಂಡಿತ್ತು. ಅದರ ಮೇಲೆ ಈಗ ವಿವಾಹ ವಿಚ್ಛೇದನದ ಸುದ್ದಿಗಳು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಈ ಗಂಭೀರ ಪ್ರಕರಣ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಹೊಡೆತ ನೀಡುವ ಕೆಲಸ ಮಾಡಿದೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಯಾವ ರೀತಿಯಲ್ಲಿ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Darshan Case