Darshan Case: ಅದೊಂದು ವಸ್ತು ಬೇಕೇ ಬೇಕು ಅಂತ ಪೊಲೀಸರ ಬಳಿ ದರ್ಶನ್ ರವರ ರಿಕ್ವೆಸ್ಟ್! ಈ ಟೈಮಲ್ಲೂ ಅದು ಬೇಕಾ?

Darshan Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಲೇಟೆಸ್ಟ್ ಆಗಿ ಕೇಳಿ ಬರುತ್ತಿರುವಂತಹ ಈ ಪ್ರಕರಣದಲ್ಲಿ ಕ್ಷಣದಿಂದ ಕ್ಷಣಕ್ಕೆ ಒಂದೊಂದು ಮಾಹಿತಿಗಳು ನಿಜಕ್ಕೂ ಕೂಡ ಯಾವ ಸಿನಿಮಾಗಳು ಕಡಿಮೆ ಇರದಂತೆ ಟ್ವಿಸ್ಟ್ ಹಾಗೂ ಟರ್ನ್ ಗಳನ್ನು ಕಾಣುತ್ತಿವೆ. ಹೌದು ಗೆಳೆಯರೇ ಯಾಕೆಂದರೆ ಮೊದಲಿಗೆ ಯಾವುದೋ ವೈಶಮ್ಯಕ್ಕಾಗಿ ಈ ಪ್ರಕರಣ ನಡೆಯಲಿತ್ತು ಎಂಬುದಾಗಿ ತಿಳಿದು ಬಂದು ನಂತರ ಅದು ಪವಿತ್ರ ಗೌಡ ರವರಿಗೆ ಸಂಬಂಧಪಟ್ಟ ಆಗಿತ್ತು ಎಂಬುದಾಗಿ ತನಿಖೆ ನಂತರ ತಿಳಿದು ಬರುತ್ತದೆ. ಅದಾದ ನಂತರ ಆ ಲಿಂಕ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಕೂಡ ಹುಡುಕಿಕೊಂಡು ಬರುತ್ತೆ. ಯಾವ ಮಟ್ಟಿಗೆ ವಿಚಾರಗಳನ್ನು ತನಿಖೆ ಮಾಡಿ ಅರ್ಥಮಾಡಿಕೊಳ್ಳಬಹುದು ಎನ್ನುವುದನ್ನು ಕರ್ನಾಟಕ ರಾಜ್ಯದ ಪೊಲೀಸರು ಈ ಪ್ರಕರಣದಲ್ಲಿ ಒಂದೆರಡು ದಿನಗಳ ಅಂತರದಲ್ಲಿ ಅವರು ನಡೆಸಿರುವಂತಹ ತನಿಖೆಯ ಮೂಲಕ ತಿಳಿಸಿಕೊಟ್ಟಿದ್ದಾರೆ ಅಂತ ಹೇಳಬಹುದು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಒಟ್ಟಾರೆಯಾಗಿ 15 ಮಂದಿಯನ್ನು ಈ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದ್ದು ಈಗಾಗಲೇ ಒಂದೊಂದೇ ಪ್ರಕರಣದ ಒಳ ಸತ್ಯಗಳು ತನಿಖೆಯಿಂದ ತಿಳಿದು ಬರುತ್ತಿವೆ. ಇನ್ನು ನೆನ್ನೆ ರಾತ್ರಿ ಪೋಲಿಸ್ ಠಾಣೆಯಲ್ಲಿ ಇದ್ದಂತಹ ದರ್ಶನ ಹಾಗೂ ಅವರ ಸಹಚರರಿಗೆ ಊಟಕ್ಕಾಗಿ ಬಿರಿಯಾನಿ ತೆಗೆದುಕೊಂಡು ಹೋಗಿರುವುದು ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಟೀಕೆಗೆ ಒಳಗಾಗಿತ್ತು. ಅದರ ಬೆನ್ನಲ್ಲೇ ಈಗ ಪೊಲೀಸರ ಬಳಿ ದರ್ಶನ್ ರವರು ಈ ಒಂದು ವಸ್ತು ಬೇಕೇ ಬೇಕು ಅಂತ ಕೇಳಿರೋದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ಕೂಡ ಪೊಲೀಸರು ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇಳಿದಂತಹ ಆ ವಸ್ತು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಪ್ಲೀಸ್, ಇದೊಂದು ವಸ್ತುವನ್ನು ತಂದು ಕೊಡಿ ಅಂತ ಪೊಲೀಸರ ಬಳಿ ಹೇಳಿದ್ರಂತೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪೊಲೀಸರ ಬಳಿ ಸಿಗರೇಟ್ ಅನ್ನು ಕೇಳಿದ್ದು ಒಂದಾದರೂ ಸಿಗರೇಟ್ ಅನ್ನು ನೀಡಿ ಅಂತ ಪರಿಪರಿಯಾಗಿ ಕೇಳಿಕೊಂಡಿದ್ದಾರೆ ಎಂಬುದಾಗಿ ಇತ್ತೀಚಿಗಷ್ಟೇ ಸುದ್ದಿ ಮಾಧ್ಯಮಗಳ ವರದಿಯಲ್ಲಿ ತಿಳಿದು ಬಂದಿದೆ. ಪೊಲೀಸ್ ಕಸ್ಟಡಿಯಲ್ಲಿ ರಾತ್ರಿ ದರ್ಶನ್ ರವರು ನಿದ್ದೆ ಕೂಡ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಅದರ ನಡುವಲ್ಲಿಯ ಈಗ ದರ್ಶನ್ ಪೊಲೀಸ್ ರವರ ಬಳಿ ಸಿಗರೇಟ್ ಗಾಗಿ ಬೇಡಿಕೊಂಡಿರುವಂತಹ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಹರಿದಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜವೋ ಅಥವಾ ಸುಳ್ಳು ಅಂತ ಹೇಳೋದಕ್ಕಿಂತ ಹೆಚ್ಚಾಗಿ ಖಂಡಿತವಾಗಿ ದರ್ಶನ್ ರವರು ಈ ಪ್ರಕರಣದಿಂದಾಗಿ ನಿದ್ದೆಗೆಟ್ಟಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಭಿಮಾನಿಗಳು ಹಾಗೂ ಈ ವಿಚಾರದ ಪರವಾಗಿ ಇರುವಂತಹ ಜನರ ನಡುವಿನ ದ್ವಂದ್ವ ಮುಗಿಯೋದಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದ್ದು ಈ ವಿಚಾರದಲ್ಲಿ ನಿಜಕ್ಕೂ ಯಾರು ತಪ್ಪಿತಸ್ಥರು ಎಂಬುದಾಗಿ ತಿಳಿದು ಬರಲಿದೆ.

Darshan Case