Politics: ನಾವೆಲ್ಲಾ ಒಂದೇ, ರಾಜೀನಾಮೆ ಕೊಡಲ್ಲ, ನೀವ್ ಬಟ್ಟೆ ಹರ್ಕೋಬೇಡಿ; ರಾಜಿನಾಮೆ ಕೊಡ್ತೀರಾ ಅಂದ್ರೆ ಪ್ರದೀಪ್ ಈಶ್ವರ್ ಏನ್ ಹೇಳಿದ್ರು ನೋಡಿ!

Politics:ಲೋಕಸಭಾ ಚುನಾವಣೆಗೂ ಮುನ್ನ ನಿಮಗೆಲ್ಲರಿಗೂ ತಿಳಿದಿರಬಹುದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿರುವಂತಹ ಪ್ರದೀಪ್ ಈಶ್ವರ್ ರವರು ನೀಡಿದ್ದ ಹೇಳಿಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಪ್ರತಿಯೊಬ್ಬರು ಕೂಡ ಈ ವಿಚಾರದ ಬಗ್ಗೆ ಸಾಕಷ್ಟು ಕುತೂಹಲ ಭರಿತರಾಗಿದ್ದರು ಯಾಕೆಂದರೆ ತನ್ನ ಕ್ಷೇತ್ರದಿಂದ ಒಂದೇ ಒಂದು ಮತದ ಲೀಡ್ ಪಡೆದುಕೊಂಡರೆ ನಾನು ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಪ್ರದೀಪ್ ಈಶ್ವರ್ ರವರು ಗಂಟಾಗೋಷವಾಗಿ ಹೇಳಿಕೊಂಡಿದೆ. ಇನ್ನು ಕಳೆದ ಬಾರಿ ಇದೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಧಾಕರ್ ಅವರ ವಿರುದ್ಧ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರದೀಪ್ ಈಶ್ವರ್ ರವರು ಗೆಲುವನ್ನು ಸಾಧಿಸಿದ್ದರು.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಡಾ ಸುಧಾಕರ್ ರವರು ಚುನಾವಣೆಯ ಗೆದ್ದಿದ್ದಾರೆ ಹಾಗೂ ಈ ವಿಚಾರದ ಬಗ್ಗೆ ಪ್ರತಿಯೊಬ್ಬರು ಕೂಡ ಪ್ರದೀಪ್ ಈಶ್ವರ್ ಅವರ ಬಳಿ ಯಾಕೆ ನೀವು ರಾಜೀನಾಮೆ ನೀಡುತ್ತೇನೆ ಅಂತ ಹೇಳಿ ಈಗ ನೀಡ್ತಾ ಇಲ್ಲ ಅನ್ನೊದಾಗಿ ಪ್ರಶ್ನೆಯನ್ನು ಕೇಳುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಪ್ರದೀಪ್ ಈಶ್ವರ್ ರವರು ಈ ವಿಚಾರದ ಬಗ್ಗೆ ಕೊನೆಗೂ ಕೂಡ ಮೌನವನ್ನು ಮುರಿದಿದ್ದು ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ರಾಜೀನಾಮೆ ವಿಚಾರದ ಬಗ್ಗೆ ಪ್ರದೀಪ್ ಈಶ್ವರ್ ಹೇಳಿದ್ದೇನು?

ಬಿಜೆಪಿಯವರು ನಾನು ರಾಜೀನಾಮೆ ನೀಡುತ್ತೇನೆ ಅಂತ ಕಾಯ್ತಾ ಇದ್ದಾರೆ ಆದರೆ ನಾನು ಅವರಿಗೆ ಆ ಸಂತೋಷ ನೀಡುವುದಿಲ್ಲ. ಸುಧಾಕರ್ ರವರು ಗೆದ್ದಿದ್ದಾರೆ ಜನ ಅಭಿಪ್ರಾಯ ನಾನು ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಅವರು ದೆಹಲಿಯಲ್ಲಿ ಕೆಲಸ ಮಾಡ್ತಾರೆ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತೇನೆ ನಮಗಾಗಿ ನೀವು ಯಾಕೆ ಬಟ್ಟೆ ಹರ್ಕೊಂಡು ಗಲಾಟೆ ಮಾಡ್ತೀರಾ ನಾವೆಲ್ರೂ ಒಂದೇ ಎಂಬುದಾಗಿ ಪ್ರದೀಪ್ ಈಶ್ವರ್ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗ ಮತ್ತೆ ಚಿಕ್ಕಬಳ್ಳಾಪುರದಲ್ಲಿ ನನ್ನ ಕೆಲಸವನ್ನು ಪ್ರಾರಂಭ ಮಾಡಿದ್ದೇನೆ ಅದನ್ನು ಸರಿಯಾಗಿ ನಿರ್ವಹಿಸುವ ಬಗ್ಗೆ ನನ್ನ ಗಮನ ಇದೆ ಎಂಬುದಾಗಿ ಕೊನೆಗೂ ಈ ವಿಚಾರದ ಬಗ್ಗೆ ಪರದೆಯನ್ನು ಎಳೆದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ರವರು ಗೆದ್ದ ಕೂಡಲೇ ಈ ವಿಚಾರವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ರವರನ್ನು ಟೀಕೆ ಮಾಡುವಂತಹ ಕೆಲಸಗಳು ನಡೆದಿದ್ದವು ಅನ್ನೋದನ್ನ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈಗ ಈ ವಿಚಾರ ಕೇವಲ ಮಾತಿಗಷ್ಟೇ ಆಡಿದ್ದು ಅನ್ನೋದನ್ನ ಪ್ರದೀಪ್ ಈಶ್ವರ್ ರವರು ತಮ್ಮ ಇತ್ತೀಚಿನ ದಿನಗಳಲ್ಲಿ ಮಾಧ್ಯಮದವರಿಗೆ ಹೇಳಿರುವಂತಹ ಹೇಳಿಕೆಗಳ ಮುಖಾಂತರ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಬಹುದಾಗಿದೆ.

politics