CNG Bike: ಬಜಾಜ್ ಕಂಪನಿಯ ಈ ಸಿ ಎನ್ ಜಿ ಬೈಕ್ ಎಷ್ಟು ಮೈಲೇಜ್ ಕೊಡುತ್ತೆ ಗೊತ್ತಾ? ಕೇಳಿದ್ರೆ ಇವತ್ತೇ ಖರೀದಿಸ್ತೀರಾ!

CNG Bike: ಇಂದಿನ ದಿನಗಳಲ್ಲಿ ಏರುತ್ತಿರುವಂತಹ ಪೆಟ್ರೋಲ್ ಬೆಲೆಯ ಕಾರಣದಿಂದಾಗಿ ಸಾಕಷ್ಟು ಜನರು ಹೆಚ್ಚಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ ಆದರೆ ಮತ್ತೊಂದು ಪರ್ಯಾಯ ಪರಿಹಾರ ಎನ್ನುವ ರೀತಿಯಲ್ಲಿ ಈಗ ಮತ್ತೊಂದು ಪರ್ಯಾಯ ಪರಿಹಾರ ಎನ್ನುವ ರೀತಿಯಲ್ಲಿ ಸಿ ಎನ್ ಜಿ ದ್ವಿಚಕ್ರ ವಾಹನಗಳು ಕೂಡ ಮಾರುಕಟ್ಟೆಗೆ ಲಾಂಚ್ ಆಗುತ್ತಿವೆ. ಮೈಲೇಜ್ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಇರುವಂತಹ ಬೇರೆ ಯಾವುದೇ ದ್ವಿಚಕ್ರ ವಾಹನಗಳಿಗೂ ಕೂಡ ಇವು ಕಾಂಪಿಟೇಶನ್ ನೀಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬಜಾಜ್ ಆಟೋ ಸಿ ಎನ್ ಜಿ ಬೈಕ್!

ಬಜಾಜ್ ಸಂಸ್ಥೆಯ ಪ್ರಮುಖರು ತಿಳಿಸಿರುವ ಮಾಹಿತಿಯ ಪ್ರಕಾರ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳೇ ಬಜಾಜ್ ಸಂಸ್ಥೆಯ ಸಿ ಎನ್ ಜಿ ಬೈಕ್ ಬಿಡುಗಡೆ ಆಗಬೇಕಾಗಿತ್ತು ಆದರೆ ಕೆಲವೊಂದು ಕಾರಣಗಳಿಂದಾಗಿ ಇದು ಮುಂದಿನ ತಿಂಗಳು ಅಂದರೆ ಜುಲೈ ತಿಂಗಳಿಗೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಬಜೆಟ್ ಫ್ರೆಂಡ್ಲಿ ಹಾಗೂ ಪರಿಸರ ಫ್ರೆಂಡ್ಲಿಯಾಗಿರುವಂತಹ ದ್ವಿಚಕ್ರ ವಾಹನಗಳನ್ನು ಗ್ರಾಹಕರಿಗೆ ನೀಡುವ ವಿಚಾರದಲ್ಲಿ ಈ ಯೋಜನೆಯನ್ನು ಬಜಾಜ್ ಸಂಸ್ಥೆ ಕೈಗೆ ತೆಗೆದುಕೊಂಡಿದೆ ಎಂದು ಹೇಳಬಹುದು. ಇದು ಸ್ಲೋಪೆರ್ ಇಂಜಿನ್ ನಿಂದ ಚಲಾಯಿಸಬಹುದಾಗಿರುವಂತಹ ಎಂಜಿನ್ ಅನ್ನು ಹೊಂದಿದೆ ಅನ್ನೋದನ್ನ ಸಂಸ್ಥೆ ತಿಳಿಸಿದೆ. ದಿನನಿತ್ಯ ವಾಹನವನ್ನು ಚಲಾಯಿಸುವಂತಹ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ 110 ರಿಂದ 150 ಸಿಸಿ ಬಾಲ್ ಪಾರ್ಕ್ ಸಾಮರ್ಥ್ಯವನ್ನು ಇದು ಹೊಂದಿರಲಿದೆ. ಹೆಚ್ಚಾಗುತ್ತಿರುವ ಅಂತಹ ಪರಿಸರ ಮಾಲಿನ್ಯ ಹಾಗೂ ಪೆಟ್ರೋಲ್ ಬೆಲೆಗೆ ವಿರುದ್ಧ ಎನ್ನುವ ರೀತಿಯಲ್ಲಿ ಈ ಸಿಎನ್ಜಿ ಬೈಕ್ ಅನ್ನು ಪರಿಚಯಿಸುವಂತಹ ಕೆಲಸವನ್ನು ಬಜಾಜ್ ಸಂಸ್ಥೆ ಮಾಡುತ್ತಿದೆ.

ಬಜಾಜ್ ಸಂಸ್ಥೆ ಮುಂದಿನ ದಿನಗಳಲ್ಲಿ ಲಾಂಚ್ ಮಾಡಲು ಹೊರಟಿರುವಂತಹ ಈ ಸಿಎನ್ಜಿ ಬೈಕ್ ಫೈಟರ್ ಎನ್ನುವಂತಹ ನಾಮಕರಣ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಈ ಬೈಕಿಗೆ ಬ್ರೂಜರ್ ಎನ್ನುವಂತಹ ಹೆಸರನ್ನ ಇಡಲಾಗಿದೆ ಅನ್ನೋದಾಗಿ ಕೂಡ ಕೇಳಿ ಬರುತ್ತಿದೆ. ಇನ್ನು ಸಿ ಎನ್ ಜಿ ಬೈಕುಗಳು ಸ್ವಲ್ಪಮಟ್ಟಿಗೆ ಹೆಚ್ಚಿನ ಮೈಲೇಜ್ ನೀಡುವುದರಿಂದಾಗಿ ಇದರ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದೆನ್ನುವುದಾಗಿ ತಿಳಿದು ಬಂದಿದ್ದು ಅಧಿಕೃತವಾಗಿ ಇದರ ಬೆಲೆಯನ್ನು ಎಲ್ಲೂ ಕೂಡ ಹಂಚಿಕೊಂಡಿಲ್ಲ ಆದರೆ ಇದು ಒಂದು ಕೆಜಿ ಸಿಎನ್ ಜಿಗೆ 60 ರಿಂದ 70 ಕಿಲೋ ಮೀಟರ್ ಮೈಲೇಜ್ ನೀಡುವಂತಹ ಸಾಧ್ಯತೆ ಹೆಚ್ಚಾಗಿದೆ ಅಂತ ಮಾಹಿತಿ ತಿಳಿದು ಬಂದಿದೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಸಿಎನ್‌ಜಿ ಬೈಕ್ಗಳ ಬೇಡಿಕೆ ಹೆಚ್ಚಾದಾಗ ಖಂಡಿತವಾಗಿ ಈ ಬೈಕಿನ ಬೇಡಿಕೆ ಕೂಡ ಗ್ರಾಹಕರಲ್ಲಿ ದೊಡ್ಡ ಮಟ್ಟದಲ್ಲಿ ಇರುತ್ತದೆ.

CNG Bike