Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಲಕ್ಷ್ಮಿ ಹೆಬ್ಬಾಳಕರ್ ಗುಡ್ ನ್ಯೂಸ್!

Gruhalakshmi Scheme: ರಾಜ್ಯದ ಮಹಿಳೆಯರಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ ಯೋಜನೆಯ ಲೇಟೆಸ್ಟ್ ಮಾಹಿತಿ ಕೇಳಿ ಬಂದಿದ್ದು ಪ್ರತಿಯೊಬ್ಬರೂ ಕೂಡ ಈ ವಿಚಾರಕ್ಕಾಗಿ ಕಾಯ್ತಾ ಇದ್ದಾರೆ ಎಂದು ಹೇಳಬಹುದಾಗಿದೆ. ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ ರವರೆ ಖುದ್ದಾಗಿ ಈ ವಿಚಾರದ ಬಗ್ಗೆ ತಮ್ಮ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದೆ.

ರಾಜ್ಯದಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭ ಆಗಿರುವಂತಹ ಮಹಿಳೆಯರಿಗೆ ಮಾಸಿಕವಾಗಿ 2, 000 ರೂಪಾಯಿ ಹಣವನ್ನು ನೀಡುವ ಗೃಹಲಕ್ಷ್ಮಿ ಯೋಜನೆಯ ಈಗಾಗಲೇ ಯಶಸ್ವಿಯಾಗಿ ಮುಂದುವರಿಸಿಕೊಂಡು ಬರಲಾಗಿದೆ. ಇನ್ನು ಈಗ ಮಾಹಿತಿ ತಿಳಿದು ಬಂದಿರುವ ಪ್ರಕಾರ ಕಳೆದ 11 ಹಾಗೂ ಈಗಿನ 12ನೇ ಕಂತಿನ ಹಣವನ್ನ ವರ್ಗಾವಣೆ ಮಾಡುವುದರ ಬಗ್ಗೆ ಸಚಿವಾಲಯ ಅಧಿಕೃತವಾದ ಮಾಹಿತಿಯನ್ನು ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಸರ್ವರ್ ಗಳ ಸಮಸ್ಯೆಯಿಂದಾಗಿ ಅಥವಾ ಕೆಲವೊಂದು ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ಪೂರೈಸಿಲ್ಲ ಎನ್ನುವ ಕಾರಣಕ್ಕಾಗಿ ಈ ಹಣ ವರ್ಗಾವಣೆ ಆಗದೆ ಇರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ಮೇಲೆ ಇವರಿಗೂ ಕೂಡ ಸಿಗುತ್ತೆ ಗೃಹಲಕ್ಷ್ಮಿ ಯೋಜನೆಯ ಹಣ!

ಈಗಾಗಲೇ 10ನೇ ಕಂತಿನ ಹಣ ಯಶಸ್ವಿಯಾಗಿ ವರ್ಗಾವಣೆ ಆಗಿದೆ. ಇನ್ನು ಬರಬೇಕಾಗಿರೋದು 11 ಹಾಗೂ 12ನೇ ಕಂತಿನ ಹಣದ ಬಗ್ಗೆ ಈಗಾಗಲೇ ಇಲಾಖೆ ಹಣವನ್ನು ವರ್ಗಾವಣೆ ಮಾಡುತ್ತೇವೆ ಅನ್ನೋದಾಗಿ ನೇರವಾಗಿ ಸೂಚನೆ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿರುವ ಪ್ರಕಾರ ಇನ್ಮೇಲೆ ತೃತೀಯ ಲಿಂಗಿಗಳಿಗೆ ಕೂಡ ಈ ಯೋಜನೆ ಅಡಿಯಲ್ಲಿ ಹಣ ಸಿಗುತ್ತೆ ಅನ್ನುವುದಾಗಿ ತಿಳಿದುಬಂದಿದೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುವುದಕ್ಕೆ ಜುಲೈ ತಿಂಗಳ ವರೆಗೆ ಸಮಯಾವಕಾಶವನ್ನು ನೀಡಲಾಗಿದೆ. ಇನ್ನು 11 ಹಾಗೂ 12ನೇ ಕ್ರಾಂತಿನ ಎರಡು ಹಣ ವರ್ಗಾವಣೆಗಳನ್ನು ಜೂನ್ ತಿಂಗಳ ಮೂರನೇ ವಾರದಲ್ಲಿ ಒಟ್ಟಾಗಿ ವರ್ಗಾವಣೆ ಮಾಡುವ ಬಗ್ಗೆ ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಒಟ್ಟಾಗಿ ನಾಲ್ಕು ಸಾವಿರ ರೂಪಾಯಿ ಹಣವನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾದಂತಹ ಅವಕಾಶ ಹೆಚ್ಚಾಗಿದೆ.

ಚುನಾವಣೆಯ ಸೋಲಿನ ನಂತರ ಯೋಜನೆಗಳನ್ನ ನಿಲ್ಲಿಸಲಾಗುತ್ತದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿರುವಂತಹ ಸಚಿವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತಹ ಪ್ರಮೇಯ ಇಲ್ಲ ಎನ್ನುವುದರ ಮೂಲಕ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುತ್ತಿರುವಂತಹ ಮನೆಯ ಒಡತಿಯರಿಗೆ ಆಶ್ವಾಸನೆ ಕೊಟ್ಟಿದ್ದಾರೆ ಎನ್ನಬಹುದಾಗಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬರಬೇಕಾಗಿರುವಂತಹ ಹಣದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಎರಡು ಕಂತಿನ ಹಣವನ್ನು ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎನ್ನುವುದಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ರವರು ಸ್ಪಷ್ಟಪಡಿಸಿದ್ದಾರೆ.

Gruhalakshmi Scheme