BESCOM: ನಿಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಟ್ರಾನ್ಸ್ಫಾರ್ಮರ್ ಹೊಂದಿದ್ದೀರಾ? ಹಾಗಾದ್ರೆ ಅಂತಹ ರೈತರಿಗೆ ಸರ್ಕಾರದಿಂದ ಮಹತ್ವದ ಆದೇಶ;ನಿಮಗೂ ಅಪ್ಲೈ ಆಗತ್ತೆ ಗೊತ್ತಾ?

BESCOM: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಸುದ್ದಿಗಳು ಭಾರಿ ವೇಗವಾಗಿ ಓಡಾಡ್ತಾ ಇದೆ. ಅದರಲ್ಲೂ ವಿಶೇಷವಾಗಿ ಕೃಷಿ ಭೂಮಿಯ ಮೇಲೆ ಎಲೆಕ್ಟ್ರಿಕ್ ಕಂಬಗಳು ಹಾಗೂ ವಿದ್ಯುತ್ ಇಲಾಖೆಗೆ ಸೇರಿರುವಂತಹ ವಸ್ತುಗಳು ಇದ್ರೆ ಅದರ ಮೇಲೆ ಆ ಭೂಮಿಯನ್ನು ಹೊಂದಿರುವಂತಹ ರೈತರಿಗೆ ಹೆಚ್ಚಿನ ಹಣ ಸಿಗುತ್ತೆ ಅನ್ನೋದಾಗಿ ಸುದ್ದಿ ಓಡಾಡ್ತಾ ಇದೆ. ಇದರ ಬಗ್ಗೆ ಇರುವಂತಹ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ವೈರಲ್ ಆಗಿರುವಂತಹ ಸುದ್ದಿಯ ಪ್ರಕಾರ ಒಂದು ವೇಳೆ ರೈತ ವರ್ಗದ ಕೃಷಿ ಭೂಮಿಯಲ್ಲಿ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತಹ ಟ್ರಾನ್ಸ್ಫರ್ಮರ್ ಅಥವಾ ವಿದ್ಯುತ್ ಕಂಬವನ್ನು ನೆಟ್ಟಿದ್ರೆ ಅದರಿಂದ ಅವರು 2000 ದಿಂದ 5,000 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದಾಗಿದೆ ಹಾಗೂ ಪ್ರತಿ ತಿಂಗಳಿಗೆ 5000 ರೂಪಾಯಿ ಹಣವನ್ನು ಕೂಡ ಸರ್ಕಾರ ಅವರಿಗೆ ನೀಡುತ್ತದೆ ಅನ್ನೋದಾಗಿ ತಿಳಿದು ಬಂದಿತ್ತು. ಇದರ ಬಗ್ಗೆ ವಿದ್ಯುತ್ ಇಲಾಖೆಯ ಬೆಸ್ಕಾಂ ಅಧಿಕಾರಿಗಳು ಏನು ಹೇಳಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಬೆಸ್ಕಾಂ ಅಧಿಕಾರಿಗಳು ಈ ವಿಚಾರದ ಬಗ್ಗೆ ಏನು ಹೇಳುತ್ತಿದ್ದಾರೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವಂತಹ ಬೆಸ್ಕಾಂ ಅಧಿಕಾರಿಗಳು ಈ ಎಲ್ಲಾ ಸುದ್ದಿಗಳು ಕೂಡ ಸತ್ಯಕ್ಕೆ ದೂರವಾಗಿರುವಂತಹ ಸುದ್ದಿಗಳು ಎಂಬುದಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಜಮೀನಿನಲ್ಲಿ ಟ್ರಾನ್ಸ್ಫಾರ್ಮರ್ ಅಥವಾ ವಿದ್ಯುತ್ ಕಂಬ ಇದ್ದರೆ 5,000 ಹಣವನ್ನು ನೀಡುತ್ತೇವೆ ಅನ್ನೋದು ಸತ್ಯಕ್ಕೆ ದೂರವಾಗಿರುವಂತಹ ಮಾತಾಗಿದೆ ಎಂಬುದಾಗಿ ವಿದ್ಯುತ್ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ನಕಲಿ ವೆಬ್ಸೈಟ್ ಗಳಲ್ಲಿ ಈ ರೀತಿಯ ಸುದ್ದಿಗಳು ಹರಿದಾಡುತ್ತಿರುವುದನ್ನು ನೀವು ನಂಬುವಂತಹ ಅವಶ್ಯಕತೆ ಇಲ್ಲ ಎಲ್ಲಕ್ಕಿಂತ ಹೆಚ್ಚಾಗಿ ಇವು ಸತ್ಯಕ್ಕೆ ದೂರವಾಗಿರುವಂತಹ ನಕಲಿ ಸುದ್ದಿಗಳಾಗಿವೆ ಎಂಬುದಾಗಿ ಹೇಳಿದ್ದಾರೆ. ಉಚಿತ ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ಹಣವನ್ನು ಸರ್ಕಾರ ಈ ವಿಚಾರದಲ್ಲಿ ನೀಡುವುದಿಲ್ಲ ಅನ್ನೋದನ್ನ ಸ್ಪಷ್ಟವಾಗಿ ಇಲ್ಲಿ ಹೇಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿರುವಂತಹ ಯಾವುದೇ ವಿದ್ಯುತ್ ಇಲಾಖೆಗಳು ಕೂಡ ಈ ವಿಚಾರದಲ್ಲಿ ಇಂತಹ ಹೇಳಿಕೆ ಅಥವಾ ನಿಯಮಗಳನ್ನು ಜಾರಿಗೆ ತಂದಿಲ್ಲ ಹೀಗಾಗಿ ಈ ರೀತಿಯ ನಕಲಿ ಸುದ್ದಿಗಳಿಗೆ ರಾಜ್ಯದ ರೈತರು ಕಿವಿ ಕೊಡಬೇಡಿ ಎಂಬುದಾಗಿ ಹೇಳಿದ್ದಾರೆ. ಇಂತಹ ಸುಳ್ಳು ಮಾಹಿತಿಗಳನ್ನ ಯಾವುದೇ ಕಾರಣಕ್ಕೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಮಾಜದಲ್ಲಿ ಹರಡುವಂತಹ ಕೆಲಸವನ್ನ ಮಾಡಬಾರದು ಎನ್ನುವಂತಹ ಮಾತನ್ನು ಕೂಡ ಅಧಿಕಾರಿಗಳು ಇಲ್ಲಿ ಆಡಿದ್ದಾರೆ. ಇನ್ನು ವಿದ್ಯುತ್ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳು ಇದ್ದರೂ ಕೂಡ 1912 ನಂಬರ್ ಗೆ ಕರೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ.

BESCOM