EV Scooter: ಗುಡ್ ನ್ಯೂಸ್; ಈ ಐದು ಸ್ಕೂಟರ್ಗಳನ್ನು ಓಡಿಸುವುದಕ್ಕೆ ಇನ್ಮೇಲೆ ಲೈಸೆನ್ಸೇ ಬೇಡ್ವೇ ಬೇಡ; ಇಂದೇ ಬುಕ್ಕಿಂಗ್ ಮಾಡಿ!

EV Scooter: ವಾಹನಗಳ ನಿಯಮಗಳನ್ನು ನಿರ್ಧರಿಸುವಂತಹ ಸಂಸ್ಥೆ ಆಗಿರುವಂತಹ ಆರ್ ಟಿ ಓ ಹೇಳಿರುವ ಪ್ರಕಾರ 250 ವ್ಯಾಟ್ ಗಳಿಗಿಂತ ಕಡಿಮೆ ಪವರ್ ಹಾಗೂ 25 ಕಿ.ಮೀ ಪ್ರತಿ ಗಂಟೆಗಳಿಗಿಂತ ಕಡಿಮೆಯಾಗಿ ಚಲಿಸುವಂತಹ ದ್ವಿಚಕ್ರ ವಾಹನಗಳಿಗೆ ಯಾವುದೇ ರೀತಿಯ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಬೇಕಾಗಿರುವ ಅಗತ್ಯ ಇಲ್ಲ ಎಂದು ಹೇಳಿದೆ. ಹೀಗಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಕೂಡ ರಿಜಿಸ್ಟ್ರೇಷನ್ ಹಾಗೂ ಲೈಸೆನ್ಸ್ ಇಲ್ಲದೆ ಓಡಿಸಬಲ್ಲಂತಹ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ. ಹಾಗಿದ್ರೆ ಬನ್ನಿ ಆ ಸ್ಕೂಟರ್ಗಳು ಯಾವುವು ಅನ್ನೋದನ್ನ ತಿಳಿಯೋಣ.

Okinawa Lite

ಈ ಎಲೆಕ್ಟ್ರಿಕ್ ಸ್ಕೂಟರ್ 1.25 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ ಫುಲ್ ಚಾರ್ಜ್ ಆಗುವುದಕ್ಕೆ ನಾಲ್ಕರಿಂದ ಐದು ಗಂಟೆಗಳು ಬೇಕಾಗುತ್ತೆ. ಒಂದು ಸಲ ಫುಲ್ ಚಾರ್ಜ್ ಆದ್ರೆ ಸಾಕು ಈ ಎಲೆಕ್ಟ್ರಿಕ್ ಸ್ಕೂಟರ್ 60 ಕಿಲೋಮೀಟರ್ಗಳ ರೇಂಜ್ ಕೂಡ ಕೊಡುತ್ತೆ. 5 ಕಲರ್ ಆಪ್ಷನ್ ಹಾಗೂ ಯುಎಸ್ಬಿ ಚಾರ್ಜಿಂಗ್ ಸೇರಿದಂತೆ ಸಾಕಷ್ಟು ವಿಶೇಷತೆಗಳನ್ನು ಇದು ಹೊಂದಿದೆ. 25 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಓಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 70,000.

Ampere Reo Li Plus

ಈ ಎಲೆಕ್ಟ್ರಿಕ್ ಸ್ಕೂಟರ್ ಐದರಿಂದ ಆರು ಗಂಟೆಗಳ ಕಾಲ ಫುಲ್ ಚಾರ್ಜ್ ಆದರೆ 70 ಕಿಲೋ ಮೀಟರ್ ಗಳ ಮೈಲೇಜ್ ಅನ್ನು ಸಿಂಗಲ್ ಚಾರ್ಜ್ ನಲ್ಲಿ ನೀಡುತ್ತದೆ. ಎಪತ್ತು ಸಾವಿರ ರೂಪಾಯಿಗಳ ಬೆಲೆಯಲ್ಲಿ ಸಿಗುವಂತಹ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ 25 km ಗಳ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ ನೀಡುತ್ತದೆ.

Hero Electric Atria LX

1.54 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಫುಲ್ ಚಾರ್ಜ್ ನಲ್ಲಿ 85km ಗಳ ಭರ್ಜರಿ ರೇಂಜ್ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ. 25 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಹೊಂದಿರುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕ್ರೂಸ್ ಕಂಟ್ರೋಲ್ ಕೂಡ ಇದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 77, 690 ರೂಪಾಯಿ.

Yulu Wynn

ಇದು ಭಾರತದ ಅತ್ಯಂತ ನಂಬಿಕಸ್ತ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವಂತಹ ಬಜಾಜ್ ಸಂಸ್ಥೆಯ ನಿರ್ಮಾಣದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಫುಲ್ ಚಾರ್ಜ್ ಆದರೆ ಇದು ನಿಮಗೆ 60 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ ಹಾಗೂ 24.9 ಕಿಲೋ ಮೀಟರ್ ಗಳ ಟಾಪ್ ಸ್ಪೀಡ್ ನಲ್ಲಿ ಚಲಿಸುತ್ತದೆ. ಬೇರೆ ಬೇರೆ ಕಲರ್ ಆಪ್ಷನ್ ಗಳಲ್ಲಿ ಕೂಡ ನಿಮಗೆ ಇದು ದೊರಕಲಿದ್ದು ಇದರ ಬೆಲೆ 55,555 ರೂಪಾಯಿ ಆಗಿದೆ.

Hero Electric Flash LX

ಭರ್ಜರಿ 85km ಗಳ ಮೈಲೇಜ್ ಅನು ನೀಡುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 1.54 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿರುವುದನ್ನು ಕಾಣಬಹುದಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ ಎಲ್ಇಡಿ ಹೆಡ್ಲೈಟ್ ಸೇರಿದಂತೆ ಸಾಕಷ್ಟು ಉತ್ತಮ ಫೀಚರ್ ಗಳನ್ನು ಹೊಂದಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 59,640 ರೂಪಾಯಿ.

ev scooter