Housing Scheme: ಇರೋದಕ್ಕೆ ಸ್ವಂತ ಮನೆ ಇಲ್ವಾ? ಮೋದಿ ಸರ್ಕಾರ ಕೊಡ್ತಾ ಇದ್ದಾರೆ ನೋಡಿ ಉಚಿತವಾದ ಮನೆ; ಇಂದೇ ಅರ್ಜಿ ಸಲ್ಲಿಸಿ!

Housing Scheme: ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಥಿಕವಾಗಿ ಹಿಂದುಳಿದಿರುವಂತಹ ಹಾಗೂ ಸ್ವಂತ ಮನೆಯನ್ನು ಹೊಂದಿರದೆ ಇರುವಂತಹ ಬಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಉಚಿತವಾದ ಮನೆಯನ್ನು ಕಟ್ಟಿ ಕೊಡುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಕೊಂಡು ಬರುತ್ತಿದ್ದು. ಹೊಸ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಸರ್ಕಾರ ಸಹಾಯಧನವನ್ನು ಕೂಡ ನೀಡುತ್ತದೆ. ಹಾಗಾದ್ರೆ ಬನ್ನಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024!

ಮನೆ ಇಲ್ಲದೆ ಇರುವಂತಹ ಕುಟುಂಬಗಳಿಗೆ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯವನ್ನು ನೀಡುವಂತಹ ಹಾಗೂ ಧನಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತದೆ. ಇದು ಮೊದಲಿಗೆ ರಾಜೀವ್ ಗಾಂಧಿ ಆವಾಸ್ ಯೋಜನೆ ಎಂಬುದಾಗಿ ಹೆಸರಿನಲ್ಲಿ ಚಾಲ್ತಿಯಲ್ಲಿತ್ತು ಆದರೆ 2014ರ ನಂತರ ಇದನ್ನ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಈ ಯೋಜನೆಯ ಮೂಲಕ ಬಡಜನರಿಗೆ ವಾಸ ಯೋಗ್ಯವಾಗಿರುವಂತಹ ಮನೆಯನ್ನು ಕಟ್ಟುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಈ ಬಾರಿ ಅಧಿಕಾರಕ್ಕೆ ಬಂದಿರುವಂತಹ ಸರ್ಕಾರ 2024 ರಿಂದ 2029ರ ಅವಧಿಯಲ್ಲಿ ಭಾರತ ದೇಶದಲ್ಲಿ ಮೂರು ಕೋಟಿಗೂ ಹೆಚ್ಚಿನ ಮನೆಯನ್ನು ಈ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡುವಂತಹ ಗುರಿಯನ್ನು ಹೊಂದಿದೆ. ಒಂದು ವೇಳೆ ನಿಮಗೂ ಕೂಡ ಸ್ವಂತವಾದ ಮನೆ ಇಲ್ಲದೆ ಹೋದಲ್ಲಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದಿಂದ ನೀವು ಬರ್ತಾ ಇದ್ರೆ ಖಂಡಿತವಾಗಿ ನಿಮಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಂತಹ ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸುವುದಕ್ಕೆ ಇರಬೇಕಾದ ಅರ್ಹತೆಗಳು!

  • ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷಕ್ಕಿಂತ ಮೇಲೆ ಇರಬೇಕು ಹಾಗೂ ಅವರು ಕಡ್ಡಾಯವಾಗಿ ಭಾರತದ ಪ್ರಜೆಯಾಗಿರಬೇಕು ಮತ್ತು ಗುರುತು ಚೀಟಿ ಕೂಡ ಅವರ ಜೊತೆಗೆ ಇರಬೇಕು.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೊಸ ಮನೆ ಕಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸುವವರು ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರಬೇಕಾಗಿರುತ್ತದೆ.
  • ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಗಳಿಗಿಂತ ಕಡಿಮೆ ಆಗಿರಬೇಕು. ವಿಶೇಷವಾಗಿ ವಿಧವೆ ಹಾಗೂ ವಿಕಲಚೇತನರಿಗೆ ಮೊದಲ ಆದ್ಯತೆ ಆಗಿರುತ್ತದೆ.

ಬೇಕಾಗುವ ಡಾಕುಮೆಂಟ್ಸ್ ಗಳು!

  • ಆಧಾರ್ ಕಾರ್ಡ್
  • ಇನ್ಕಮ್ ಸರ್ಟಿಫಿಕೇಟ್
  • ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ಹಾಗೂ ರೇಷನ್ ಕಾರ್ಡ್.

ಯೋಜನೆ ಅಡಿಯಲ್ಲಿ ಎಷ್ಟು ಹಣ ಸಿಗುತ್ತೆ?

  • ನಗರ ಪ್ರದೇಶದಲ್ಲಿ ವಾಸಿಸುವಂತಹ ಜನರು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದರೆ ಅವರಿಗೆ 2 ರಿಂದ 2.36 ಲಕ್ಷ ರೂಪಾಯಿಗಳ ಸಾಲ ದೊರಕಲಿದೆ. ಮಧ್ಯಮ ವರ್ಗದ ಜನರಿಗೆ 6 ಲಕ್ಷ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕಲಿದೆ.
  • ಗ್ರಾಮೀಣ ಭಾಗದಲ್ಲಿ ಇರುವಂತಹ ದಿನಗೂಲಿ ಮಾಡುವಂತಹ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳುವುದಕ್ಕಾಗಿ ಲಕ್ಷ ರೂಪಾಯಿಗಳವರೆಗೆ ದೊರಕಲಿದೆ.

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ!

  • ಪ್ರಮುಖವಾಗಿ ನೀವು ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದರೆ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗುವ ಮೂಲಕ ಕೂಡ ಅಲ್ಲಿ ಕೂಡ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Housing Scheme