Darshan case: ಐಷಾರಾಮಿ ಜೀವನ, ಜೈಲೂಟ. ಇಷ್ಟೆಲ್ಲಾ ಮಾಡಿ ಜೈಲಿಗೆ ಹೋಗಿದ್ದರು ಪವಿತ್ರಾಗೆ ಜೈಲಲ್ಲಿ ಏನೆಲ್ಲ ಸಿಗುತ್ತದೆ ಗೊತ್ತಾ

Darshan case: ಜೂನ್ 8ನೇ ತಾರೀಖಿನಂದು ನಡೆದಿರುವಂತಹ ಘಟನೆಯ ಹಿನ್ನೆಲೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವಿತ್ರ ಗೌಡ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಒಟ್ಟಾರೆಯಾಗಿ 15 ರಿಂದ 17 ಮಂದಿ ಆರೋಪಿಗಳು ಎನ್ನುವ ರೀತಿಯಲ್ಲಿ ಈ ಪ್ರಕರಣದಲ್ಲಿ ಪರಿಗಣಿಸಲಾಗಿತ್ತು. ದಿನದಿಂದ ದಿನಕ್ಕೆ ಈ ವಿಚಾರಣೆ ಅನ್ನೋದು ಸಾಕಷ್ಟು ರೋಚಕ ಹಂತವನ್ನು ಪಡೆದುಕೊಳ್ಳುತ್ತಿತ್ತು. ಮಾಧ್ಯಮಗಳಲ್ಲಿ ಕೂಡ ಈ ಸುದ್ದಿಯ ಬಗ್ಗೆ ಮನಬಂದಂತೆ ಸುದ್ದಿಗಳು ಕೂಡ ಕಾಣಿಸಿಕೊಳ್ಳುತ್ತಿತ್ತು. ಆದರೆ ಜೂನ್ 20ನೇ ತಾರೀಖಿನಂದು ಈ ವಿಚಾರದ ಬಗ್ಗೆ ತಾತ್ಕಾಲಿಕ ಎನ್ನುವ ರೀತಿಯಲ್ಲಿ ಒಂದು ತೀರ್ಪು ಹೊರ ಬಂದಿದೆ ಎನ್ನುವಂತಹ ಮಾಹಿತಿ ತಿಳಿದು ಬಂದಿದೆ. ಪವಿತ್ರ ಗೌಡ ಸೇರಿದಂತೆ 12 ಜನರನ್ನ 14 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಕೋರ್ಟ್ ಆದೇಶ ನೀಡಿದೆ.

ಪವಿತ್ರ ಗೌಡ ಅವರಿಗೆ ಸಿಕ್ತಾ ಇದ್ಯಾ ಸ್ಪೆಷಲ್ ಟ್ರೀಟ್ಮೆಂಟ್?

ಪವಿತ್ರ ಗೌಡ ಅವರನ್ನ ಈ ನ್ಯಾಯಾಂಗ ಬಂಧನದಲ್ಲಿ ಮಹಿಳಾ ಕೈದಿಗಳಿರುವಂತಹ ಸ್ಥಳದಲ್ಲಿ ಹಾಕಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಯಾವುದೇ ಸ್ಪೆಷಲ್ ಟ್ರೀಟ್ಮೆಂಟ್ ನೀಡ್ತಾ ಇಲ್ಲ ಅನ್ನೋದು ಕೂಡ ತಿಳಿದುಬಂದಿದೆ. ಯಾವುದೇ ರೀತಿಯ ವಿಐಪಿ ಟ್ರೀಟ್ಮೆಂಟ್ ಅನ್ನು ಈ ಸಂದರ್ಭದಲ್ಲಿ ಪವಿತ್ರ ಗೌಡ ಅವರಿಗೆ ನೀಡದೇ, ಇಲಾಖೆ ಸಾಮಾನ್ಯ ಕೋಣೆಯಲ್ಲಿ ಇರಿಸಲಾಗುತ್ತಿದೆ ಅನ್ನೋ ಮಾಹಿತಿ ಕೂಡ ಸಿಕ್ತಾ ಇದೆ. ಇನ್ನು ಇವರನ್ನು ಹೊರತುಪಡಿಸಿ ಉಳಿದ 12 ಪುರುಷ ಅಪರಾಧಿಗಳನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ ಎನ್ನುವಂತಹ ಮಾಹಿತಿ ಇದೆ. ಜುಲೈ 4ನೇ ದಿನಾಂಕದ ತನಕ ಕೂಡ ಪವಿತ್ರ ಗೌಡ ಸೇರಿದಂತೆ 12 ಆರೋಪಿಗಳು ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕಾಗಿರುತ್ತದೆ. ಮುಂದಿನ ನ್ಯಾಯಾಂಗದ ತೀರ್ಪಿನ ಪ್ರಕಾರ ಇವರು ಎಲ್ಲಿ ಹೋಗಬೇಕು ಏನಾಗುತ್ತೆ ಅನ್ನೋದನ್ನ ನಿರ್ಧರಿಸಲಾಗುತ್ತದೆ.

ನ್ಯಾಯಾಂಗ ಬಂಧನಕ್ಕೆ ಹೋಗೋದಕ್ಕಿಂತ ಮುಂಚೆ ಪವಿತ್ರ ಗೌಡ ಅವರು ಸಾಂತ್ವನ ಕೇಂದ್ರದಲ್ಲಿ ಇದ್ದ ಸಂದರ್ಭದಲ್ಲಿ ಬೆಳಗ್ಗೆ ಬೇಗ ಏಳೋದಕ್ಕೆ ಪೊಲೀಸ್ ಸಿಬ್ಬಂದಿಗಳು ಎದ್ದೇಳಿಸೋಕೆ ಬಂದರೂ ಕೂಡ ನಿರಾಕರಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿತ್ತು ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತ್ರ ರಾತ್ರಿ ಎಲ್ಲ ನಿದ್ದೆ ಇಲ್ಲದಂತೆ ಕಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಮೊದಲಿಗೆ ಆಹಾರವನ್ನು ನಿರಾಕರಿಸಿದ ಪವಿತ್ರ ಗೌಡ ನಂತರ ಆಹಾರವನ್ನು ಸೇವಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆರೋಗ್ಯ ತಪಾಸಣೆ ಕೂಡ ಮಾಡಲಾಗಿದ್ದು ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಿಲ್ಲ ಎನ್ನುವುದಾಗಿ ವೈದ್ಯರು ರಿಪೋರ್ಟ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿಯ ಹಾದಿಯನ್ನು ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಾದಂತಹ ಅಗತ್ಯ ಇದೆ.

Darshan Case