Darshan case: ಜೈಲಿನಲ್ಲಿ ಇದ್ದುಕೊಂಡೇ ಹೊಸ ಡಿಮ್ಯಾಂಡ್ ಸೃಷ್ಟಿ ಮಾಡಿದ ಪವಿತ್ರ- ಜೈಲಿನಲ್ಲೂ ಕ್ಯಾರೇ ಎನ್ನದೆ ಪವಿತ್ರ ಮಾಡಿದ್ದೇನು ಗೊತ್ತೇ??

Darshan case: ರೇಣುಕ ಸ್ವಾಮಿ ಪ್ರಕರಣದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 2ನೇ ಪತ್ನಿ ಜೈಲು ವಾಸವನ್ನು ಅನುಭವಿಸುತ್ತಿದ್ದಾರೆ ಅನ್ನುವುದು ನಿಮಗೆ ಗೊತ್ತಿರುವ ವಿಚಾರವಾಗಿದೆ. ಸಾಕಷ್ಟು ದಿನಗಳಿಂದ ನಡೆಯುತ್ತಿರುವಂತಹ ಈ ವಿಚಾರಣೆಯಲ್ಲಿ ಪವಿತ್ರ ಗೌಡ ಅವರಿಗೆ ಸದ್ಯದ ಮಟ್ಟಿಗೆ ಕಾನೂನು ಸೆರೆವಾಸ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಕಳೆದ ಸಾಕಷ್ಟು ದಿನಗಳಿಂದಲೂ ಕೂಡ ಈ ಸುದ್ದಿ ಇಡೀ ದೇಶದಾದ್ಯಂತ ಹರಡಿತ್ತು ಅಂದ್ರು ಕೂಡ ತಪ್ಪಾಗಲ್ಲ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಈಗ ಜೈಲಿಗೆ ಹೋದ ನಂತರ ಪವಿತ್ರ ಗೌಡ ಅವರು ಈಗ ಮತ್ತೆ ಸದ್ದು ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ.

ಜೈಲಿನ ಸಿಬ್ಬಂದಿಯೊಂದಿಗೆ ಪವಿತ್ರ ಗೌಡ ಜಗಳ!

ಹೌದು ಜೈಲಿಗೆ ಹೋಗುತ್ತಿದ್ದಂತೆ ಪವಿತ್ರ ಗೌಡ ಈಗ ಅಲ್ಲಿನ ಸಿಬ್ಬಂದಿಗಳ ಜೊತೆಗೆ ಕೂಡ ಜಗಳ ಮಾಡಿಕೊಳ್ಳುವುದಕ್ಕೆ ಪ್ರಾರಂಭ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ನನಗೆ ಉತ್ತಮವಾದ ಊಟ ಕೊಡಿ, ಮನೆಯಿಂದ ಒಳ್ಳೆಯ ಬ್ಲಾಂಕೆಟ್ ತರಿಸಿಕೊಡಿ ಎನ್ನುವುದಾಗಿ ಡಿಮ್ಯಾಂಡ್ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

ಜೈಲಿನಲ್ಲಿ ಮಲಗಲು ಹೋದಂತಹ ಪವಿತ್ರ ಗೌಡ ಬ್ಲಾಂಕೆಟ್ ಅನ್ನು ನೀಡಲು ಬಂದಾಗ ಆ ಬ್ಲಾಂಕೆಟ್ ಅನ್ನು ಯಾರು ಹೊದ್ದುಕೊಂಡು ಮಲಗಿದ್ದಾರೋ ಅಥವಾ ಅದನ್ನ ಸ್ವಚ್ಛ ಮಾಡಿದ್ದರೂ ಕೂಡ ನನಗೆ ಬೇಕಾಗಿಲ್ಲ ನನಗೆ ನನ್ನ ಮನೆಯಿಂದ ಮೆತ್ತನೆಯ ಬ್ಲಾಂಕೆಟ್ ಅನ್ನು ತಂದು ಕೊಡಿ ಎನ್ನುವುದಾಗಿ ರಂಪ ರಾಮಾಯಣ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಊಟದ ವಿಚಾರಕ್ಕೆ ಕೂಡ ಪವಿತ್ರ ಗೌಡ ನನಗೆ ಜೈಲಿನಲ್ಲಿ ನೀಡುವಂತಹ ಊಟ ಬೇಡ ಎನ್ನುವುದಾಗಿ ನಿರಾಕರಿಸಿದ್ದಾರೆ ಅನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ. ಇದಕ್ಕಾಗಿ ಜೈಲಿನ ಸಿಬ್ಬಂದಿಗಳು ಕೂಡ ಎಲ್ಲರಿಗೂ ಸಿಗುವಂತಹ ಊಟ ಅಥವಾ ಬ್ಲಾಂಕೆಟ್ ಅನ್ನೇ ನಿನಗೂ ಕೂಡ ನೀಡಬೇಕಾಗುತ್ತದೆ. ನೀವು ಕೇಳಿದಂತಹ ಸೌಕರ್ಯಗಳನ್ನು ನಿಮಗೆ ಒದಗಿಸಲು ಸಾಧ್ಯವಿಲ್ಲ ಅನ್ನೋದಾಗಿ ಜೈಲಿನ ಸಿಬ್ಬಂದಿಗಳು ಪವಿತ್ರ ಗೌಡ ಅವರಿಗೆ ಈ ಸಂದರ್ಭದಲ್ಲಿ ಹೇಳಿದ್ದಾರಂತೆ.

ದರ್ಶನ್ ಹೀಗಿದ್ರಂತೆ!

ಇನ್ನು ದರ್ಶನ್ ರವರನ್ನ ಕೂಡ ಪರಪರ ಅಗ್ರಹಾರ ಜೈಲಿಗೆ ಹಾಕಿರೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ರಾತ್ರಿಯ ತನಕ ಎಚ್ಚರವಿದ್ದ ನಂತರ ತಡ ರಾತ್ರಿಯಲ್ಲಿ ಮಲಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬೆಳಗ್ಗೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿದ ನಂತರ ಯಾರೊಂದಿಗೂ ಮಾತನಾಡದೆ ಮಂಕು ಬಡಿದವರಂತೆ ಕುಳಿತುಕೊಂಡಿದ್ರಂತೆ. ಅದಾದ ನಂತರ ಸ್ವಲ್ಪ ತಿಂಡಿ ಸೇವಿಸಿ ಮತ್ತೆ ಒಬ್ಬರೇ ಏಕಾಂತವಾಗಿ ಕುಳಿತುಕೊಂಡಿದ್ದಾರೆ ಎನ್ನುವಂತಹ ಮಾಹಿತಿನಾ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡಬೇಕಾಗಿದೆ.

Darshan Case