BCCI:ಕೋಚ್ ಆಗಲು ಅವಕಾಶ ಕೊಟ್ಟಿದ್ದೆ ತಪ್ಪಾಯ್ತಾ?? ಷರತ್ತು ವಿಧಿಸಿ ರೋಹಿತ್ ಕೊಹ್ಲಿ ಗೆ ಶಾಕ್ ಕೊಟ್ಟ ಗಂಭೀರ್; ಏನು ಗೊತ್ತೇ?

BCCI: ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವಂತಹ ಟಿ20 ವಿಶ್ವಕಪ್ ನಲ್ಲಿ ಈಗಾಗಲೇ ಸೆಮಿ ಫೈನಲ್ ಹಂತಕ್ಕೆ ತಲುಪಿದೆ. ಟೂರ್ನಮೆಂಟ್ ಉದ್ದಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡ ಒಂದು ತಂಡವಾಗಿ ಅತ್ಯಂತ ಉತ್ತಮವಾದ ಪ್ರದರ್ಶನವನ್ನು ತೋರ್ಪಡಿಸಿದೆ ಎಂದು ಹೇಳಬಹುದಾಗಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಎದುರು ಈಗ ಕಂಡುಬರುತ್ತಿರುವಂತಹ ಮತ್ತೊಂದು ಪ್ರಮುಖ ಪ್ರಶ್ನೆಯೆಂದರೆ ಮುಂದಿನ ಕೋಚ್ ಯಾರಾಗಲಿದ್ದಾರೆ ಎನ್ನುವುದಾಗಿ. ಈಗ ಅದಕ್ಕೂ ಕೂಡ ಉತ್ತರ ದೊರಕಿದೆ. ಹೌದು ಗೌತಮ್ ಗಂಭೀರವರು ಮುಂದಿನ ಕೋಚ್ ಅಗಲಿದ್ದಾರೆ ಅನ್ನುವಂತಹ ಮಾಹಿತಿಗಳು ಬಹುತೇಕ ಖಚಿತವಾಗಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗೋದಕ್ಕೆ ಕೆಲವೊಂದು ಕಂಡೀಶನ್ ಗಳನ್ನು ಕೂಡ ಗೌತಮ್ ಗಂಭೀರ್ ಅವರು ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಅವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.

ಕೋಚ್ ಆಗೋದಕ್ಕೆ ಗಂಭೀರ್ ಕಂಡಿಷನ್ ಗಳು!

  • ಭಾರತೀಯ ಕ್ರಿಕೆಟ್ ತಂಡದ ಪ್ರತಿಯೊಂದು ನಿರ್ಧಾರಗಳಲ್ಲಿಯೂ ಕೂಡ ಗೌತಮ್ ಗಂಭೀರ್ ರವರ ಅಭಿಪ್ರಾಯ ಇರಬೇಕು ಹಾಗೂ ಇದರಲ್ಲಿ ಬಿಸಿಸಿಐ ನ ಯಾವುದೇ ಅಡಚಣೆ ಇರಬಾರದು ಎನ್ನುವುದಾಗಿ ತಿಳಿದುಬಂದಿದೆ.
  • ಇನ್ನು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವಂತಹ ಗೌತಮ್ ಗಂಭೀರ್ ರವರು ಬ್ಯಾಟಿಂಗ್ ಬೌಲಿಂಗ್ ಹೀಗೆ ಪ್ರತಿಯೊಂದು ವಿಭಾಗದ ಕೋಚ್ ಅನ್ನು ಕೂಡ ಅವರ ಖುದ್ದಾಗಿ ಆಯ್ಕೆ ಮಾಡುತ್ತಾರೆ.
  • ಇನ್ನು ಭಾರತೀಯ ಕ್ರಿಕೆಟ್ ತಂಡದ ಕೆಲವು ಪ್ರಮುಖ ಆಟಗಾರರಾಗಿರುವಂತಹ ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ರವೀಂದ್ರ ಜಡೇಜಾ ಅವರಿಗೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವಂತಹ ಚಾಂಪಿಯನ್ ಟ್ರೋಫಿ ಐಸಿಸಿ ಟ್ರೋಫಿ ಗೆಲ್ಲೋದಕ್ಕೆ ಇರುವಂತಹ ಒಂದು ಕೊನೆಯ ಅವಕಾಶ ಆಗಿದೆ ಎಂದು ಹೇಳಬಹುದಾಗಿದ್ದು ಒಂದುವೇಳೆ ಅವರು ಅಲ್ಲಿ ಪರ್ಫಾರ್ಮೆನ್ಸ್ ನೀಡುವುದಕ್ಕೆ ವಿಫಲರಾದರೆ ಅವರನ್ನ ಯಾವುದೇ ಮುಲಾಜಿಲ್ಲದೆ ತಂಡದಿಂದ ಕೈ ಬಿಡಲಾಗುತ್ತದೆ.
  • ಇನ್ನು ಇಂಡಿಯನ್ ಟೆಸ್ಟ್ ಕ್ರಿಕೆಟ್ ತಂಡವನ್ನು ಪ್ರತ್ಯೇಕವಾಗಿ ಇಡಬೇಕು ಅನ್ನೋದನ್ನ ಕೂಡ ಗೌತಮ್ ಗಂಭೀರ್ ಒಬ್ಬ ಕೋಚ್ ಆಗಿ ಬೇಡಿಕೆ ಇಟ್ಟಿದ್ದಾರೆ.
  • ಇನ್ನು ಮುಂದಿನ ವಿಶ್ವಕಪ್ ಅಂದರೆ 2027ರ ಏಕದಿನ ವಿಶ್ವಕಪ್ ಗೆ ಬೇಕಾಗಿರುವಂತಹ ತಂಡವನ್ನು ಕೂಡ ಖುದ್ದಾಗಿ ಮುಖ್ಯಕೋಚ್ ಆಗಿ ಗೌತಮ್ ಗಂಭೀರ್ ಅವರೇ ಆಯ್ಕೆ ಮಾಡಲಿದ್ದಾರೆ.

ತಮ್ಮ ನೇರ ಹಾಗೂ ನಿಷ್ಠುರ ನಡೆಗಳಿಂದಾಗಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯೋಚಿಸುವಂತಹ ಗೌತಮ್ ಗಂಭೀರ್ ರವರ ನಿರಂಕುಶ ಕೋಚಿಂಗ್ ವ್ಯವಸ್ಥೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಕರಿಯರ್ ಎಂಡ್ ಆಗುತ್ತೋ ಅನ್ನೋದಾಗಿ ಕೂಡ ಸಾಕಷ್ಟು ಜನರು ಈಗಲೇ ತಮ್ಮ ಕಳವಳವನ್ನು ವ್ಯಕ್ತಪಡಿಸುವುದಕ್ಕೆ ಪ್ರಾರಂಭ ಮಾಡಿದ್ದಾರೆ.

BCCI