Darshan case: ಕೊನೆಗೂ ದರ್ಶನ್ ಕೇಸ್ ಬಗ್ಗೆ ಮಾತನಾಡಿದ ದೊಡ್ಡ ನಟಿ ಶ್ರುತಿ- ಬೇಸರದಲ್ಲಿ ಹೇಳಿದ್ದೇನು ಗೊತ್ತೇ??

Darshan case: ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜೂಲೈ 4ರ ವರೆಗೆ ಈಗಾಗಲೇ ನ್ಯಾಯಾಂಗ ಬಂದನದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಕನ್ನಡ ಚಿತ್ರರಂಗದ ಒಬ್ಬ ಅನುಭವಿ ನಾಯಕನಟ ಈ ರೀತಿಯಲ್ಲಿ ಪ್ರಕರಣದಲ್ಲಿ ಸಿಲುಕಿ ಕೊಳ್ಳುವುದು ಅಂದರೆ ಖಂಡಿತವಾಗಿ ಕನ್ನಡ ಚಿತ್ರರಂಗಕ್ಕೆ ಒಂತರ ತಲೆತಗ್ಗಿಸುವಂತಹ ವಿಚಾರ ಎಂದು ಹೇಳಬಹುದಾಗಿದೆ. ಕಲಾ ಸರಸ್ವತಿ ಆರಾಧನೆ ಮಾಡುವಂತಹ ಆರಾಧಕರು ಈ ರೀತಿಯ ಕೆಲಸ ಮಾಡಬಹುದು ಅನ್ನೋ ಕಲ್ಪನೆ ನಿಜಕ್ಕೂ ಕೂಡ ಅಸಮಂಜಸ ಎಂದು ಹೇಳಬಹುದಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜೈಲಿಗೆ ಹೋಗಿರುವ ಬಗ್ಗೆ ಸಾಕಷ್ಟು ಸ್ಯಾಂಡಲ್ವುಡ್ ಸೆಲಬ್ರೆಟಿಗಳನ್ನು ಮಾತನಾಡಿಸಿದಾಗ ಅವರು ಯಾರು ಕೂಡ ಹೆಚ್ಚಾಗಿ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಆದರೆ ಈಗ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಅವರ ಸಹಕಲಾವಿದೆಯಾಗಿ ನಟಿಸಿರುವಂತಹ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿಯಾಗಿರುವ ಶೃತಿ ಅವರು ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಬನ್ನಿ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ದರ್ಶನ್ ಪ್ರಕರಣದ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?

ದರ್ಶನ್ ರವರ ಕೊನೆದಾಗಿ ಬಿಡುಗಡೆಯಾಗಿರುವಂತಹ ಕಾಟೇರ ಸಿನಿಮಾದಲ್ಲಿ ನಟಿ ಶ್ರುತಿ ಅವರು ಕೂಡ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅನ್ನೋದನ್ನ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ಪ್ರಕರಣದ ಬಗ್ಗೆ ಮಾತನಾಡುತ್ತಾ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಇನ್ನು ಜಗತ್ತನ್ನೇ ಕಾಣದಿರುವಂತಹ ಆ ಜೀವಕ್ಕೆ ಕೂಡ ನ್ಯಾಯ ಸಿಗ್ಬೇಕು ಅನ್ನೋ ರೀತಿಯಲ್ಲಿ ಹೇಳಿದ್ದಾರೆ. ದರ್ಶನ್ ಅವರನ್ನು ನಾನು ಆರಂಭಿಕ ದಿನಗಳಿಂದ ನೋಡಿದ್ದೇನೆ ಹಾಗೂ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿದ್ದೇನೆ. ಅವರಲ್ಲಿರುವಂತಹ ಸರಳತೆ ನಿಜಕ್ಕೂ ಕೂಡ ಅವರನ್ನು ಇಷ್ಟ ಪಡೋ ಹಾಗೆ ಮಾಡುತ್ತೆ ಮತ್ತು ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದಾರೆ ಅನ್ನೋದನ್ನ ಕೂಡ ಈ ಸಂದರ್ಭದಲ್ಲಿ ನಟಿ ಶ್ರುತಿ ಹೇಳಿದ್ದಾರೆ.

ಚಿತ್ರರಂಗ ಒಂದು ಕುಟುಂಬ ಹಾಗೂ ಈ ಪ್ರಕರಣದಲ್ಲಿ ಬೆಳವಣಿಗೆಗಳನ್ನು ನೋಡ್ತಾ ಇದ್ರೆ ದರ್ಶನ್ ಎಲ್ಲೋ ಒಂದು ಕಡೆ ದುಡುಕಿದ್ರಾ ಅನ್ನೋ ಭಾವನೆ ಬರುತ್ತೆ ಅದೇನೇ ಇರಲಿ ಪ್ರಕರಣದ ಫಲಿತಾಂಶ ಬಂದಮೇಲೆ ಅದನ್ನ ನೋಡೋಣ ಎಂಬುದಾಗಿ ಹೇಳಿರುವ ಶ್ರುತಿ ಇದರಿಂದಾಗಿ ಚಿತ್ರರಂಗ ಕುಗ್ಗಿ ಹೋಗಿದೆ ಎನ್ನುವಂತಹ ಮಾತುಗಳನ್ನು ಕೂಡ ಹೇಳಿದ್ದಾರೆ. ಫೇಕ್ ಅಕೌಂಟಿನಿಂದ ಹೆಣ್ಣು ಮಕ್ಕಳಿಗೆ ಈ ರೀತಿಯ ಅಶ್ಲೀಲ ಮೆಸೇಜುಗಳನ್ನು ಕಳಿಸುವುದು ಕೂಡ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚಾಗುತ್ತಿದೆ ಹಾಗೂ ಇದರಿಂದಾಗಿ ಹೆಣ್ಣು ಮಕ್ಕಳು ಸಾಕಷ್ಟು ನೋ-ವನ್ನ ಅನುಭವಿಸುತ್ತಿದ್ದಾರೆ. ಸೋಶಿಯಲ್ ಮೀಡಿಯ ಬಳಕೆ ಮಾಡುವವರ ಪ್ರತಿಯೊಂದು ಅಕೌಂಟ್ಗಳಿಗೂ ಕೂಡ ಕೆವೈಸಿ ಮಾಡುವ ರೀತಿಯಲ್ಲಿ ಹೊಸ ಪ್ರಕ್ರಿಯೆ ಜಾರಿಗೆ ಬರಬೇಕು ಆಗ ಯಾರು ಇತರ ಮಾಡುವುದಿಲ್ಲ ಅನ್ನುವುದಾಗಿ ಕೂಡ ಶ್ರುತಿ ಹೇಳಿದ್ದು ಈ ಪ್ರಕರಣ ಒಂದು ತಾರ್ಕಿಕ ಅಂತ್ಯವನ್ನು ಕಾಣಲಿ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

Darshan Case