Business Idea: ಫ್ರಾಂಚೈಸಿ ಪಡೆದು ಇದೊಂದು ಬುಸಿನೆಸ್ ಮಾಡಿ ಸಾಕು ಕೈತುಂಬಾ ಲಾಭ ಬರತ್ತೆ, ಬಂಡವಾಳವೂ ಕಡಿಮೆ!

Business Idea: ಪ್ರತಿಯೊಬ್ಬರಿಗೂ ಕೂಡ ಬೇರೆಯವರ ಕೈ ಕೆಳಗೆ ಕೆಲಸ ಮಾಡೋದಕ್ಕಿಂತ ತಮ್ಮದೇ ಆಗಿರುವಂತಹ ಸ್ವಂತ ವ್ಯಾಪಾರವನ್ನು ಹೊಂದುವುದು ಇಷ್ಟವಾಗಿರುವಂತಹ ವಿಚಾರವಾಗಿದೆ ಹಾಗೂ ಅದರಿಂದಾಗಿ ತಮ್ಮದೇ ದುಡಿಮೆ ತಮ್ಮದೇ ಸಂಪಾದನೆ ಅನ್ನೋ ರೀತಿಯಲ್ಲಿ ಸ್ವಾಭಿಮಾನದ ಜೀವನವನ್ನು ಬದುಕ ಬಹುದಾಗಿದೆ. ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಕೈಗೆಟಕುವಂತಹ ಬಂಡವಾಳದಿಂದ ನೀವು ಈ ಪ್ರಾಂಚೈಸಿ ವ್ಯಾಪಾರವನ್ನು ಪ್ರಾರಂಭ ಮಾಡಿ ಕೈ ತುಂಬಾ ಲಾಭ ಸಂಪಾದನೆ ಮಾಡಬಹುದಾದಂತಹ ಅವಕಾಶ ಇದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಇದರ ಮಾಹಿತಿಯನ್ನು ಪಡೆದುಕೊಳ್ಳೋಣ.

ಅಮುಲ್ ಫ್ರಾಂಚೈಸಿ ಬಿಸಿನೆಸ್!

ಅಮುಲ್ ಹೆಸರು ಯಾರು ತಾನೆ ಕೇಳಿಲ್ಲ ಹೇಳಿ. ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಡೈರಿ ಪ್ರಾಡಕ್ಟ್ ಬ್ರಾಂಡ್ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಇದು ವಿದೇಶದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಹೊಂದಿದೆ. ಇನ್ನು ಇದರ ಉತ್ಪನ್ನಗಳಾಗಿರುವಂತಹ ಹಾಲು, ಮೊಸರು, ತುಪ್ಪ, ಐಸ್ ಕ್ರೀಮ್ ಹೇಗೆ ಹತ್ತು ಹಲವಾರು ಪ್ರಾಡಕ್ಟ್ ಗಳನ್ನು ನೀವು ಅಮೂಲ್ ಹೆಸರಿನಲ್ಲಿ ನೋಡಬಹುದಾಗಿದೆ. ನೀವು ಕೂಡ ಇದರ ಫ್ರಾಂಚೈಸಿಯನ್ನು ಪ್ರಾರಂಭ ಮಾಡಿ ಅಮುಲ್ ಪ್ರಾಡಕ್ಟ್ ಗಳನ್ನು ಮಾರಾಟ ಮಾಡಿ ಹಣವನ್ನು ಗಳಿಸಬಹುದಾಗಿದೆ.

ಫ್ರಾಂಚೈಸಿ ಶುರು ಮಾಡುವುದು ಹೀಗೆ!

  • ಅಮೂಲ್ ಫ್ರಾಂಚೈಸಿಯನ್ನು ನೀವು ಕೇವಲ ಎರಡು ಲಕ್ಷ ರೂಪಾಯಿಗಳ ಬಂಡವಾಳದಲ್ಲಿ ಪ್ರಾರಂಭ ಮಾಡಬಹುದಾಗಿದ್ದು ನೀವು ಮಾರಾಟ ಮಾಡುವಂತಹ ಪ್ರಾಡಕ್ಟ್ಗಳ ಮೇಲೆ 2.5 ರಿಂದ 20 ಪ್ರತಿಶತ ಕಮಿಷನ್ ಪಡೆದುಕೊಳ್ಳಬಹುದಾಗಿದೆ.
  • ಅಮೂಲ್ ಈಗಾಗಲೇ ಎಲ್ಲರಿಗೂ ತಿಳಿದಿರುವಂತಹ ಬ್ರಾಂಡ್ ಆಗಿರುವ ಕಾರಣದಿಂದಾಗಿ ಜನಪ್ರಿಯತೆಯ ಅವಶ್ಯಕತೆ ಇಲ್ಲ ಆದ್ರೂ ಕೂಡ ಮಾರ್ಕೆಟಿಂಗ್ ಹಾಗೂ ಟ್ರೈನಿಂಗ್ ಅನ್ನು ಕೂಡ ಅಮೂಲ್ ಕಂಪನಿಯೇ ನಿಮಗೆ ನೀಡುತ್ತದೆ.

ಅಮುಲ್ ಫ್ರಾಂಚೈಸಿ ಪಡೆದುಕೊಳ್ಳುವ ವಿಧಾನ!

  • ಕೇವಲ ಎರಡು ಲಕ್ಷ ರೂಪಾಯಿಗಳ ಬಂಡವಾಳದಲ್ಲಿ ನೀವು ಒಳ್ಳೆಯ ಜಾಗದಲ್ಲಿ ಇದನ್ನ ಓಪನ್ ಮಾಡಬೇಕಾಗಿರುತ್ತದೆ ಹಾಗೂ FSSAI ಲೈಸೆನ್ಸ್ ಅನ್ನು ನೀವು ಇದನ್ನು ಪ್ರಾರಂಭ ಮಾಡುವುದಕ್ಕೆ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಒಳ್ಳೆಯ ಜನ ಬರುವಂತಹ ಜಾಗದಲ್ಲಿ ಇದನ್ನು ಪ್ರಾರಂಭ ಮಾಡಿದರೆ ಮಾತ್ರ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.
  • ಇದನ್ನು ಯಾವ ರೀತಿಯಲ್ಲಿ ಪ್ರಾರಂಭ ಮಾಡಬೇಕು ಎಂಬುದನ್ನು ನೀವು ಅಮೂಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿರುವಂತಹ ಮಾಹಿತಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ.
  • ವೆಬ್ ಸೈಟ್ ನಲ್ಲಿ ನೀವು ಪಡೆದುಕೊಳ್ಳುವಂತಹ ಮಾಹಿತಿಯ ಮೂಲಕ ಹಾಗೂ ಅಲ್ಲಿ ಸಿಗುವಂತಹ ಕೆಲವೊಂದು ನಿಯಮಗಳ ಅನ್ವಯವಾಗಿ ನೀವು ಈ ವ್ಯಾಪಾರವನ್ನು ಮಾಡಬೇಕಾಗಿರುತ್ತದೆ. ಉತ್ತಮ ಜನನಿ ಬಿಡ ಇರುವಂತಹ ಪ್ರದೇಶದಲ್ಲಿ ನೀವು ಇದನ್ನು ಪ್ರಾರಂಭ ಮಾಡಿದರೆ ಕೈ ತುಂಬಾ ಸಂಪಾದನೆ ಮಾಡಬಹುದು.
business idea