Government Rules: ಸರ್ಕಾರದ ಹೊಸ ರೂಲ್ಸ್; ಉಚಿತ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶುರುವಾಯ್ತು ಆತಂಕ!

Government Rules: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವಂತಹ 5 ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರು ರಾಜ್ಯದ ಉದ್ದಗಲಕ್ಕೂ ಕೂಡ ಸರ್ಕಾರಿ ವಸ್ತುಗಳಲ್ಲಿ ಪ್ರಯಾಣ ಮಾಡುವಂತಹ ಶಕ್ತಿ ಯೋಜನೆ ಕೂಡ ಒಂದು ಪ್ರಮುಖ ಯೋಜನೆಯಾಗಿ ಕಾಣಿಸಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಪ್ರಾರಂಭಿಕ ದಿನಗಳಲ್ಲಿ ಸರ್ಕಾರ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಿದ್ದರು ಕೂಡ ಇತ್ತೀಚಿನ ದಿನಗಳಲ್ಲಿ ಇದು ಸದ್ಯಕ್ಕೆ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ಇದಕ್ಕಾಗಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಬೇಕಾದಂತಹ ಪರಿಸ್ಥಿತಿಯ ಹೊರೆ ಇದ್ರೂ ಕೂಡ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂಬುದಾಗಿ ಹೇಳಿಕೊಳ್ಳುತ್ತಿದೆ.

ಶಕ್ತಿ ಯೋಜನೆ ಅಡಿಯಲ್ಲಿ ಹೆಚ್ಚಿನ ಮಹಿಳೆಯರು ಪ್ರಯಾಣ ಮಾಡುತ್ತಿರುವ ಕಾರಣದಿಂದಾಗಿ ಇದನ್ನು ನಿರ್ವಹಿಸುವುದಕ್ಕೆ ಬಸ್ ಕಂಡಕ್ಟರ್ ಕೂಡ ಸಾಕಷ್ಟು ಕಷ್ಟ ಆಗುತ್ತಿದೆ ಹಾಗೂ ಸಾಕಷ್ಟು ಕಡೆಗಳಲ್ಲಿ ನೀವು ಗಮನಿಸಬಹುದು ಟಿಕೆಟ್ ಅನ್ನು ಕಳೆದುಕೊಳ್ಳುವುದು ಅಥವಾ ಗುರುತು ಸಿಟಿ ಇಲ್ಲದೆ ಟಿಕೆಟ್ ಪಡೆದುಕೊಳ್ಳುವುದರಿಂದಾಗಿ ಸಾಕಷ್ಟು ಬಸ್ ಕಂಡಕ್ಟರ್ಗಳ ಕೆಲಸ ಹೋಗಿರುವಂತಹ ಘಟನೆಗಳು ಕೂಡ ಇತ್ತೀಚಿನ ದಿನಗಳಲ್ಲಿ ನಮ್ಮ ಕಣ್ಣ ಮುಂದೆ ಬಂದಿದೆ. ಇದೇ ಕಾರಣಕ್ಕಾಗಿ ಈಗ ಕೆಎಸ್ಆರ್ಟಿಸಿ ನಿಗಮ ಈ ವಿಚಾರದ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಿದೆ.

ಕೆ ಎಸ್ ಆರ್ ಟಿ ಸಿ ಯಿಂದ ಶಕ್ತಿ ಯೋಜನೆಯಲ್ಲಿ ಬಂತು ನೋಡಿ ಹೊಸ ನಿಯಮ!

ಇನ್ಮುಂದೆ ಗುರುತು ಚೀಟಿ ತೋರಿಸದೆ ಬಾಸ್ ಕಂಡಕ್ಟರ್ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣವನ್ನು ಮಾಡುವಂತಹ ಟಿಕೆಟ್ ಅನ್ನು ನೀಡುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಯಾಕೆಂದ್ರೆ ಒಂದು ವೇಳೆ ಈ ಸಂದರ್ಭದಲ್ಲಿ ಚೆಕಿಂಗ್ ಗೆ ಬಂದರೆ ಗುರುತು ಚೀಟಿ ಇಲ್ಲದೆ ಹೋದಲ್ಲಿ ಕಂಡಕ್ಟರ್ ನಿಮಗೆ ಟಿಕೆಟ್ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದ್ರೆ ಈ ವಿಚಾರದ ಬಗ್ಗೆ ಶಿಕ್ಷೆಯನ್ನು ಎದುರಿಸಬೇಕಾದಂತಹ ಸಾಧ್ಯತೆ ಇರುತ್ತದೆ ಅನ್ನೋದನ್ನ ಎಲ್ಲರೂ ತಿಳಿದುಕೊಳ್ಳಬೇಕಾಗಿದ್ದು ಇದೇ ಕಾರಣಕ್ಕಾಗಿ ಇದನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ಟಿಕೆಟ್ ನೀಡುವಂತಹ ಸಾಮಾನ್ಯ ಮಿಷನ್ ಕೆಟ್ಟು ಹೋದಾಗ ಪಿಂಕ್ ಟಿಕೆಟ್ ಮೂಲಕ ಎಲ್ಲಿಂದ ಎಲ್ಲಿಗೆ ಹೋಗ್ತಾರೆ ಅನ್ನೋದರ ಮಾಹಿತಿಯನ್ನು ಬರೆದು ಕಂಡಕ್ಟರ್ಗಳು ಮಹಿಳೆಯರಿಗೆ ನೀಡಬೇಕಾಗಿರುತ್ತದೆ. ಇದೇ ಸಂದರ್ಭದಲ್ಲಿ ತಿಳಿದು ಬಂದಿರುವ ಮತ್ತೊಂದು ಮಾಹಿತಿಯ ಪ್ರಕಾರ ಈ ರೀತಿ ನೀಡಿರುವಂತಹ ಪಿಂಕ್ ಟಿಕೆಟ್ ಅನ್ನು ಮಹಿಳೆಯರು ಕಳೆದುಕೊಂಡರೆ 10 ಸಾವಿರ ರೂಪಾಯಿಗಳ ದಂಡವನ್ನು ಕೂಡ ಕಟ್ಟಬೇಕಾಗುತ್ತದೆ ಅನ್ನೋದಾಗಿ ತಿಳಿದು ಬಂದಿದೆ. ಹೀಗಾಗಿ ಕೇವಲ ಬಸ್ ನಿರ್ವಾಹಕರು ಮಾತ್ರವಲ್ಲದೆ ಉಚಿತ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಕೂಡ ಇನ್ಮುಂದೆ ಈ ವಿಚಾರದ ಬಗ್ಗೆ ಸಾಕಷ್ಟು ಜಾಗರೂಕರ ಆಗಿರಬೇಕು ಇಲ್ಲವಾದಲ್ಲಿ ದಂಡ ಕಟ್ಟೋದಕ್ಕೆ ರೆಡಿಯಾಗಿರಬೇಕು.

Government Rules