Pawan Kalyan:ಉಪ ಮುಖ್ಯಮಂತ್ರಿ ಆದಮೇಲೆ ʼವಾರಾಹಿ ದೀಕ್ಷೆʼಯಲ್ಲಿ ಪವನ್ ಕಲ್ಯಾಣ್ – ತಾಯಿ ʼವಾರಾಹಿ ದೇವಿʼ ಯಾರು ಗೊತ್ತೆ..?

Pawan Kalyan: ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಆಗಿರುವಂತಹ ಪವನ್ ಕಲ್ಯಾಣ್ ರವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಈಗಾಗಲೇ ಅಧಿಕಾರವನ್ನು ಪಡೆದುಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಹಾಗೂ ಈಗ ಅವರು 11 ದಿನಗಳ ವಾರಾಹಿ ದೇವಿಯ ದೀಕ್ಷೆಯನ್ನು ಪಡೆದುಕೊಂಡಿದ್ದು ಎಲ್ಲರೂ ಚಿತ್ತ ಅವರ ಮೇಲೆ ನೆಟ್ಟಿದೆ. ಕಾವಿ ಬಟ್ಟೆ ಧರಿಸಿ ಸಾತ್ವಿಕ ಆಹಾರವನ್ನು ಸೇವಿಸುವಂತಹ ಹಾಗೂ ಇನ್ನು ಸಾಕಷ್ಟು ಕ್ರಮಗಳನ್ನು ಪರಿಪಾಲಿಸುವಂತಹ ವಾರಾಹಿ ಅಮ್ಮನ ದೀಕ್ಷೆಯ ಬಗ್ಗೆ ಬನ್ನಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ವಾರಾಹಿ ಅಮ್ಮನ ದೀಕ್ಷೆಯಲ್ಲಿ ಪವನ್ ಕಲ್ಯಾಣ್!

ಶತ್ರುಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಪವನ್ ಕಲ್ಯಾಣ್ ರವರು ತಾವು ಚುನಾವಣಾ ಪ್ರಚಾರ ಮಾಡಿದ್ದ ವಾಹನಕ್ಕೆ ಕೂಡ ವಾರಹಿಯಾ ಹೆಸರನ್ನು ಇಟ್ಟಿದ್ದರು ಹಾಗೂ ಈ ಸಂದರ್ಭದಲ್ಲಿ ಜಗನ್ ರವರ ವೈಸಿಪಿ ಪಕ್ಷ ಇದರ ಬಗ್ಗೆ ಸಾಕಷ್ಟು ಟಿಕೆಯನ್ನು ಕೂಡ ಮಾಡಿತ್ತು ಆದರೆ ಇದೇ ಹೆಸರಿನಿಂದ ಈಗ ಪವನ್ ಕಲ್ಯಾಣ್ ಗೆದ್ದು ಬಂದಿದ್ದಾರೆ. ವಾರಾಹಿ ಮಾತೆ ದೇವಿಯ ಸಪ್ತ ಸ್ವರೂಪಗಳಲ್ಲಿ ಒಂದು ಅವತಾರ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಲಲಿತಾ ಪರಮೇಶ್ವರಿಯ ಪ್ರತಿರೂಪ ಎಂಬುದಾಗಿ ಕೂಡ ಶಾಸ್ತ್ರಗಳಲ್ಲಿ ಪರಿಗಣಿಸಲಾಗುತ್ತದೆ. ವರಹ ರೂಪವನ್ನು ಹೊಂದಿರುವಂತಹ ದೇವಿಯನ್ನೇ ನಾವು ವಾರಾಹಿ ಎಂಬುದಾಗಿ ಪರಿಗಣಿಸಿ ಆಕೆಯನ್ನು ಪೂಜಿಸಲಾಗುತ್ತದೆ. ಸಾಕಷ್ಟು ಜನರಿಗೆ ವಾರಾಹಿ ಅಮ್ಮನ ಬಗ್ಗೆ ಹೆಚ್ಚು ಮಾಹಿತಿ ತಿಳಿದಿರುವುದಿಲ್ಲ ಹಾಗೂ ಆಕೆ ಸಿಂಹ ವಾಹನದಲ್ಲಿ ಕುಳಿತುಕೊಂಡಿರುತ್ತಾಳೆ. ಪುರಾಣ ಜ್ಞಾನವನ್ನು ಹೊಂದಿರುವವರಿಗೆ ಮಾತ್ರ ವಾರಹಿದೇವಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿರುತ್ತಾರೆ.

ನಿಜವಾಗಿ ಹೇಳಬೇಕು ಅಂತ ಅಂದ್ರೆ ವಾರಾಹಿ ಅಮ್ಮ ಇವತ್ತು ಸಾಕಷ್ಟು ಜನಪ್ರಿಯತೆ ಹೊಂದೋದಕ್ಕೆ ಚುನಾವಣೆ ಸಂದರ್ಭದಲ್ಲಿ ಪವನ್ ಕಲ್ಯಾಣ್ ರವರು ಕೂಡ ಪ್ರಮುಖವಾದ ಕಾರಣ ಎಂದು ಹೇಳಬಹುದಾಗಿದೆ. ಈಗಾಗಲೇ ವಾರಾಹಿ ಅಮ್ಮನ ದೀಕ್ಷೆಯನ್ನು ಪಡೆದುಕೊಂಡಿರುವಂತಹ ಪವನ್ ಕಲ್ಯಾಣ್ ರವರು ಕೇವಲ ಹಾಲು ಹಣ್ಣು ಹಾಗೂ ದ್ರವರೂಪದ ಆಹಾರ ವಸ್ತುವನ್ನು ಮಾತ್ರ ಸೇವಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ದೇವಿಗೆ ಪೂಜೆ ಮಾಡಿ ನೆಲದಲ್ಲಿ ಮಲಗುವಂತಹ ನಿಯಮ ಇದರಲ್ಲಿದೆ. ಇದರ ಜೊತೆಗೆ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ರವರು ತಮ್ಮ ಜವಾಬ್ದಾರಿಯನ್ನು ಕೂಡ ನಿರ್ವಹಿಸುತ್ತಿದ್ದಾರೆ.

ವಾರಾಹಿ ಅಮ್ಮನ ದೀಕ್ಷೆ!

ಆಷಾಢ ಮಾಸ ಪ್ರಾರಂಭವಾಗುವ ಸಂದರ್ಭದಲ್ಲಿ ಈ ದೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಪ್ರತಿದಿನದ ಪೂಜೆಯ ಸಂದರ್ಭದಲ್ಲಿ ನೀವು ವಾರಾಹಿ ಮಂತ್ರವನ್ನು ಪಠಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇನ್ನು ಸಾಕಷ್ಟು ಜನರು ನವರಾತ್ರಿಯ ಸಂದರ್ಭದಲ್ಲಿ ಕೂಡ ವಾರಾಹಿ ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ. 9 ದಿನಗಳ ದೀಕ್ಷೆಯನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು ಆದರೆ ಪವನ್ ಕಲ್ಯಾಣ್ ರವರು 11 ದಿನಗಳ ದೀಕ್ಷೆಯನ್ನು ಈಗ ಪರಿಪಾಲಿಸುತ್ತಿದ್ದಾರೆ.

Pawan Kalyan