Shri Krishna:ಈ ರಾಶಿಗಳು ಎಂದರೆ ಕೃಷ್ಣನಿಗೆ ಅಚ್ಚು ಮೆಚ್ಚು – ಕೇಳಿದೆಲ್ಲವನ್ನು ಈ ರಾಶಿಗಳಿಗೆ ಕೊಡುತ್ತಾನೆ; ನಿಮ್ಮ ರಾಶಿ ಇದೆಯೇ??

Shri Krishna:ಇನ್ನೇನು ಶ್ರೀಕೃಷ್ಣನ ಜನ್ಮ ದಿನಾಚರಣೆ ಆಗಿರುವಂತಹ ಕೃಷ್ಣ ಜನ್ಮಾಷ್ಟಮಿ ಇದೆ ಆಗಸ್ಟ್ 26 ಕ್ಕೆ ಬರಲಿದೆ. ಈ ಶುಭ ಸಂದರ್ಭದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶ್ರೀ ಕೃಷ್ಣ ಇಷ್ಟಪಡುವಂತಹ ಅಚ್ಚುಮೆಚ್ಚಿನ ರಾಶಿಗಳು ಯಾವುವು ಅನ್ನೋದರ ಬಗ್ಗೆ. ಹಾಗಿದ್ದರೆ ಬನ್ನಿ, ತಡ ಮಾಡೋದು ಬೇಡ ಆ ರಾಶಿಗಳು ಯಾವುವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ವೃಷಭ ರಾಶಿ

ಶ್ರೀಕೃಷ್ಣನ ಅನುಗ್ರಹದಿಂದ ಹಾಗೂ ಆತನ ಅಚ್ಚುಮೆಚ್ಚಿನ ರಾಶಿ ಆಗಿರುವ ಕಾರಣದಿಂದಾಗಿ ವೃಷಭ ರಾಶಿಯವರು ಕೆಲಸದಲ್ಲಿ ವಿಜಯವನ್ನು ಸಾಧಿಸುತ್ತಾರೆ. ಯಾವುದೇ ಸಮಸ್ಯೆ ಬರಲಿ ವೃಷಭ ರಾಶಿಯವರು ತಮ್ಮ ಜೀವನದಲ್ಲಿ ಅದನ್ನ ತಮ್ಮ ಬುದ್ದಿವಂತಿಕೆಯಿಂದಾಗಿ ಪರಿಹಾರ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವುದೇ ಪರಿಸ್ಥಿತಿಗಳಲ್ಲಿ ಕೂಡ ನೀವು ತಾಳ್ಮೆಯಿಂದಲೇ ಕೆಲಸವನ್ನ ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸುವಂತಹ ಸಾಧ್ಯತೆಯನ್ನು ಹೊಂದಿದ್ದೀರಿ.

ಕರ್ಕ ರಾಶಿ

ಕರ್ಕ ರಾಶಿಯವರು ಶ್ರೀ ಕೃಷ್ಣನಿಗೆ ಎಷ್ಟು ಇಷ್ಟ ಅಂದ್ರೆ ಮನಃಸ್ಪೂರ್ತಿಯಾಗಿ ಕೃಷ್ಣನ ಹೆಸರನ್ನ ಕರ್ಕ ರಾಶಿಯವರು ಪ್ರಾರ್ಥನೆ ಮಾಡಿದರೆ ಸಾಕು ಅವರ ಎಲ್ಲಾ ಕಷ್ಟಗಳನ್ನು ಕೂಡ ಕೃಷ್ಣ ಪರಮಾತ್ಮ ದೂರ ಮಾಡುತ್ತಾನೆ. ಯಾವುದೇ ಕೆಲಸವನ್ನು ಈ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ನೀವು ಪ್ರಾರಂಭ ಮಾಡಿ ಖಂಡಿತವಾಗಿ ಅದರಲ್ಲಿ ಕೃಷ್ಣ ಪರಮಾತ್ಮನ ಆಶೀರ್ವಾದದಿಂದಾಗಿ ಯಶಸ್ಸನ್ನು ಹೊಂದುವಂತಹ ಅವಕಾಶವನ್ನ ನೀವು ಪಡೆದುಕೊಂಡಿರುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರು ಹುಟ್ಟಿದಾಗಿನಿಂದಲೇ ನಾಯಕತ್ವ ಹಾಗೂ ಧೈರ್ಯದ ಗುಣಗಳನ್ನು ಹೆಚ್ಚಾಗಿ ಬಳಸಿಕೊಂಡು ಬಂದಿರುತ್ತಾರೆ ಇದೇ ಕಾರಣಕ್ಕಾಗಿ ಕೃಷ್ಣನಿಗೆ ಈ ರಾಶಿಯವರು ಅಂದರೆ ತುಂಬಾನೇ ಇಷ್ಟ. ಕೇವಲ ಶಕ್ತಿ ಮಾತ್ರವಲ್ಲದೆ ಕೆಲವೊಂದು ಅಗತ್ಯ ಪರಿಸ್ಥಿತಿಗಳಲ್ಲಿ ಕೃಷ್ಣನ ರೀತಿಯಲ್ಲಿ ಬುದ್ಧಿವಂತಿಕೆಯನ್ನು ಕೂಡ ಸಿಂಹ ರಾಶಿಯವರು ಉಪಯೋಗಿಸುವುದರಿಂದಾಗಿ ಆ ಕೆಲಸಗಳಲ್ಲಿ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿಯೇ ಪ್ರತಿಯೊಂದು ಪರಿಸ್ಥಿತಿಗಳಲ್ಲಿ ಕೂಡ ಸಿದ್ದರಾಗುವಂತಹ ಚಾಣಾಕ್ಷತೆ ಅವರಲ್ಲಿ ಇದೆ.

ತುಲಾ ರಾಶಿ

ತುಲಾ ರಾಶಿಯವರ ಮೇಲೆ ಶ್ರೀ ಕೃಷ್ಣ ವಿಶೇಷವಾದ ಭಾವನೆಯನ್ನು ಹೊಂದಿರುತ್ತಾನೆ ಹಾಗೂ ಅವರ ಮೇಲೆ ತನ್ನ ಕರುಣೆಯನ್ನ ಪ್ರಾಪ್ತಿಯಾಗುವ ರೀತಿಯಲ್ಲಿ ಮಾಡುತ್ತಾರೆ. ಸಮಾಜದಲ್ಲಿ ಕೃಷ್ಣನ ಕೃಪೆಯಿಂದಾಗಿ ತುಲಾ ರಾಶಿಯವರು ದೊಡ್ಡ ಮಟ್ಟದಲ್ಲಿ ಗೌರವವನ್ನು ಸಂಪಾದನೆ ಮಾಡಲಿದ್ದಾರೆ. ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ ಕೃಷ್ಣನ ಆಶೀರ್ವಾದ ಇರುವುದರಿಂದಾಗಿ ತುಲಾ ರಾಶಿಯವರು ಯಾವುದೇ ರೀತಿಯಲ್ಲಿ ಆರ್ಥಿಕ ಸಂಕಷ್ಟವನ್ನು ಕಾಣಬೇಕಾದ ಅಗತ್ಯವಿಲ್ಲ. ಕೈ ತುಂಬ ಸಂಪಾದನೆ ಸಿಗಲಿದೆ ಹಾಗೂ ಸುಖ ಸಮೃದ್ಧಿಯಿಂದ ಕೂಡಿರುವಂತಹ ಜೀವನ ಸಿಗಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕ್ರಷ್ಣನಿಗೆ ಅಚ್ಚುಮೆಚ್ಚಿನ ರಾಶಿಗಳು ಎಂದು ಕರೆಯಲ್ಪಡುವಂತಹ ರಾಶಿಗಳು ಇವರೇ ಆಗಿದ್ದಾರೆ.

Shri Krishna