Astrology: ಸೃಷ್ಟಿಯಾಗಿದೆ ಗುರು ಚಂಡಾಲ ಯೋಗ- ಇದರಿಂದ ವರ್ಷ ಪೂರ್ತಿ ಈ ರಾಶಿಗಳಿಗೆ ದುಡ್ಡೋ ದುಡ್ಡು!

Astrology:ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗ್ರಹಗಳ ಸಂಯೋಗದಿಂದಾಗಿ ಅದರ ನೇರ ಪರಿಣಾಮ ಎನ್ನುವುದು ಮನುಷ್ಯರ ಜೀವನದ ಮೇಲೆ ಬೀರುತ್ತದೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋಕೆ ಹೊರಟಿರುವುದು ಗುರು ಹಾಗೂ ಕೇತುವಿನ ಸಂಯೋಗದಿಂದ ಉಂಟಾಗುತ್ತಿರುವ ಗುರು ಚಾಂಡಾಲ ಯೋಗದ ಬಗ್ಗೆ. ಈ ವಿಶೇಷವಾದ ಸಂಯೋಗದಿಂದಾಗಿ ದಿಡೀರ್ ಧನ ಲಾಭ ಆಗುವಂತಹ ಹಾಗೂ ಸಾಕಷ್ಟು ಸಮಯಗಳಿಂದ ನಡೆದಿರುವಂತಹ ಕೆಲಸಗಳು ಮತ್ತೆ ಪ್ರಾರಂಭವಾಗಿ ಯಶಸ್ವಿಯಾಗಿ ಪೂರ್ತಿಯಾಗುವಂತಹ ವಿಶೇಷ ಕಾರ್ಯಗಳು ಕೂಡ ಈ ಸಂದರ್ಭದಲ್ಲಿ ನಡೆಯಲಿದ್ದು ಅದೃಷ್ಟವನ್ನು ಪಡೆಯಲಿರುವಂತಹ ನಿರ್ದಿಷ್ಟ ರಾಶಿಯವರು ಯಾರಲೇ ಅನ್ನುವುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ

ಕಾನೂನು ಕಚೇರಿ ಪ್ರಕರಣದಲ್ಲಿ ಸಾಕಷ್ಟು ಸಮಯಗಳಿಂದಲೂ ಕೂಡ ಕೋರ್ಟು ಕಚೇರಿ ಅಲೆದಾಡುತ್ತಿರುವಂತಹ ವೃಷಭ ರಾಶಿಯವರು ಈ ಸಂದರ್ಭದಲ್ಲಿ ತೀರ್ಪನ್ನು ತಮ್ಮ ಪರವಾಗಿ ಪಡೆದುಕೊಳ್ಳುವಂತಹ ಅದೃಷ್ಟವನ್ನು ಹೊಂದಿದ್ದಾರೆ. ಗುರು ಚಾಂಡಾಲ ಯೋಗದಿಂದಾಗಿ ವೃಷಭ ರಾಶಿಯವರ ಜೀವನದಲ್ಲಿ ಸಾಕಷ್ಟು ಸುಖ ಶಾಂತಿ ನೆಮ್ಮದಿ ಕಂಡು ಬರಲಿದೆ. ಗೆಳೆಯರ ಜೊತೆಗೆ ಉತ್ತಮ ಕ್ಷಣಗಳನ್ನು ಕಾಯುವಂತಹ ಅವಕಾಶವನ್ನು ಪಡೆದುಕೊಳ್ಳುತ್ತೀರಿ. ಹಬ್ಬದಂತಹ ದೈವಿಕ ಆಚರಣೆಗಳಲ್ಲಿ ಕೂಡ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ.

ಕನ್ಯಾ ರಾಶಿ

ಅನಿರೀಕ್ಷಿತವಾಗಿ ಧನ ಲಾಭ ಆಗುವಂತಹ ಸಾಧ್ಯತೆ ಕನ್ಯಾ ರಾಶಿಯವರ ರಾಶಿ ಚಕ್ರದಲ್ಲಿ ಈ ಸಂದರ್ಭದಲ್ಲಿ ಕಂಡುಬರುತ್ತದೆ. ಸಾಕಷ್ಟು ಸಮಯಗಳಿಂದ ವಿದೇಶ ಪ್ರಯಾಣ ಮಾಡಬೇಕು ಅಂದುಕೊಂಡಿರುವಂತಹ ಕನ್ಯಾ ರಾಶಿಯವರ ಕನಸು ಈಡೇರಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೈತುಂಬ ಲಾಭ ಮಾಡಿಕೊಳ್ಳುವಂತಹ ಅವಕಾಶವನ್ನು ಕೂಡ ಕನ್ಯಾರಾಶಿಯವರು ಈ ಸಂದರ್ಭದಲ್ಲಿ ಹೊಂದಿರುತ್ತಾರೆ. ಒಡಹುಟ್ಟಿದವರ ಜೊತೆಗೆ ಮತ್ತೆ ನಿಮ್ಮ ಬಾಂಧವ್ಯ ಇನ್ನಷ್ಟು ಚೆನ್ನಾಗಿ ಆಗಲಿದೆ.

ಸಿಂಹ ರಾಶಿ

ಲಾಟರಿ ಅಂತಹ ಅದೃಷ್ಟದ ಆಟದ ಮೂಲಕ ನೀವು ಈ ಸಂದರ್ಭದಲ್ಲಿ ಹಣ ಗೆಲ್ಲುವಂತಹ ಅವಕಾಶವನ್ನು ಹೊಂದಿದ್ದೀರಿ. ಯಾವುದೇ ಕೆಲಸಗಳನ್ನು ನಿಮಗೆ ಜವಾಬ್ದಾರಿಯ ರೂಪದಲ್ಲಿ ನೀಡಿದರೂ ಕೂಡ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತಹ ಸಾಮರ್ಥ್ಯ ನಿಮ್ಮ ಬಳಿ ಇದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇರುವಂತಹ ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಕೈ ತುಂಬಾ ಲಾಭ ಸಂಪಾದನೆ ಮಾಡಲಿದ್ದಾರೆ. ಆದಾಯ ಸಂಪಾದನೆಗಾಗಿ ನಿಮಗೆ ಬೇರೆ ಬೇರೆ ಮೂಲಗಳ ಅವಕಾಶಗಳು ಕೂಡ ತೆರೆದುಕೊಳ್ಳಲಿವೆ. ಹಾರ್ದಿಕ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ಅನುಭವಿಸಬೇಕಾದ ಅಗತ್ಯ ಇಲ್ಲ.

ಮೀನ ರಾಶಿ

ಈ ಸಂದರ್ಭದಲ್ಲಿ ಮೀನ ರಾಶಿಯವರು ತಾವು ಮಾಡುವಂತಹ ಕೆಲಸಗಳ ಮುಖಾಂತರ ಸಮಾಜದಲ್ಲಿ ಗೌರವವನ್ನು ಸಂಪಾದಿಸಲಿದ್ದಾರೆ ಹಾಗೂ ಗಣ್ಯ ವ್ಯಕ್ತಿಯ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಕೂಡ ನಿಮಗೆ ಉತ್ತಮ ಅವಕಾಶಗಳು ಕಾದಿವೆ. ನಿಮ್ಮನ್ನು ತಿರಸ್ಕರಿಸಿ ಹೋದವರು ಕೂಡ ಈ ಸಂದರ್ಭದಲ್ಲಿ ವಾಪಸ್ಸು ನಿಮ್ಮನ್ನು ಹುಡುಕಿಕೊಂಡು ಬರುವ ರೀತಿಯಲ್ಲಿ ನಡೆಯುತ್ತದೆ.

Astrology