Bollywood:ಶಮಿ ಜೊತೆ ಮದುವೆ ಇಲ್ಲ ಎಂದಿರುವ ಸಾನಿಯಾ ಯುವರಾಜ್ ಜೊತೆ ಮಾಡಿದ್ದೇನು ಗೊತ್ತೇ?? ಇವರಿಬ್ಬರಿಗೂ ಇವೆಲ್ಲ ಬೇಕಿತ್ತಾ?

Bollywood: ಸೋಶಿಯಲ್ ಮೀಡಿಯಾದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾನಿಯಾ ಮಿರ್ಜಾ ಅವರು ಭಾರತೀಯ ಕ್ರಿಕೆಟಿಗ ಆಗಿರುವಂತಹ ಶಮ್ಮಿ ಅವರನ್ನು ಮದುವೆಯಾಗುತ್ತಾರೆ ಅನ್ನೋ ರೀತಿಯಲ್ಲಿ ಸುದ್ದಿ ಕೇಳಿ ಬಂದಿತ್ತು ಯಾಕೆಂದ್ರೆ ಇಬ್ಬರೂ ಕೂಡ ಈಗಾಗಲೇ ವಿವಾಹ ವಿಚ್ಛೇದವನ್ನು ಪಡೆದುಕೊಂಡಿರುವಂತಹ ಸೆಲೆಬ್ರಿಟಿಗಳಾಗಿದ್ದಾರೆ. ಜಾಗತಿಕವಾಗಿ ಟೆನಿಸ್ ಲೋಕದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಿರುವಂತಹ ಸಾನಿಯಾ ಮಿರ್ಜಾ ಶೋಯಬ್ ಮಲ್ಲಿಕ್ ಅವರಿಂದ ಸಂಬಂಧವನ್ನು ಕಡಿದುಕೊಂಡು ಈಗ ಒಂಟಿಯಾಗಿ ಉಳಿದಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರು ತಮ್ಮ ಎರಡನೇ ಸಂಬಂಧಕ್ಕಾಗಿ ಅಂದರೆ ಎರಡನೇ ಮದುವೆಗಾಗಿ ಸಿದ್ಧವಾಗಿದ್ದರೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತಿವೆ.

ಶೋಯಬ್ ಮಲಿಕ್ ಅವರನ್ನು 2010ರಲ್ಲಿ ಅವರ ಎರಡನೇ ಹೆಂಡತಿಯಾಗಿ ಸಾನಿಯಾ ಮಿರ್ಜಾ ಅವರು ಮದುವೆ ಆಗಿದ್ದರು ಆದರೆ ಈ ವರ್ಷದ ಆರಂಭದಲ್ಲಿ ವಿವಾಹ ವಿಚ್ಛೇದನವನ್ನು ನೀಡುವ ಮೂಲಕ ತಮ್ಮ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಾವು ಶೋಯಬ್ ಮಲಿಕ್ ರವರನ್ನ ಮದುವೆಯಾಗೋದಕ್ಕಿಂತ ಮುಂಚೆ ಅವರ ಜೊತೆ ತಳಕು ಹಾಕಿಕೊಂಡಿರುವಂತಹ ಸೆಲೆಬ್ರಿಟಿಗಳ ಬಗ್ಗೆ ಮಾತನಾಡುವುದಕ್ಕೆ ಹೊರಟಿದ್ದೇವೆ. ಶೋಯಬ್ ಅವರಿಗಿಂತ ಮುಂಚೆ ಸೊಹ್ರಬ್ ರವರ ಜೊತೆಗೆ ಕೂಡ ಎಂಗೇಜ್ಮೆಂಟ್ ಆಗಿತ್ತು ಆದರೆ ನಂತರ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಇವರಿಬ್ಬರ ನಡುವಿನ ರಿಲೇಶನ್ಶಿಪ್ ಮುರಿದು ಬೀಳುತ್ತದೆ.

ಇದಾದ ನಂತರ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಶಾಹಿದ್ ಕಪೂರ್ ಅವರ ಜೊತೆಗೆ ಕೂಡ ಸಾನಿಯಾ ಮಿರ್ಜಾ ಅವರ ಹೆಸರು ಕೇಳಿಬಂದಿತ್ತು ಹಾಗೂ ಇಬ್ಬರು ಸಾಕಷ್ಟು ಸಮಯಗಳ ಕಾಲ ಡೇಟಿಂಗ್ ನಡೆಸಿದರು ಅನ್ನೋದನ್ನ ಕೂಡ ಮಾಧ್ಯಮಗಳು ಬಹಿರಂಗಪಡಿಸಿದೆ. ಸೌತ್ ಸಿನಿಮಾ ನಟ ಆಗಿರುವಂತಹ ನವದೀಪ್ ಅವರ ಜೊತೆಗೆ ಕೂಡ ಸಾಕಷ್ಟು ಬಾರಿ ಜೊತೆಯಾಗಿ ಕಾಣಿಸಿಕೊಂಡು ಸಾನಿಯಾ ಮಿರ್ಜಾ ಸುದ್ದಿಯಾಗಿದ್ರು ಅನ್ನೋದಾಗಿಕೂಡ ಕೇಳಿ ಬರುತ್ತದೆ.

ಯುವಿ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್

ಎಲ್ಲಕ್ಕಿಂತ ಪ್ರಮುಖವಾಗಿ ಹಾಗೂ ದೊಡ್ಡ ಮಟ್ಟದಲ್ಲಿ ಸುದ್ದಿ ಆದಂತಹ ಡೇಟಿಂಗ್ ಅಂದ್ರೆ ಸಾನಿಯಾ ಮಿರ್ಜಾ ಹಾಗೂ ಯುವರಾಜ್ ಸಿಂಗ್. ಸಾಕಷ್ಟು ಸಮಾರಂಭಗಳಲ್ಲಿ ಕೂಡ ಕೈ ಕೈ ಹಿಡಿದುಕೊಂಡು ಜೊತೆಯಾಗಿ ಕಾಣಿಸಿಕೊಂಡಂತಹ ಈ ಜೋಡಿ ಖಂಡಿತವಾಗಿ ಮದುವೆ ಆಗುತ್ತೆ ಅನ್ನೊದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿದ್ದರು. ಆದರೆ ಆ ರೀತಿ ಆಗ್ಲಿಲ್ಲ. ಅದೇನೇ ಇರಲಿ ಇವರಿಬ್ಬರ ಫೋಟೋಗಳು ಮಾತ್ರ ಸುದ್ದಿ ಮಾಧ್ಯಮಗಳಲ್ಲಿ ಆ ಸಂದರ್ಭದಲ್ಲಿ ವೈರಲ್ ಆಗಿದ್ದಂತೆ ಸುಳ್ಳಲ್ಲ. ಸದ್ಯಕ್ಕೆ ಶಮಿಯವರನ್ನ ಮದುವೆ ಆಗುವಂತಹ ವಿಚಾರವನ್ನು ಖುದ್ದಾಗಿ ಸಾನಿಯಾ ಮಿರ್ಜಾ ಅವರೇ ತಳ್ಳಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಏನು ಬೇಕಾದರೂ ಕೂಡ ಆಗಬಹುದು ಯಾಕೆಂದರೆ ಸೆಲೆಬ್ರೆಟಿಗಳು ಹೇಳಿರೋ ಮಾತಿನ ಮೇಲೆ ನಿಂತ ಉದಾಹರಣೆ ಸಿಗೋದು ಕಡಿಮೆ ಅಂತ ಹೇಳಬಹುದು.

Bollywood