Government Scheme: ರಾಜ್ಯದ ಜನರಿಗೆ ಮಾಸ್ಟರ್ ಸ್ಟ್ರೋಕ್ – ಇನ್ನು ಮುಂದೆ ಇವರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ; ಯಾರ್ಯಾರಿಗೆ ಗೊತ್ತೇ??

Government Scheme:ಕಾಂಗ್ರೆಸ್ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವಂತಹ ವಾಗ್ದಾನವನ್ನು ಮಾಡಿತ್ತು. ಅದೇ ರೀತಿಯಲ್ಲಿ ಅಧಿಕಾರಿಗೆ ಬಂದ ನಂತರದಿಂದ ಪ್ರತಿಯೊಂದು ಯೋಜನೆಗಳನ್ನು ಕೂಡ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಪೂರೈಸುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಇನ್ನು ನಾವು ಇಂದಿನ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿರೋದು ಗೃಹಲಕ್ಷ್ಮಿ ಯೋಜನೆಯ ಬಗ್ಗೆ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಪ್ರತಿ ತಿಂಗಳು ನೋಂದಾಯಿತ ಮಹಿಳೆಯರಿಗೆ ಸಾವಿರ ರೂಪಾಯಿ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಅವರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರ್ತಾ ಇದೆ ಎಂದು ಹೇಳಬಹುದು. ಮನೆಯನ್ನು ನಡೆಸಿಕೊಂಡು ಹೋಗುವಂತಹ ಈ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿಕೊಂಡು ಬರ್ತಾ ಇದೆ ಎಂದು ಹೇಳಬಹುದು. ಸಾವಿರಾರು ಕೋಟಿ ರೂಪಾಯಿಗಳ ಹೊರೆ, ಈ ಯೋಜನೆಯ ಕಾರಣದಿಂದಾಗಿ ಪ್ರತಿ ವರ್ಷ ರಾಜ್ಯ ಸರ್ಕಾರದ ಮೇಲೆ ಬೀಳ್ತಾ ಇದ್ರೂ ಕೂಡ ಯಾವುದೇ ಪರಿಸ್ಥಿತಿ ಬರಲಿ ನಾವು ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವಂತಹ ಮಾತನ್ನ ರಾಜ್ಯ ಸರ್ಕಾರದ ಮೂಲಗಳು ಈಗಾಗಲೇ ಆಡಿವೆ ಹಾಗೂ ಮುಖ್ಯಮಂತ್ರಿಗಳು ಕೂಡ ಇದನ್ನ ಸ್ಪಷ್ಟಪಡಿಸಿದ್ದಾರೆ.

ಇವರಿಗೆ ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ!

ಆದರೆ ಇಲ್ಲಿ ಕೆಲವೊಂದು ಅಂಶಗಳು ನಾವು ತಿಳಿದುಕೊಳ್ಳಬೇಕಾಗಿರುವುದೇನೆಂದರೆ ನಿಯಮದ ಅಡಿಯಲ್ಲಿ ಬಾರದೆ ಇರುವಂತಹ ಮಹಿಳೆಯರು ಕೂಡ ಈ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಅವರನ್ನು ಈ ಲಿಸ್ಟಿಂದ ಹೊರ ಹಾಕುವಂತಹ ಕೆಲಸ ಇನ್ಮುಂದೆ ಸರ್ಕಾರ ಮಾಡಲಿದೆ. ನಕಲಿ ದಾಖಲೆಗಳನ್ನು ಒದಗಿಸುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವಂತಹ ಘಟನೆಗಳು ಕೂಡ ಒಂದೊಂದಾಗಿ ಈಗ ಕಂಡುಬರುತ್ತಿವೆ. ಇಂಥವರ ರೇಷನ್ ಕಾರ್ಡ್ ರದ್ದು ಮಾಡುವಂತಹ ಬಗ್ಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದು ಇನ್ನು ನಕಲಿ ಮಾಹಿತಿಗಳನ್ನು ನೀಡಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುವಂತಹ ಮಹಿಳೆಯರನ್ನು ಕೂಡ ಹಾಗೂ ಟ್ಯಾಕ್ಸ್ ಕಟ್ಟುವಂತಹ ಮಹಿಳೆಯರನ್ನ ಈ ಲಿಸ್ಟಿನಿಂದ ಹೊರ ಹಾಕುವ ಬಗ್ಗೆ ಅಧಿಕೃತವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಂತಹ ಯೋಚನೆ ಮಾಡಿದೆ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈ ರೀತಿ ಸುಳ್ಳು ಹೇಳಿ ಅಥವಾ ಸುಳ್ಳು ಮಾಹಿತಿಗಳನ್ನು ಒದಗಿಸಿ ಹಣವನ್ನು ಪಡೆದುಕೊಳ್ಳುತ್ತಿರುವಂತಹ ಮಹಿಳೆಯರನ್ನ ಲಿಸ್ಟಿನಿಂದ ಹೊರ ಹಾಕುವಂತಹ ಕೆಲಸವನ್ನು ಇಲಾಖೆ ಮಾಡಲಿದ್ದು 11ನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ವರ್ಗಾವಣೆ ಆಗಲಿದೆ.

government scheme