Darshan Case: ಜೈಲಿನಲ್ಲಿ ಯಾರ ಜೊತೆನೂ ಸೇರದೆ ದರ್ಶನ್ ಮಾಡುತ್ತಿರುವುದು ಅದೊಂದೇ ಕೆಲಸ; ಏನು ಮಾಡುತ್ತಿದ್ದಾರೆ ಗೊತ್ತೇ??

Darshan Case: ರೇಣುಕಾ ಸ್ವಾಮಿಯ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ನ್ಯಾಯಾಂಗ ಬಂಧನವನ್ನ ಪಡೆದುಕೊಂಡಿದ್ದಾರೆ ಅನ್ನೋದು ನಿಮಗೆ ತಿಳಿದಿರುವ ವಿಚಾರವಾಗಿದ್ದು ಇದು ಜುಲೈ ನಾಲ್ಕರವರೆಗೆ ಕೂಡ ಮುಂದುವರೆಯಲಿದೆ. ಸದ್ಯಕ್ಕೆ ಜೈಲುವಾಸದಲ್ಲಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಕೂಡ ಬಂದು ಭೇಟಿಯಾಗಿ ಹೋಗಿದ್ದಾರೆ. ಜೈಲಿನಲ್ಲಿ ನಮ್ಮ ಬಾಸ್ ಹೇಗಿರ್ತಾರೆ ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ಅವರ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಕಾತರದಿಂದ ಕಾಯ್ತಿದ್ದಾರೆ. ಇವತ್ತಿನ ಈ ಲೇಖನದ ಮೂಲಕ ನಾವು ಹೇಳಲು ಹೊರಡ್ತಾ ಇರೋದು ಕೂಡ ಅದೇ ವಿಚಾರದ ಬಗ್ಗೆ.

ಜೈಲಿನಲ್ಲಿ ದರ್ಶನ್ ರವರ ದಿನಾಚರಣೆ ಹೀಗಿರುತ್ತೆ!

ರಾತ್ರಿ ಬೇಗ ಮಲಗುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬೆಳಿಗ್ಗೆ ಆರು ಗಂಟೆಗೆ ಎದ್ದೇಳ್ತಾರಂತೆ. ಎದ್ದ ನಂತರ ಪ್ರಥಮವಾಗಿ ಬಿಸಿನೀರು ಸೇವಿಸಿ ಅದಾದ್ಮೇಲೆ ಸಿಬ್ಬಂದಿಗಳು ತಂದು ಕೊಡುವಂತಹ ಪಲಾವ್ ಅನ್ನು ಸೇವಿಸುತ್ತಾರೆ. ಯಾರ ಜೊತೆಗೂ ಕೂಡ ಅಷ್ಟೊಂದು ಚೆನ್ನಾಗಿ ದರ್ಶನ್ ರವರು ಬೆರಿತಾಯಿಲ್ಲ. ಈ ಹಿಂದೆ ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತ ದಂಪತಿಗಳು ಕೂಡ ದರ್ಶನ್ ರವರನ್ನು ಭೇಟಿ ಮಾಡಿ ಹೋಗಿದ್ದಾರೆ. ಈ ಮೂಲಕ ದರ್ಶನ್ ರವರಿಗೆ ಸೆರೆವಾಸ ಅಷ್ಟೊಂದು ಚೆನ್ನಾಗಿ ಒಗ್ಗುತ್ತಿಲ್ಲ ಎನ್ನುವುದಾಗಿ ಕೂಡ ತಿಳಿದು ಬಂದಿದೆ. ಮಗ ಹೆಂಡತಿಯನ್ನು ನೋಡಿದ ನಂತರ ಸ್ವಲ್ಪಮಟ್ಟಿಗೆ ಅವರಿಗೆ ಮನಸ್ಸು ನಿರಾಳವಾಗಿದೆ ಎಂಬುದಾಗಿ ಹೇಳಲಾಗುತ್ತಿದ್ದು ಚಿತ್ರರಂಗದ ಯಾವುದೇ ಸ್ನೇಹಿತರನ್ನು ಕೂಡ ಅವರು ಭೇಟಿಯಾಗೋದಕ್ಕೆ ಇಷ್ಟ ಪಡ್ತಾ ಇಲ್ಲ.

ಇನ್ನು ದರ್ಶನ್ ರವರಿಗೆ ಜೈಲಿನಲ್ಲಿ ತಮ್ಮ ವಿಗ್ ಮೆಂಟೇನ್ ಮಾಡೋದು ಸಾಕಷ್ಟು ತಲೆಬಿಸಿಯ ಕೆಲಸವಾಗಿದೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಬಿಗ್ ಬಿಚ್ಚಿಟ್ಟು ತಮ್ಮ ಸಾಮಾನ್ಯ ತಲೆಕೂದಲಿನಲ್ಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ದರ್ಶನ್ ರವರಿಗೆ ಅಟ್ಯಾಚ್ ಬಾತ್ ರೂಮ್ ಇರುವಂತಹ ರೂಂನಲ್ಲಿ ಇರಿಸಲಾಗಿದ್ದು ಈ ಪ್ರಕರಣದಲ್ಲಿ ಜೈಲಿನ ಒಳಕ್ಕೆ ಹೋಗಿರುವಂತಹ ಇತರ ಆರೋಪಿಗಳ ಜೊತೆಗೆ ದರ್ಶನ್ ರವರು ಮುನಿಸಿನಲ್ಲಿ ಇದ್ದಾರಂತೆ.

ಇನ್ನು ಬೇರೆಯವರ ಜೊತೆಗೆ ಬೆರೆಯದೆ, ದರ್ಶನ್ ರವರು ಸಂಪೂರ್ಣವಾಗಿ ಪುಸ್ತಕಗಳನ್ನು ಓದುವುದಕ್ಕೆ ಪ್ರಾರಂಭ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆ ಕಡೆ ಪವಿತ್ರ ಗೌಡ ಅವರು ಕೂಡ ಅದೇ ಕೆಲಸವನ್ನು ಮಾಡ್ತಾ ಇದ್ದಾರಂತೆ. ಆದರೆ ಮಹಜರು ಪ್ರಕ್ರಿಯೆ ಮುಗಿಸಿ ಬಂದಾಗಿನಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಲ್ಲಿ ಪಶ್ಚಾತಾಪ ಮನೋಭಾವನೆ ಸಾಕಷ್ಟಿದೆ ಎನ್ನುವುದಾಗಿ ಕೂಡ ತಿಳಿದುಬಂದಿದ್ದು ನನ್ನಿಂದ ತಪ್ಪಾಯ್ತು ಎನ್ನುವ ರೀತಿಯಲ್ಲಿ ಕೂಡ ಆಗಾಗ ಅವ್ರು ಬೇಸರ ಮಾಡಿಕೊಂಡಿದ್ದು ಕೂಡ ಇದೆ ಅಂತೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತೀರ್ಪಿನ ತಾರ್ಕಿಕ ಅಂತ್ಯವನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Darshan Case