Subsidy Loan: ಸಬ್ಸಿಡಿ ಯೋಜನೆ ಬಳಸಿಕೊಂಡು ನಿಂತಲ್ಲೇ 10 ಲಕ್ಷ ಲೋನ್ ಪಡೆಯುವ ಯೋಜನೆ!

Subsidy Loan: ತಮ್ಮದೇ ಆಗಿರುವಂತಹ ಯಾವುದೇ ರೀತಿಯ ವ್ಯಾಪಾರ ಉದ್ಯಮವನ್ನು ಪ್ರಾರಂಭ ಮಾಡುವುದಕ್ಕೆ ಪ್ರತಿಯೊಬ್ಬರಿಗೂ ಕೂಡ ಬಂಡವಾಳದ ಅಗತ್ಯತೆ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಯಾವ ರೀತಿಯಲ್ಲಿ ನಿಂತಲ್ಲೇ ಸುಲಭವಾಗಿ 10 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದೇವೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ!

ಸಣ್ಣಪುಟ್ಟ ಉದ್ಯಮಗಳಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳ ವರೆಗೆ ಲೋನ್ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಎಂಎಸ್ಎಂಇ ಹಾಗೂ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಕೂಡ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಬಹುತೇಕ ಎಲ್ಲಾ ಆರ್ಥಿಕ ಸಂಸ್ಥೆಗಳು ಕೂಡ ಸಾಲವನ್ನು ನೀಡುವಂತಹ ಕೆಲಸವನ್ನು ಮಾಡುತ್ತವೆ. ಇಲ್ಲವಾದಲ್ಲಿ ನೀವು ಉದಯ ಮಿತ್ರ ಪೋರ್ಟಲ್ ಮೂಲಕ ಈ ಲೋನ್ಗಾಗಿ ಈ ಯೋಜನೆ ಅಡಿಯಲ್ಲಿ ಸಾಲವನ್ನು ನೀಡುವಂತಹ ಯಾವ ಬ್ಯಾಂಕಿನಲ್ಲಿ ಬೇಕಾದ್ರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆ ಅಡಿಯಲ್ಲಿ ನಿಮಗೆ ಮೂರು ವಿಧಾನದ ಲೋನ್ ಪ್ರಕ್ರಿಯೆಯನ್ನು ಪರಿಚಯಿಸಲಾಗಿದೆ.

  • ಶಿಶು ವಿಭಾಗದಲ್ಲಿ 50,000 ಗಳವರೆಗೆ ಲೋನ್ ಸಿಗುತ್ತೆ
  • ಕಿಶೋರ್ ವಿಭಾಗದಲ್ಲಿ 50,000 ದಿಂದ 5 ಲಕ್ಷಗಳ ವರೆಗೆ ಲೋನ್ ಸಿಗುತ್ತೆ
  • ತರುಣ್ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಲೋನ್ ಸಿಗುತ್ತದೆ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆ!

ಇದು ರೋಜ್ಗಾರ್ ಯೋಜನೆ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಮ್ಮಿಲನವಾಗಿದೆ ಎಂದು ಹೇಳಬಹುದಾಗಿದೆ. ಇದು ಒಂದು ಸ್ವಯಂ ಉದ್ಯೋಗ ಸೃಷ್ಟಿಯ ಅವಕಾಶವಾಗಿದೆ ಎಂದು ಹೇಳಬಹುದಾಗಿದೆ. ಈ ಯೋಜನೆಯನ್ನು ನೀವು ಕೆ ವಿ ಐ ಸಿ, ಕೈಗಾರಿಕಾ ಕೇಂದ್ರಗಳು ಹಾಗೂ ರಾಜ್ಯ ಖಾದಿ ಹಾಗೂ ಗ್ರಾಮೋದಯ ಮಂಡಳಿಗಳಲ್ಲಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಸರ್ಕಾರದ ಸಬ್ಸಿಡಿಗಳನ್ನು ಕೂಡ ನೀವು ಈ ಸಾಲದಲ್ಲಿ ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಕನಿಷ್ಠಪಕ್ಷ ಹತ್ತನೇ ತರಗತಿ ಪಾಸ್ ಆಗಿರಬೇಕಾಗಿರುತ್ತದೆ. ಸೇವಾ ವಲಯದ ಯೋಜನೆಗಳಿಗೆ 8ನೇ ತರಗತಿ ಕನಿಷ್ಠ ಮಾಪನವಾಗಿದೆ. ಈಗಾಗಲೇ ಭಾರತ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿರುವಂತಹ ಸಂಸ್ಥೆಯ ಘಟಕಗಳಿಗೆ ಈ ಯೋಜನೆ ಅಡಿಯಲ್ಲಿ ಹಣ ದೊರಕುವುದಿಲ್ಲ.

ಘಟಕದ ಗರಿಷ್ಠ ವೆಷ್ಟಕ್ಕಾಗಿ 25 ಲಕ್ಷಗಳವರೆಗೆ ಹಾಗೂ ವ್ಯಾಪಾರ ವಲಯದ ಅಡಿಯಲ್ಲಿ ಸಹಕಾಗಿ 10 ಲಕ್ಷ ರೂಪಾಯಿಗಳ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮೈಕ್ರೋ ಮತ್ತು ಸಣ್ಣ ಉದ್ಯಮಗಳ ಗ್ಯಾರೆಂಟಿ ಟ್ರಸ್ಟ್ ಫಂಡ್!

ಮೈಕ್ರೋ ಹಾಗೂ ಸಣ್ಣ ಉದ್ಯಮಗಳಿಗೆ ಫಂಡ್ಸ್ ಅನ್ನು ಒದಗಿಸುವ ನಿಟ್ಟಿನಲ್ಲಿ SIDIB ಇದನ್ನು ಸ್ಥಾಪಿಸಿದೆ ಎಂದು ಹೇಳಬಹುದಾಗಿದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರೋದಕ್ಕಾಗಿ CGTMSE ಅನ್ನು ಕೂಡ ಸ್ಥಾಪಿಸಿದೆ. ಈ ಸಂಸ್ಥೆ ಸಣ್ಣ ಅಥವಾ ಮೈಕ್ರೋ ಸಂಘಟನೆಗಳಿಗೆ ಯಾವುದೇ ಮೂರನೇ ವ್ಯಕ್ತಿಯ ಗ್ಯಾರಂಟಿ ಇಲ್ಲದೆ 5 ಲಕ್ಷ ರೂಪಾಯಿಗಳವರೆಗೆ ಗ್ಯಾರೆಂಟಿ ನೀಡುವಂತಹ ಕೆಲಸವನ್ನು ಮಾಡುತ್ತೆ.

5 ಲಕ್ಷಗಳ ವರೆಗೆ ಸೂಕ್ಷ್ಮ ಉದ್ಯಮಗಳಿಗೆ ಈ ಯೋಜನೆ ಅಡಿಯಲ್ಲಿ ಗ್ಯಾರಂಟಿ ದೊರೆಯುತ್ತದೆ. ಇನ್ನು ಈ ಯೋಜನೆ ಅಡಿಯಲ್ಲಿ ಗ್ಯಾರಂಟಿ ಕವರ್ 50 ಪ್ರತಿಶತದಿಂದ 85 ಪ್ರತಿಶತ ಆಗಿರುತ್ತದೆ. ಚಿಲ್ಲರೆ ವ್ಯಾಪಾರಿ ಚಟುವಟಿಕೆಗಳಿಗೆ 10 ಲಕ್ಷದಿಂದ ಒಂದು ಕೋಟಿ ಕ್ರೆಡಿಟ್ ಸೌಲಭ್ಯ ದೊರಕಲಿದೆ. ಮಂಜುರಾಗಿರುವಂತಹ ಹಣದಲ್ಲಿ 50 ಪ್ರತಿಶತ ಗ್ಯಾರಂಟಿ ಕವರ್ ಅನ್ನು ನೀಡಲಾಗುತ್ತದೆ. ಕೆಲವೊಂದು ಡೀಫಾಲ್ಟ್ ಸಂದರ್ಭದಲ್ಲಿ ಇದರ ಮಿತಿಯನ್ನು ಸಾಲ ನೀಡುವಂತಹ ಸಂಸ್ಥೆ ಎರಡು ಕೋಟಿ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯಗಳಿಗಾಗಿ ವಿಸ್ತರಣೆ ಮಾಡುವಂತಹ ಕೆಲಸವನ್ನು ಮಾಡುತ್ತದೆ.

Subsidy Loan