Rohit Sharma:ಇಡೀ ಪ್ರಪಂಚದಲ್ಲಿ ಎಲ್ಲೇ ಹೋದರೂ ವಿಶ್ವಶ್ರೇಷ್ಠ ನಾಯಕ ರೋಹಿತ್ ಸೇವಿಸೋದು ಇದನ್ನೇ?? ಏನು ತಿನ್ನುತ್ತಾರೆ ಗೊತ್ತೇ??

Rohit Sharma: ಈ ಬಾರಿಯ t20 ವಿಶ್ವಕಪ್ ಗೆಲ್ಲುವ ಮೂಲಕ ರೋಹಿತ್ ಶರ್ಮ ಅವರು ಭಾರತ ಕಂಡಂತಹ ಶ್ರೇಷ್ಠ ನಾಯಕರಾಗಿರುವಂತಹ ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ರವರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಬಿಲಿಯನ್ ಭಾರತೀಯರ ಕನಸನ್ನು ರೋಹಿತ್ ಶರ್ಮ ಅವರ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಪೂರೈಸಿದೆ ಎಂದು ಹೇಳಬಹುದಾಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನಾಗಿರುವಂತಹ ರೋಹಿತ್ ಶರ್ಮ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ ಕೂಡ ಆಗಿರುವ ಕಾರಣದಿಂದಾಗಿ ಬೇರೆ ಬೇರೆ ದೇಶಗಳಿಗೆ ಆಗಾಗ ಕ್ರಿಕೆಟ್ ಟೂರ್ನಮೆಂಟ್ ಗಳಿಗಾಗಿ ಹೋಗಬೇಕಾದಂತಹ ಅಗತ್ಯ ಇರುತ್ತದೆ ಹಾಗೂ ಆ ಸಂದರ್ಭದಲ್ಲಿ ಅವರು ಯಾವ ಆಹಾರವನ್ನು ಹೊಂದಲು ಇಷ್ಟ ಪಡ್ತಾರೆ ಅನ್ನೋದರ ಬಗ್ಗೆ ಕೂಡ ತಿಳಿದುಕೊಳ್ಳುವಂತಹ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದರೆ ಅವರು ಯಾವ ಆಹಾರ ಪದಾರ್ಥವನ್ನು ತಿನ್ನೋದಕ್ಕೆ ಇಷ್ಟ ಪಡ್ತಾರೆ ಅಂತ ಕೇಳಿದರೆ ನೀವು ಕೂಡ ಆಶ್ಚರ್ಯ ಚಕಿತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಎಲ್ಲೇ ಹೋಗ್ಲಿ ರೋಹಿತ್ ಶರ್ಮ ಅವರಿಗೆ ಈ ಸಿಂಪಲ್ ಊಟ ಅಂದ್ರೆ ಫುಲ್ ಫೇವರೆಟ್!

ರೋಹಿತ್ ಶರ್ಮ ಅವರು ನಿಜ ಜೀವನದಲ್ಲಿ ಕೂಡ ಸಾಕಷ್ಟು ಸಿಂಪಲ್ ಆಗಿರುವಂತಹ ಮನುಷ್ಯ ಎಂದು ಹೇಳಬಹುದಾಗಿದೆ. ಇನ್ನು ಅವರು ಕ್ರಿಕೆಟ್ ಮ್ಯಾಚ್ ಗಳಿಗಾಗಿ ಬೇರೆ ಬೇರೆ ದೇಶಕ್ಕೆ ಹೋದ ಸಂದರ್ಭದಲ್ಲಿ ಸೇವಿಸಲು ಇಷ್ಟಪಡುವಂತಹ ಆಹಾರ ಕೂಡ ಅದಕ್ಕಿಂತಲೂ ಸಿಂಪಲ್ ಎಂದು ಹೇಳಬಹುದಾಗಿದೆ. ಹೌದು ದಾಲ್ ಸಾರ್ ಹಾಗೂ ರೈಸ್ ಜೊತೆಗೆ ಜ್ಯೂಸ್ ಸೇವಿಸುವುದು ನನ್ನ ಫೇವರೆಟ್ ಎಂಬುದಾಗಿ ರೋಹಿತ್ ಶರ್ಮ ಹೇಳಿದ್ದಾರೆ. ವಿಟಮಿನ್ ಎ, ಡಿ, ಇ ಹಾಗೂ ಕೊಬ್ಬು ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರುವಂತಹ ಈ ಆಹಾರ ನಿಜಕ್ಕೂ ಕೂಡ ರೋಹಿತ್ ಶರ್ಮ ಅವರ ಆಲ್ ಟೈಮ್ ಫೇವರಿಟ್ ಊಟ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ವಿಶ್ವ ಕಪ್ ಗೆದ್ದಿದ್ರು ಕೂಡ ನಮ್ಮ ಭಾರತೀಯ ಕ್ರಿಕೆಟ್ ತಂಡದ ನಾಯಕ ಎಷ್ಟು ಸಿಂಪಲ್ ಅನ್ನೋದಾಗಿ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಈ ವಿಚಾರದ ನಂತರ ಮಾತನಾಡಿಕೊಳ್ಳುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಅನ್ನು ಬಾರ್ಬಡೋಸ್ ನಲ್ಲಿ ಗೆದ್ದಿರುವಂತಹ ರೋಹಿತ್ ಶರ್ಮ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ 17 ವರ್ಷಗಳ ನಂತರ ಈ ಸಾಧನೆಯನ್ನು ಮಾಡುವ ಮೂಲಕ ಭಾರತೀಯರ ಮನಸ್ಸಿನಲ್ಲಿ ನಿಜಕ್ಕೂ ಕೂಡ ಕ್ರಿಕೆಟ್ ನೋಡ್ತಾ ಇರೋದು ಕೂಡ ಸಾರ್ಥಕ ಆಯ್ತು ಅನ್ನೋ ಭಾವನೆಯನ್ನು ಮೂಡಿಸುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಇನ್ನೂ ಭಾರತಕ್ಕೆ ಬರಬೇಕಾಗಿದೆಯಷ್ಟೇ.

Rohit Sharma