House Construction: 30 ಲಕ್ಷದಲ್ಲಿ ನಿರ್ಮಾಣವಾಗತ್ತೆ 3BHK ಡುಪ್ಲೆಕ್ಸ್ ಹೌಸ್; ನಂಬೋಕೆ ಸಾಧ್ಯವಿಲ್ವಾ? ಈ ಲೇಖನದಲ್ಲಿದೆ ಪಕ್ಕಾ ಡಿಟೇಲ್ಸ್!

House Construction: ಮನೆ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದಕ್ಕಾಗಿಯೇ ದುಡಿದ ಹಣದಲ್ಲಿ ಸಲ್ಪ ಸ್ವಲ್ಪ ಉಳಿಕೆ ಮಾಡಿ ನಂತರ ಸ್ವಲ್ಪ ಸಾಲ ಮಾಡಿಯಾದರೂ ಮನೆ ನಿರ್ಮಾಣ ಮಾಡುತ್ತಾರೆ. ಮನೆ ನಿರ್ಮಾಣ ಆಯಿತು ಎಂದರೆ ಆ ಖುಷಿಯೇ ಬೇರೆ ತರನಾಗಿದ್ದಾಗಿರುತ್ತದೆ. ಮನೆ ನಿರ್ಮಾಣ ಮಾಡುವ ವೇಳೆ ನೀವು ಬಹಳ ಬುದ್ದಿವಂತಿಕೆ ಉಪಯೋಗಿಸಬೇಕಾಗುತ್ತದೆ. ಆದಷ್ಟು ಕಡಿಮೆ ಖರ್ಚಿನಲ್ಲಿ ನೀವು ಮನೆ ಕಟ್ಟಿದರೆ ನಿಮಗೆ ಹಣ ಉಳಿತಾಯವಾಗುತ್ತದೆ. ಇದನ್ನೂ ಓದಿ:Darshan Kranti Film: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್: ದಿನೇ ದಿನೇ ಕುಗ್ಗುತ್ತಿದೆ ದರ್ಬಾರ್: ಕ್ರಾಂತಿ ಸಿನೆಮಾಗೆ ಒಳ್ಳೆ ಮಾತುಗಳು ಕೇಳಿ ಬಂದರು ಏನಾಗಿದೆ ಗೊತ್ತೇ??

ಇಲ್ಲಿ ನಾವೊಂದು ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡುವುದು ಹೇಗೆ ಎನ್ನುವುದನ್ನು ಹೇಳುತ್ತೇವೆ. ಈ ಮನೆಯನ್ನು 40*30 ಸೈಟಿನಲ್ಲಿ ಕಟ್ಟಲಾಗಿದೆ. ಅಲ್ಲದೆ ಮನೆ ನೋಡಲು ಬಹಳ ಸುಂದರವಾಗಿ ಮೂಡಿಬಂದಿದೆ. ಮನೆಯ ಗೇಟಿನ ಪಕ್ಕದಲ್ಲಿ ಕಂಪೌಂಡ್ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಜಾಗ ಬಿಡಬೇಕು. ಇದರಿಂದ ನೀವು ಹೂ ಕುಂಡಗಳನ್ನು ತಂದಾಗ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. ಮನೆಯ ಅಂಗಳಕ್ಕೆ ಸ್ಕ್ವೆರ್ ಫೀಟ್ಗೆ 30 ರೂ. ಇರುವ ಟೈಲ್ಸ್ ಬಳಸಬೇಕು. ಮನೆಯ ಮುಖ್ಯ ಬಾಗಿಲಿಗೆ ಟೀಕ್ ವುಡ್ ಬಳಸಲಾಗಿದೆ. ಮನೆಗೆ ಯುಪಿವಿಸಿ ಕಿಡಕಿ ಮಾಡಲಾಗಿದೆ. ಮನೆಯ ಬಾಗಿಲಿಗೆ 28 ಸಾವಿರ ರೂ. ಹಾಗೂ ಅದರ ಪಟ್ಟಿಗೆ 15 ಸಾವಿರ ರೂ. ಖರ್ಚಾಗುತ್ತದೆ. ಇದನ್ನೂ ಓದಿ:Banana recipe Kannada: ಕೇವಲ ಐದು ಪದಾರ್ಥಗಳನ್ನ ಬಳಸಿಕೊಂಡು, ಒಮ್ಮೆ ಮಾಡಿದ್ರೆ ವಾರದ ಪೂರ್ತಿ ಇಟ್ಟು ತಿನ್ನಬಹುದಾದಂತಹ ಬಾಳೆಹಣ್ಣಿನ ತಿನಿಸು ಮಾಡೋದು ಹೇಗೆ ಗೊತ್ತೇ ? ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅಂತಾರೆ ನೋಡಿ!

ಮನೆಯ ಒಳಗೆ ಹಾಲ್ಗೆ ಸ್ಕ್ವೇರ್ ಫೀಟ್ಗೆ 115ರೂ.ನ ಟೈಲ್ಸ್ ಬಳಸಲಾಗಿದೆ. ಕಿಚನ್ ವಿತ್ ಡೈನಿಂಗ್ ಮಾಡಿದರೆ ನಿಮಗೆ ಹಣ ಉಳಿತಾಯವಾಗಲಿದೆ. ಆದಷ್ಟು ಮಾಡರ್ನ್ ಕಿಚನ್ ಮಾಡಿದರೆ ಸಜ್ಜಾ ಬೇಕಾಗುವುದಿಲ್ಲ. ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ಗಳನ್ನು ಇರುವ ಕಟ್ಟೆಗೆ ವೈಟ್ ಕ್ವಾಡ್ಜ ಬಳಕೆ ಮಾಡಬೇಕು. ಇದು ಸ್ಕ್ವೇರ್ ಫೀಟ್ಗೆ 380 ರೂ. ಖರ್ಚಾಗುತ್ತದೆ. ಇನ್ನು ಗ್ರ್ಯಾನೈಟ್ ಮೆಟಲ್ ಸಿಂಕ್ ಬಳಕೆ ಮಾಡಲಾಗಿದೆ. ಇದಕ್ಕೆ ಸೆರಾ ಕಂಪನಿಯ ನಳಗಳನ್ನು ಬಳಸಲಾಗಿದೆ. ಅಲ್ಲದೆ ಮನೆಯ ಹಾಲ್ಗೆ ಬೆಳಕು ಬರುವ ಹಾಗೆ ದೊಡ್ಡ ದೊಡ್ಡ ಕಿಟಕಿಗಳನ್ನು ಬಿಡಲಾಗಿದೆ. ಇದರಿಂದ ಬೆಳಕು ಹಾಗೂ ಗಾಳಿ ಸರಾಗವಾಗಿ ಬರುತ್ತದೆ. ಹಾಗಾಗಿ ಹಗಲಿನ ಸಮಯ ವಿದ್ಯುತ್ ಬಳಕೆ ಮಾಡುವ ಪ್ರಮೇಯ ಇರುವುದಿಲ್ಲ. ಇದನ್ನೂ ಓದಿ:Live in Hotel: ಮದುವೆಯಾಗದೆ ಇರುವವರು, ಹೋಟೆಲ್ ನಲ್ಲಿ ರೂಮ್ ತೆಗೆದುಕೊಳ್ಳಬಹುದೇ?? ಕಾನೂನು ಏನು ಹೇಳುತ್ತದೆ ಗೊತ್ತೇ? ಇನ್ನು ಮುಂದಿದೆಯೇ ಹಬ್ಬ?

ಇನ್ನು ಮನೆಯ ಮಹಡಿಗೆ ಹೋಗುವ ಮೆಟ್ಟಿಲಿಗೆ ರೆಡ್ ಗ್ಯಾಲಕ್ಸಿ ಬಳಕೆ ಮಾಡಲಾಗಿದೆ. ಇದು ಒಂದು ಮೀಟರ್ ಉದ್ದ ಬರುತ್ತದೆ. ಈ ರೆಡ್ ಗ್ಯಾಲೆಕ್ಸಿಯ ಬೆಲೆ ಸ್ಕ್ವೇರ್ ಫೀಟ್ಗೆ 125 ರೂ. ಖರ್ಚಾಗುತ್ತದೆ. ರೂಪ್ ಲೆವಲ್ವರೆಗೆ ಟೈಲ್ ಬಳಕೆ ಮಾಡುವುದರಿಂದ ಮನೆ ಬಹಳ ಸುಂದರವಾಗಿ ಕಾಣುತ್ತದೆ. ಮನೆಯ ಎಲ್ಲ ಬಾತ್ ರೂಂ ಹಾಗೂ ವಾಷ್ ರೂಂಗಳಿಗೆ ಸೆರಾ ಕಂಪನಿಯ ಸಿಂಕ್ ಹಾಗೂ ನಳಗಳನ್ನು ಬಳಕೆ ಮಾಡಲಾಗಿದೆ.

ಹೀಗೆ ಗಾಳಿ ಬೆಳಕು ಬರಪೂರವಾಗಿ ಬರುವ ಹಾಗೂ ಕಡಿಮೆ ಖರ್ಚಿನಲ್ಲಿ ನೀವು ಮನೆಯನ್ನು ಕಟ್ಟಬಹುದು. ಆದರೆ ಇದಕ್ಕೆ ಸರಿಯಾದ ಪ್ಲಾನ್ ಹಾಗೂ ಅದನ್ನು ನಿರ್ಮಾಣ ಮಾಡಿಕೊಡುವ ಕಂಪನಿಯೂ ಸಹ ನಿಮ್ಮ ಪ್ಲಾನ್ಗೆ ತಕ್ಕ ಹಾಗೆ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಮಟೀರಿಯಲ್ ಬಳಸುವಂತದ್ದಾಗಿರಬೇಕು.

3BHK3bhk-duplex-house-at-30-lakhsHouseLow cost houseಕಡಿಮೆ ದರಮನೆ ನಿರ್ಮಾಣ