ಆಷಾಢ ಮಾಸದ ಆಟಿ ಕಳೆಂಜ; ತುಳು ನಾಡಿನ ಜನರ ಸಂಕಷ್ಟ ನಿವಾರಿಸುವ ದೈವಾರಾಧನೆ

ರಾಜ್ಯದ ಕರಾವಳಿ ಭಾಗದಲ್ಲಿ ಅದರಲ್ಲೂ ತುಳುನಾಡಿನಲ್ಲಿ ದೈವರಾಧನೆಗೆ ಹೆಚ್ಚಿನ ಮಹತ್ವವಿದೆ. ಇದನ್ನ ಜನರು ಜೀವನದ ಆಧಾರವಿದೆ ನಂಬಿದ್ದಾರೆ ಅವರ ಮೂಲ ನಂಬಿಕೆಗಳ ಪ್ರಕಾರ ಕೆಲವೊಂದು ಆಚರಣೆಗಳು ಸಂಪ್ರದಾಯಗಳು ದೈವಿಕ ಆರಾಧನೆ ಇವೆಲ್ಲವೂ ಅವರ ಜೀವವನ್ನು ಕಾಪಾಡಿಕೊಂಡು ಬಂದಿದೆ. ಈ ನಂಬಿಕೆಗಳು ಜಾನಪದವಾಗಿದ್ದು ಅವುಗಳನ್ನ ಸಾಕಷ್ಟು ಅಚ್ಚುಕಟ್ಟಾಗಿ ಭಕ್ತಿ ಭಾವದಿಂದ ನೆರವೇರಿಸುತ್ತಾರೆ ತುಳು ನಾಡಿನ ಜನ. ಇಂತಹ ನಂಬಿಕೆ ಆಚರಣೆಗಳಲ್ಲಿ ಆಷಾಢ ಮಾಸದಲ್ಲಿ ಜರುಗುವ ಆಟಿ ಕಳೆಂಜ ಕೂಡ ಒಂದು.

ಹೌದು ತುಳುನಾಡಿನಲ್ಲಿ ಆಷಾಢ ಮಾಸದ ಆಟಿ ಕಳೆಂಜ ತುಂಬಾನೇ ಪ್ರಖ್ಯಾತಿಯನ್ನು ಪಡೆದಿದೆ ತುಳು ಕ್ಯಾಲೆಂಡರ್ ಪ್ರಕಾರ ಆಟಿ ತಿಂಗಳು ಅಂದರೆ ಆಷಾಡ ಮಾಸದ ಸಮಯದಲ್ಲಿ ಈ ಆಚರಣೆ ನಡೆಯುತ್ತೆ. ಇಲ್ಲಿನ ನಲ್ಕೆ  ಬುಡಕಟ್ಟು ಜನಾಂಗದವರು ಬಹಳ ವಿಶೇಷವಾಗಿ ಈ ಸಂಪ್ರದಾಯವನ್ನು ಆಚರಿಸುತ್ತಾರೆ. ಆಶಾಡ ಮಾಸದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತೆ ಆ ಸಂದರ್ಭದಲ್ಲಿ ಹಲವಾರು ರೋಗ ರುಜಿನಗಳು ಜನರನ್ನ ಕಾಡುತ್ತವೆ ಈ ಸಮಯದಲ್ಲಿ ತುಳುನಾಡಿಕರು ತಮ್ಮ ಎಲ್ಲಾ ಕೃಷಿ ಕಾರ್ಯವನ್ನು ಮುಗಿಸಿ ಮನೆಯಲ್ಲಿ ಕುಳಿತುಕೊಳ್ಳುವ ಸಮಯ ಹಾಗಾಗಿ ಜನರನ್ನ ರೋಗರುಜಿನ ಮುಕ್ತರನ್ನಾಗಿಸುವ ಶಕ್ತಿ ಆಟಿಕಳೆಂಜ ಎನ್ನುವ ನಂಬಿಕೆ ಅವರಲ್ಲಿದೆ.

ಕರಾವಳಿಯ ನಂಬಿಕೆಯ ಪ್ರಕಾರ ಆಷಾಢ ಮಾಸದಲ್ಲಿ ದೈವಗಳು ಘಟ್ಟಹತ್ತುತ್ತವೆ ಎನ್ನುವ ನಂಬಿಕೆ ಇದೆ ಹಾಗಾಗಿ ಆಟಿ ಕಾಲದ ಒಂದು ತಿಂಗಳು ದೇವಸ್ಥಾನಗಳ ಬಾಗಿಲನ್ನ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಜನರನ್ನ ಕಾಪಾಡುವುದೇ ಕಳೆಂಜ ಎನ್ನುವ ದೈವ. ಕಳೆಂಜನ ವೇಷವನ್ನು ನೋಡುವುದೇ ಅತ್ಯಂತ ಚೆಂದ. ತೆಂಗಿನ ಎಳೆಯ ಗರಿಗಳಿಂದ ಉಡುಪನ್ನು ತಯಾರಿಸಲಾಗುತ್ತೆ. ಅಡಿಕೆ ಮರದ ಹಾಳೆಯಿಂದ ಶಿರಸ್ತ್ರಾಣ ಹಾಗೂ ಗೆಜ್ಜೆಯನ್ನು ಮಾಡಿ ಧರಿಸುತ್ತಾರೆ. ಇವೆಲ್ಲಕ್ಕಿಂತ ಹೆಚ್ಚು ಆಕರ್ಷಣೆ ಎಂದರೆ ಕಳೆಂಜನ ಕೈಯಲ್ಲಿರುವ ತೆಂಗಿನಗರಿಗಳಿಂದ ಮಾಡಿದ ಕೊಡೆ ಅಥವಾ ತತ್ರ.

ಕಳೆಂಜ ಎಂದರೆ ಕಳೆಯುವವನು ಎನ್ನುವ ಅರ್ಥ ಅಂದ್ರೆ ಯಾವುದೇ ಕಷ್ಟ ರೋಗ ರುಜಿನಗಳಿಂದ ಜನರನ್ನ ಕಾಪಾಡುವವನು ಎನ್ನುವ ಅರ್ಥ. ಜನರ ಸಂಕಷ್ಟಗಳನ್ನು ದೂರ ಮಾಡುವ ದನ ಕರುಗಳ ರೋಗರುಜಿನಗಳನ್ನು ನಿವಾರಿಸುವ ಆಟಿ ಕಳೆಂಜನ ಆಚರಣೆ ತುಳುನಾಡಿನಲ್ಲಿ ಇಂದಿಗೂ ತುಂಬಾನೇ ವಿಶೇಷ.

ಕಳೆಂಜನ ವೇಷ ಧರಿಸಿದ ವೇಷಧಾರಿ ತುಳುನಾಡಿನ ಮನೆ ಮನೆಗೆ ಹೋಗುತ್ತಾನೆ ಅವರ ಜೊತೆಗೆ ಡೋಲು ಬಡಿಯುತ್ತಾ ಪಾಡ್ದನ ಹಾಡುತ್ತ ಮತ್ತು ಮತ್ತೊಬ್ಬ ಆಗುತ್ತಾನೆ. ಎಲ್ಲರ ಮನೆಯ ಅಂಗಳದಲ್ಲಿ ಆಟಿ ಕಳೆಂಜ ಕುಣಿದ ನಟರ ಮನೆಯವರು ಬತ್ತ, ಅಕ್ಕಿ, ಮೆಣಸು, ಉಪ್ಪು, ಒಂದು ತುಂಡು ಇದ್ದಿಲು ಹಾಗೂ ಅದರಲ್ಲಿ ಅಟ್ಟದ ಮಸಿ ಇವುಗಳನ್ನೆಲ್ಲ ಒಂದು ಗೆರಸಿಯಲ್ಲಿ ಇಟ್ಟು ಆಟಿ ಕಳೆಂಜನಿಗೆ ಕೊಡುತ್ತಾರೆ. ಸುಣ್ಣ ಮಿಶ್ರಿತ ಅರಿಶಿಣದ ನೀರಿನಲ್ಲಿ ಕಳೆಂಜನಿಗೆ ಆರತಿ ಎತ್ತಿ ದಾರಿಯುವುದಕ್ಕೂ ಆ ನೀರನ್ನು ಚೆಲ್ಲುತ್ತಾರೆ ಅಂದರೆ ಮನೆಯ ಆಶುಭ ಕಳೆಯುತ್ತದೆ ಕಳೆಂಜ ಶುಭ ತರುತ್ತಾನೆ ಎನ್ನುವ ನಂಬಿಕೆ.

Comments (0)
Add Comment