Kannada Film: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ‘ಕಾಕ್ಟೇಲ್’(Cocktail) ನೀಡಿದ ವೀರೇನ್ ಕೇಶವ್

Kannada Film: ‘ಕಾಕ್ಟೇಲ್’ ಸಸ್ಪೆನ್ಸ್, ಥ್ರಿಲ್ಲರ್, ರೊಮ್ಯಾನ್ಸ್, ಮರ್ಡರ್ ಮಿಸ್ಟರಿಯ ವಿಬಿನ್ನ, ಸ್ವಾರಸ್ಯಕರ ಕಥೆಯನ್ನೊಳಗೊಂಡ ಚಿತ್ರವಾಗಿದ್ದು ‘2023’ ಹೊಸವರ್ಷದ ಸಂಭ್ರಮಕ್ಕೆ ‘ಜನವರಿ 6 ರಂದು’ ರಾಜ್ಯಾದ್ಯಂತ ಸಿನಿರಸಿಕರನ್ನು ಚಿತ್ರದ ಗುಂಗಿನಲ್ಲಿ ತೇಲಾಡಿಸಲು ಬರುತ್ತಿದೆ.

‘ಕಾಕ್ಟೇಲ್’ ಚಿತ್ರದ ನಾಯಕ ವೀರೇನ್ ಕೇಶವ್ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡವು ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ‘A2 Music’ ಯೂಟ್ಯುಬ್ ಚಾನೆಲ್ ನಲ್ಲಿ ಹುಟ್ಟು ಹಬ್ಬದ ಉಡುಗೊರೆಯಾಗಿ ಬಿಡುಗಡೆಗೊಳಿಸಿದೆ.

ಕನ್ನಡ ಚಿತ್ರರಂಗದ ಗೋಲ್ಡನ್ ಎರಾ ಮತ್ತೆ ಪ್ರಾರಂಭವಾಗಿದ್ದು ಹಲವು ಹೊಸಾ ಪ್ರಯೋಗಾತ್ಮಕ ಚಿತ್ರಗಳು ತೆರೆಕಂಡು ಇಡೀ ಭಾರತದಾದ್ಯಂತ ಯಶಸ್ಸು ಕಾಣುತ್ತಿವೆ, ವಿಜಯಲಕ್ಷ್ಮೀ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ, ಡಾ.ಶಿವಪ್ಪ ನಿರ್ಮಿಸಿರುವ, ನಾಯಕ ವೀರೇನ್ ಕೇಶವ್ ಮತ್ತು  ನಾಯಕಿ ಚರಿಷ್ಮ ಚೊಂಡಮ್ಮ ನಟಿಸಿರುವ, ಶ್ರೀರಾಮ್ ಬರೆದು ನಿರ್ದೇಶಿಸಿರುವ ‘ಕಾಕ್ಟೇಲ್’ ಚಿತ್ರ, ಈ ಸಾಲಿಗೆ ಸೇರ್ಪಡೆಯಾಗುವ ವಿಶ್ವಾಸದೊಂದಿಗೆ, ಒಂದೇ ಹೆಸರಿನ, ಒಂದೇ ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಸಾಗುವ ವಿಶಿಷ್ಟ ಕಥೆಯನ್ನು ಜೀವಾಳವಾಗಿಸಿಕೊಂಡು ಸಿನಿ ರಂಗದಲ್ಲಿ ತನ್ನ ಚಾಪು ಮೂಡಿಸಲು ಸಜ್ಜಾಗಿದೆ.

ಚಿತ್ರದ ನಾಯಕ ವೀರೇನ್ ಅನುಪಮ್ ಖೇರ್ ರವರ ಸಂಸ್ಥೆಯಲ್ಲಿ ನಟನೆಯನ್ನು ಕಲಿತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೋಷನ್ ಪೋಸ್ಟರ್, ‘ಮಳೆ ಮೋಡದ’ ಹಾಡು ಹಾಗೂ ಚಿತ್ರದ ಗ್ಲಿಂಪ್ಸ್ ವಿಡಿಯೋಗಳಲ್ಲಿ ತುಂಬಾ ವಿಬಿನ್ನ, ಕಾನ್ಫಿಡೆಂಟ್ ಹಾಗೂ ಪ್ರಾಮಿಸಿಂಗಾಗಿ ಕಾಣಿಸುತ್ತಿದ್ದಾರೆ. ಇನ್ನೊಂದು ವಿಶೇಷವೇನೆಂದರೆ ವೀರೇನ್ ‘ಕಾಕ್ಟೇಲ್’ ಚಿತ್ರದ ನಿರ್ಮಾಪಕ ಡಾ. ಶಿವಪ್ಪರವರ ಮಗನಾಗಿದ್ದು ಇವರು ನಮ್ಮ ವರನಟ  ಡಾ. ರಾಜ್ ಕುಮಾರ್ ರವರ ಸಂಬಂಧದವರಾಗಿದ್ದಾರೆ, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಸಂಬಂಧಿಯಾದ ಮತ್ತೊಬ್ಬ ಟ್ಯಾಲೆಂಟೆಡ್ ಆ್ಯಕ್ಟರ್ ಎಂಟ್ರಿಯಾಗುತ್ತಿದೆ.

ಚರಿಷ್ಮ ಚೊಂಡಮ್ಮ ಆಡಿಷನ್ ಮೂಲಕ ಚಿತ್ರಕ್ಕೆ ಆಯ್ಕೆಯಾಗಿದ್ದು ತಮ್ಮ ಅಭಿನಯ ಹಾಗೂ ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನಿಂದ ಕಾಕ್ಟೇಲ್ ಚಿತ್ರವನ್ನು ಇನ್ನಷ್ಟು ರಂಗೇರಿಸಿದ್ದಾರೆ.

ಶ್ರೀರಾಮ್ ಸಸ್ಪೆನ್ಸ್, ಥ್ರಿಲ್ಲರ್, ರೊಮ್ಯನ್ಸ್, ಮರ್ಡರ್ ಮಿಸ್ಟರಿಯಂತಹ ವಿಬಿನ್ನ ಕಥೆಯನ್ನು ಬರೆದು ನಿರ್ದೇಶಿಸುತ್ತಿದ್ದು ಸಿನಿ ರಸಿಕರಿಗೆ ಕಾಕ್ಟೇಲ್ ಚಿತ್ರದ ಗುಂಗೇರಿಸಲು ಸಜ್ಜಾಗಿದ್ದರೆ.

ಈ ಚಿತ್ರದಲ್ಲಿ ಶೋಭ್ ರಾಜ್, ಶಿವಮಣಿ, ರಮೇಶ್ ಪಂಡಿತ್, ಚಂದ್ರಕಲಾ ಮೋಹನ್, ಕರಿಸುಬ್ಬು, ಮಹಂತೇಶ್ ರಂತಹ ಅನುಭವೀ ತಾರಾ ಬಳಗವೇ ಇದೆ.

ಡಿ ಓ ಪಿ- ರವಿವರ್ಮ (ಗಂಗು), ಸಂಕಲನ- ಮೋಹನ್ ಎಲ್ ರಂಗಕಹಳೆ, ಕಲಾ ನಿರ್ದೇಶನ- ರವಿಕಿರಣ್ ಹಾಗೂ ಸಿದ್ದೇ ಗೌಡ, ಸ್ಟಂಟ್- ನರಸಿಂಹ ಮುಂತಾದವರ ಕ್ರಿಯೇಟಿವಿಟಿಯಲ್ಲಿ ಚಿತ್ರ ಮೂಡಿಬಂದಿದೆ. ಇನ್ನೂ ಚಿತ್ರಕ್ಕೆ ಲೋಕಿ ತವಸ್ಯ ರವರು ಸಂಗೀತ ನೀಡಿದ್ದು, ಈಗಾಗಲೇ  ಹೃದಯಶಿವ ಮತ್ತು ಸಿರಾಜ್ ಮಿಜರ್ ರವರು ಬರೆದಿರುವ, ಮ್ಯಾಜಿಕಲ್ ಕಂಟದ ಗಾಯಕ ಅರ್ಮಾನ್ ಮಲಿಕ್ ಹಾಡಿರುವ “ಮಳೆ ಮೋಡದ” ಹಾಡು ‘A2 Music’  ಚಾನೆಲ್ ನಲ್ಲಿ ಬಿಡುಗಡೆಗೊಂಡಿದ್ದು ಸಂಗೀತ ಪ್ರಿಯರ ಬಾಯಲ್ಲಿ ಗುನುಗುವಂತೆ ಮಾಡಿದೆ.

ಒಟ್ಟಾರೆಯಾಗಿ ‘ಕಾಕ್ಟೇಲ್’ ಚಿತ್ರವು ತುಂಬಾ ನಿರೀಕ್ಷೆಯನ್ನು ಮೂಡಿಸಿದ್ದು 2023ರ ಜನವರಿ 6 ಕ್ಕೆ ಸಸ್ಪೆನ್ಸ್, ಮಿಸ್ಟರಿಯ ಥ್ರಿಲ್ ನೀಡುವ ಸಲುವಾಗಿ ರಾಜ್ಯಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ. ತನ್ನ ಹುಟ್ಟುಹಬ್ಬದ ಜೊತೆಗೆ ಈ ಖುಷಿಯ ವಿಚಾರವನ್ನೂ ಹಂಚಿಕೊಂಡಿದ್ದಾರೆ ವೀರೇನ್ ಕೇಶವ್. ವೀರೇನ್ ಅವರಿಗೆ ಅಭಿಮಾನಿಗಳು, ಗಾಂಧಿ ನಗರ ಬೆಸ್ಟ್ ಆಫ್ ಲಕ್ ಹೇಳಿದೆ!

CockTail FilmKannada FilmVeeren Keshav