Kannada Serial: ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ಪಾತ್ರ ನೋಡಿದ ಜನರು ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೆ?

Kannada Serial: ಮೊದಲೆಲ್ಲ ದೂರದರ್ಶನದಲ್ಲಿ ಮಾತ್ರ ಧಾರವಾಹಿ ಪ್ರಸಾರವಾಗುತ್ತಿತ್ತು. ಜನರಿಗೆ ಅನಿವಾರ್ಯವಾಗಿ ಆ ಧಾರಾವಾಹಿಯನ್ನೇ ನೋಡಬೇಕಾಗಿತ್ತು. ಆದರೆ ಈಗ ಹಾಗಿಲ್ಲ. ಹತ್ತಾರು ವಾಹಿನಿಗಳು ಬಂದಿವೆ. ಪ್ರತಿಯೊಂದು ವಾಹಿನಿಯಲ್ಲೂ ಏನಿಲ್ಲವೆಂದರೂ ಆರೆಂಟು ಧಾರಾವಾಹಿಗಳು ಪ್ರತಿನಿತ್ಯ ಪ್ರಸಾರವಾಗುತ್ತಿವೆ. ಇವುಗಳ ಪ್ರಸಾರ ನಿಂತಿರುವುದು ಟಿ.ಆರ್.ಪಿ ಮೇಲೆ. ಟಿ.ಆರ್.ಪಿ ಕಡಿಮೆ ಬಂದರೆ ಧಾರಾವಾಹಿಗಳನ್ನು ಕೂಡಲೇ ನಿಲ್ಲಿಸಲಾಗುತ್ತದೆ. ಹಾಗಾಗಿ ಹೊಸ ಧಾರಾವಾಹಿಗಳು ಹೆಚ್ಚು ದಿನ ನಿಲ್ಲುತ್ತಿಲ್ಲ. ಇಂತಹ ಪೈಪೋಟಿಯ ನಡುವೆಯು ಕೆಲವೊಂದು ಧಾರಾವಾಹಿಗಳು ಜನರ ಮನಸೂರೆಗೊಂಡಿವೆ. ಜನರ ಮನಸ್ಸು ಗೆದ್ದ ಹೊಸ ಧಾರಾವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಕೂಡ ಒಂದು.

ಶ್ರೀರಸ್ತು ಶುಭಮಸ್ತು ಧಾರಾವಾಹಿಯು ಜೀ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ ರಾತ್ರಿ ೮.೩೦ಕ್ಕೆ ಪ್ರಸಾರವಾಗುತ್ತದೆ. ಸುಧಾರಾಣಿ ಅವರು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆ ಕೂಡ ಬಹಳ ವಿಭಿನ್ನವಾಗಿದೆ. ಪ್ರತಿ ಪಾತ್ರಕ್ಕೂ ಬಹಳ ಮಹತ್ವ ನೀಡಲಾಗಿದೆ. ರೊಮ್ಯಾನ್ಯ, ಕಾಮಿಡಿ, ಗಂಭೀರತೆ ಎಲ್ಲ ಭಾವನೆಗಳು ಮಿಶ್ರಣವಾದ ಧಾರಾವಾಹಿಯಾಗಿದೆ. ಹಾಗಾಗಿಯೇ ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಜನರಿಗೆ ಬಹಳ ಇಷ್ಟವಾಗಿದೆ. ಇದನ್ನೂ ಓದಿ: Ramachari Kannada Serial: ಚಾರುಗೆ ನಿಜಕ್ಕೂ ಕಣ್ಣು ಬಂದಿಲ್ವ?? ಚಾರು ಪರಿಸ್ಥಿತಿ ನೋಡಿ ರಾಮಾಚಾರಿ ಕರಗಿ ಮುಂದೇನು ಮಾಡುತ್ತಾನೆ ಗೊತ್ತೇ?? ಯಾರ ಪ್ಲಾನ್ ಇದು ಗೊತ್ತೇ??

ಈ ಧಾರಾವಾಹಿಯಲ್ಲಿ ಅತ್ತೆ( ಸುಧಾರಾಣಿ) ತನ್ನ ಮನೆಯವರಿಗೆ ತಲೆಭಾಗಿ ಎಲ್ಲ ಜವಾಬ್ದಾರಿಗಳನ್ನು ಹೊತ್ತಿರುತ್ತಾಳೆ. ಮನೆಗೆ ಬರುವ ಸೊಸೆ ಅತ್ತೆಯನ್ನು ನಿಧಾನವಾಗಿ ಬದಲಾಯಿಸಲು ಪ್ರಯತ್ನ ಪಡುತ್ತಾಳೆ. ಸಣ್ಣ ಪುಟ್ಟ ವಿಚಾರಗಳಿಗೆ ಅತ್ತೆಗೆ ಬುದ್ದಿವಾದ ಹೇಳಿ ತಿದ್ದುತ್ತಾಳೆ. ಅವರವರ ಕೆಲಸವನ್ನು ಅವರವರೇ ಮಾಡಿಕೊಳ್ಳುವಂತೆ ಮಾಡುತ್ತಾಳೆ. ಅತ್ತೆಗೂ ಸೊಸೆಯೆಂದರೆ ಬಹಳ ಪ್ರೀತಿ. ಸೊಸೆಯ ಮಾತನ್ನು ತುಂಬಾ ಗೌರವಿಸುತ್ತಾಳೆ. ಸದಾ ಕಾಲ ತನ್ನ ಮಾವ ಹಾಗೂ ಮಗನ ಮಾತನ್ನೇ ಕೇಳುತ್ತಿದ್ದ ತುಳಸಿ ಈಗ ನಿಧಾನವಾಗಿ ತಾನೂ ಕೂಡ ನಿರ್ಧಾರ ತೆಗೆದುಕೊಳ್ಳಲು ಆರಂಭಿಸಿದ್ದಾಳೆ. ಆದರೆ ಇದರಲ್ಲಿ ದತ್ತ ತಾತನ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು.
ದತ್ತ ತಾತನ ಬಗ್ಗೆ ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ದತ್ತ ಬಹಳ ಸ್ಟ್ರಿಕ್ಟ್ ಆಗಿ ಕಂಡರೂ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇಲ್ಲದವ. ದತ್ತನ ಒಂದೊಂದು ಡೈಲಾಗ್ ಕೂಡ ಕೇಳಲು ಬಹಳ ಮಜವಾಗಿರುತ್ತದೆ. ಈ ಧಾರಾವಾಹಿಯ ವೀಕ್ಷಕರಂತೂ ದತ್ತನ ಪಾತ್ರ ಯಾವಾಗ ಬರುತ್ತದೆ ಎಂದು ಕಾಯುತ್ತಿರುತ್ತಾರೆ. ಇದನ್ನೂ ಓದಿ: Kranti Film Online booking collection:ಬಿಡುಗಡೆಗೂ ಮುನ್ನವೇ, ಆನ್ಲೈನ್ ಬುಕಿಂಗ್ ನಲ್ಲಿ ಕ್ರಾಂತಿ ನಿಜಕ್ಕೂ ಗಳಿಸಿದ್ದು ಎಷ್ಟು ಗೊತ್ತೆ?? ಅಸಲಿ ಲೆಕ್ಕಾಚಾರ ಬಯಲಾದ ಮೇಲೆ ಇಷ್ಟೇನಾ ಎಂದರು. ಎಷ್ಟು ಗೊತ್ತೆ?

ಆ ಮಟ್ಟಿಗೆ ಈ ಪಾತ್ರವನ್ನು ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಮೊಮ್ಮಗನನ್ನು ದಂಡಪಿಂಡ, ಸೊಸೆಯನ್ನು ಸೋಗಲಾಡಿ, ಮೊಮ್ಮಗಳಿಗೆ ಓಡಿ ಹೋದವಳು ಎಂದೇ ಕರೆಯುತ್ತಾರೆ. ತಾತ ಎಲ್ಲರ ಬಳಿ ಬಹಳ ಜಂಬದಿಂದಲೇ ಮಾತನಾಡುತ್ತಾರೆ. ತಾನು ಹೇಳಿದ್ದೇ ನಡೆಯಬೇಕು ಎನ್ನುವ ಸ್ವಭಾವದವರು. ಆದರೆ ಮನೆಯ ಒಳಿತಿಗಾಗಿ ಸದಾ ಆಲೋಚಿಸುತ್ತಾರೆ. ಸೊಸೆಗೆ ಯಾವಾಗಲೂ ಕುರುಕಲು ತಿಂಡಿ ಮಾಡಿಕೊಡುವಂತೆ ಪೀಡಿಸುತ್ತಿರುತ್ತಾರೆ. ಮನೆಯಲ್ಲಿ ಯಾವುದೇ ಕೆಲಸ ನಡೆದರೂ ತನ್ನದೆ ಮುಂದಾಳತ್ವ ಇರಬೇಕು ಎನ್ನುವುದು ಇವರ ನಿಲುವು. ಇದನ್ನೂ ಓದಿ: Actor Abbas: ಟಾಪ್ ನಟನಾಗಿ ಮೆರೆದು ಅವಕಾಶವಿಲ್ಲದೆ ಅಮೇರಿಕಾದಲ್ಲಿ ಬಾತ್ರೂಮ್ ತೊಳೆದ ನಟನ ಮಗಳು ಹೇಗಿದ್ದಾರೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು!

ದತ್ತನ ಪಾತ್ರ ನಿರ್ವಹಣೆ ಮಾಡುತ್ತಿರುವುದು ಹಿರಿಯ ಕಲಾವಿದ ಎಂ.ಪಿ.ವೆಂಕಟ್ ರಾವ್. ಇವರು ೧೯೫೯ರಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ೬-೭ ದಶಕಗಳಿಂದ ಕನ್ನಡ ಸಿನೆಮಾರಂಗದಲ್ಲಿ ಕೆಲಸ ಮಾಡಿದ್ದಾರೆ. ಇದೀಗ ೮೨ ವರ್ಷವಾದರೂ ಯಾವುದೇ ಹರೆಯದ ಹುಡುಗರಿಗೆ ಕಮ್ಮಿ ಇಲ್ಲದಂತೆ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

Actor Venkat rao acting journeyKannada serialshrerastu shubhamastuವೆಂಕಟ್ ರಾವ್ಶ್ರೀರಸ್ತು ಶುಭಮಸ್ತು