Entertainment: ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗಿ ರಿಯಲ್ ಹಿರೋ ಎನಿಸಿದ ಸ್ಟಾರ್ ನಟ; ಯಾರು ಗೊತ್ತೇ ಆ ಸೌತ್ ಇಂಡಿಯನ್ ಹಿರೋ?

Entertainment: ನಟರು ಎಂದರೆ ತೆರೆಯ ಮೇಲೆ ಮಾತ್ರ ಹಿರೋ (Hero) ಆಗದೆ ನಿಜ ಜೀವನದಲ್ಲೂ ಹಿರೋ ಆಗಬೇಕು ಎಂದು ಜನರು ಬಯಸುವುದು ಸಾಮಾನ್ಯ. ಆದರೆ ಎಲ್ಲ ಕಲಾವಿದರು ನಿಜಜೀವನದಲ್ಲಿ ಆದರ್ಶವನ್ನು ತೋರುವುದಿಲ್ಲ. ತಾವಾಯಿತು ತಮ್ಮ ಕೆಲಸ ಆಯಿತು ಎನ್ನುವ ತರಹ ಇರುತ್ತಾರೆ. ಆದರೆ ಕೆಲವರು ನಟನೆಯ ಜೊತೆ ನಿಜಜೀವನದಲ್ಲೂ ಹಿರೋ ಆಗಿರುತ್ತಾರೆ. ಬಡವರ, ತಮ್ಮ ಸ್ನೇಹಿತರ ಕಷ್ಟಗಳಿಗೆ ಮರುಗುತ್ತಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಹೀಗೆ ನಾಲ್ಕು ಜನರಿಗೆ ಸಹಾಯ ಮಾಡಿ ಹೀರೋ ಎನಿಸಿಕೊಂಡವರಲ್ಲಿ ಕನ್ನಡದ ಮೂಲದ ತೆಲುಗು ಸಿನೆಮಾ ಮೂಲಕ ಬೆಳಕಿಗೆ ಬಂದ ನಟ ವಿಶಾಲ್ ಕೂಡ ಒಬ್ಬರು.

Entertainment: ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗಿ ರಿಯಲ್ ಹಿರೋ ಎನಿಸಿದ ಸ್ಟಾರ್ ನಟ; ಯಾರು ಗೊತ್ತೇ ಆ ಸೌತ್ ಇಂಡಿಯನ್ ಹಿರೋ? https://sihikahinews.com/amp/actor-vishal-married-deaf-and-dumb-girl/

ಹೌದು, ನಟ ವಿಶಾಲ್ (vishal) ಅವರು ತೆಲುಗು, ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳಿನ ಸ್ಟಾರ್ ನಟರಲ್ಲಿ ಇವರೂ ಕೂಡ ಒಬ್ಬರು. ಇವರು ಈ ಹಂತಕ್ಕೆ ಬರಲು ತುಂಬಾನೇ ಕಷ್ಟಪಟ್ಟಿದ್ದಾರೆ. ಆದರೆ ಸ್ಟಾರ್ ಪಟ್ಟ ಬಂದ ನಂತರ ತನ್ನನ್ನು ಬೆಳೆಸಿದವರನ್ನು ಮರೆತಿಲ್ಲ. ಇವರು ತಮ್ಮ ಹೆಸರಿಗೆ ತಕ್ಕಂತೆ ವಿಶಾಲ ಹೃದಯದವರಾಗಿದ್ದಾರೆ. ಇತ್ತಿಚೆಗೆ ತಮಿಳು ಚಿತ್ರರಂಗದ ಅಭಿವೃದ್ಧಿಗಾಗಿ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ತಮಿಳು (Tamil) ಚಿತ್ರರಂಗದ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು. ವಿಜಯ್ ಅವರು ಇಷ್ಟು ಚಿಕ್ಕ ವಯಸ್ಸಿಗೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶಾಲ್ ಅವರನ್ನು ಕನ್ನಡಿಗರು ಸಹ ತುಂಬಾ ಇಷ್ಟಪಡುತ್ತಾರೆ. ಅದಕ್ಕೆ ಕಾರಣ ನಮ್ಮ ಪರಮಾತ್ಮ. ವಿಶಾಲ್ ಪರಮಾತ್ಮ, ಕರ್ನಾಟಕರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ ಸ್ನೇಹಿತರು. ವಿಶಾಲ್ ಅವರು ಸಹ ಅಪ್ಪು ಅವರಂತೆ ಸಾಮಾಜಿಕ ಕಳಕಳಿ ಹೊಂದಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ತಾವು ಮಾಡುವ ಕೆಲಸಗಳು ಯಾರಿಗೂ ಸಹ ತಿಳಿಯಬಾರದು ಎಂದು ಬಯಸುತ್ತಾರೆ. ಇದೀಗ ವಿಶಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆದರೆ ಈ ವಿಚಾರದಲ್ಲೂ ಅವರು ತಮ್ಮ ಆದರ್ಶವನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದು ವಿಶೇಷ.

ವಿಶಾಲ್ ಅವರು ಬಹುಭಾಷಾ ನಟಿ ಅಭಿನಯ ಅವರನ್ನು ವಿವಾಹವಾಗಲಿದ್ದಾರೆ. ಅಭಿನಯ ಅವರು ಕನ್ನಡಿಗರು ಪರಿಚಿತ ಮುಖವೇ. ಅಭಿನಯ ಅವರು ಅಪ್ಪು ಅವರು ನಟಿಸಿದ ಹುಡುಗರು ಸಿನೆಮಾದಲ್ಲಿ ಅಪ್ಪು ಅವರ ತಂಗಿಯ ಪಾತ್ರವನ್ನು ನಿರ್ವಹಿಸಿದ್ದರು.

ವಿಶಾಲ್ ಅವರು ಅಭಿನಯ ಅವರನ್ನು ಮದುವೆ ಆಗುವಲ್ಲಿ ಏನಿದೆ ವಿಶೇಷ ಎಂದು ನಿಮಗೆ ಅನಿಸಬಹುದು. ಅಭಿನಯ ಅವರು ನೋಡಲು ತುಂಬಾ ಸುಂದರವಾಗಿದ್ದಾರೆ. ಅಷ್ಟೇ ಸುಂದರವಾಗಿ ಅಭಿನಯಿಸುತ್ತಾರೆ. ಆದರೆ ಅವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಕಿವಿಯೂ ಸಹ ಕೇಳುವುದಿಲ್ಲ. ಆದರೆ ಈ ವಿಚಾರ ಬಹು ಜನರಿಗೆ ತಿಳಿದಿಲ್ಲ. ಇಂತಹ ಹುಡುಗಿಯನ್ನು ವಿಶಾಲ್ ಅವರು ವಿವಾಹವಾಗುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ವಿಶಾಲ್ ಅವರೇ ಬಹಿರಂಗ ಪಡಿಸಿದ್ದಾರೆ.

actor VijayEntertainmentTamil cinemaಮನೋರಂಜನೆಸಿನಿಮಾ ಸುದ್ದಿ