ನಟಿ ಆರತಿ ಹಾಗೂ ಪುಟ್ಟಣ್ಣ ಕಣಗಾಲ್ ಅವರ ಮದುವೆ ಮುರ್ದು ಬಿದ್ದಿದ್ದಾದರೂ; ಇದೆ ಪುಟ್ಟಣ್ಣ ಕೊನೆಗಾಲಕ್ಕೆ ನಾಂದಿ ಆಯ್ತಾ!

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪುಟ್ಟಣ್ಣ ಕಣಗಾಲ್ ಅಂದರೆ ಎಲ್ಲರಿಗೂ ಗೊತ್ತಿರುವ ಚಿರಪರಿಚಿತ ಹೆಸರು. ಅದೆಷ್ಟೋ ನಟಿಯರನ್ನ ಕನ್ನಡಕ್ಕೆ ಕರೆದುಕೊಂಡು ಬಂದು ಅವರನ್ನು ಸ್ಟಾರ್ ಮಾಡಿದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರದ್ದು. ಕಲ್ಪನಾ ಆರತಿ ಮೊದಲಾದ ನಟಿಯರು ಇಂದಿಗೂ ಕನ್ನಡದಲ್ಲಿ ನೆನಪಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದಾರೆ ಅಂದ್ರೆ ಅದಕ್ಕೆಲ್ಲ ಬುನಾದಿ ಹಾಕಿದ್ದೆ ಪುಟ್ಟಣ್ಣ ಕಣಗಾಲ್ ಅಂದ್ರೆ ತಪ್ಪಾಗಲ್ಲ. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡುವುದು ಮಾತ್ರವಲ್ಲ ಹಲವಾರು ಬಾರಿ ಪ್ರೀತಿಯಲ್ಲಿ ಬಿದ್ದಿದ್ದ ವ್ಯಕ್ತಿ. ಕೊನೆಗೆ ಈ ಪ್ರೀತಿಯೇ ಅವರಿಗೆ ಮುಳುವಾಯಿತಾ ಅನ್ನೋದು ಹಲವರ ಅನುಮಾನ.

ಪುಟ್ಟಣ್ಣ ಕಣಗಾಲ್ ಅವರು ಕಲ್ಪನಾ ಅವರನ್ನೂ ಪ್ರೀತಿಸಿದ್ರು ಆದರೆ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗುತ್ತದೆ ಅಂತ ಹೇಳಿದ್ದರಂತೆ. ಅದರಂತೆ ಕಲ್ಪನಾ ಮುಂದೆ ಆರತಿಯನ್ನು ಕರೆದುಕೊಂಡು ಬಂದು ಸ್ಟಾರ್ ಪಟ್ಟವನ್ನು ಕಟ್ಟಿದವರು ಆ ಸಮಯದಲ್ಲಿ ಆರತಿ ಹಾಗೂ ಪುಟ್ಟಣ್ಣ ಅವರ ನಡುವೆಯೂ ಪ್ರೇಮಾಂಗುರವಾಯಿತು. ಮದುವೆಯೂ ಆದರು. 1975ರಲ್ಲಿ ಬಿಳಿ ಹೆಂಡ್ತಿ ಎನ್ನುವ ಸಿನಿಮಾ ಶೂಟಿಂಗ್ ಸಮಯದಲ್ಲಿ ಆರತಿ ಹಾಗೂ ಪುಟ್ಟಣ್ಣ ಕಣಗಾಲ್ ಅವರ ವಿವಾಹ ನೆರವೇರುತ್ತೆ ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಶಾಕಿಂಗ್ ಸುದ್ದಿಯು ಆಗಿತ್ತು ಯಾಕಂದ್ರೆ ಈ ವಿಷಯವನ್ನು ತಮ್ಮ ಹತ್ತಿರದವರ ಬಳಿಯೂ ಹೇಳಿಕೊಂಡಿರಲಿಲ್ಲ. ಇವರಿಬ್ಬರ ಮದುವೆಯಾಗಿ ಯಶಸ್ವಿನಿ ಎನ್ನುವ ಮಗಳು ಹುಟ್ಟುತ್ತಾಳೆ. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇದ್ದ ದಂಪತಿಗಳ ನಡುವೆ ಇದ್ದಕ್ಕಿದ್ದ ಹಾಗೆ ಮನಸ್ತಾಪ ಉಂಟಾಗುತ್ತೆ ಇಬ್ಬರು ದೂರವಾಗುತ್ತಾರೆ. ಆಗ ಆರತಿಯವರು ಎಂ ರಘುಪತಿ ಎನ್ನುವವರ ಸ್ನೇಹವನ್ನು ಮಾಡುತ್ತಾರೆ.

ಎಂ ರಘುಪತಿ ಯಾರು!

ಎಂ ರಘುಪತಿ ಅವರು ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ ಕಾರ್ಮಿಕ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸ್ತಿದ್ರು. ಆಗ ಆರತಿಯ ಪರಿಚಯವಾಗುತ್ತೆ ಪರಿಚಯ ಸ್ನೇಹಕ್ಕೆ ತಿರುಗುತ್ತೆ. ರಘುಪತಿ ಅವರೊಂದಿಗೆ ಭಾಂದವ್ಯ ಬೆಸೆದುಕೊಂಡ ಆರತಿ ಅವರಿಗೆ ಪುಟ್ಟಣ್ಣ ಕಣಗಾಲ್ ಅವರ ಮೇಲೆ ಪ್ರೀತಿ ದಿನೇ ದಿನೇ ಕಡಿಮೆಯಾಗುತ್ತೆ. ಇದನ್ನು ಪುಟ್ಟಣ್ಣ ಕಣಗಾಲ್ ಅವರು ಸಹಿಸುವುದಿಲ್ಲ ಅವರಿಗೆ ಆರತಿ ತನಗೆ ಮೋಸ ಮಾಡುತ್ತಿದ್ದಾಳೆ ಎನ್ನುವ ಭಾವನೆ ಬೆಳೆಯುತ್ತೆ. ಇತ್ತ ಆರತಿ ಹಾಗೂ ರಘುಪತಿ ಯ ನಡುವೆ ಪ್ರೀತಿ ದಿನೇ ದಿನೇ ಹೆಚ್ಚಾಗುತ್ತೆ.

ಎಮ್ ರಘುಪತಿ ಯವರು ಆರತಿ ಅವರನ್ನ ಎಂಎಲ್ಸಿ ಮಾಡಬೇಕು ಅಂತ ರಾಮಕೃಷ್ಣ ಹೆಗಡೆ ಅವರ ಮೇಲೆ ಒತ್ತಡವನ್ನು ತರುತ್ತಾರೆ. ಕೊನೆಗೆ ಆರತಿ ಅವರನ್ನ ಎಂಎಲ್ಸಿ ಮಾಡುವಲ್ಲಿ ಯಶಸ್ವಿಯು ಆಗುತ್ತಾರೆ. ಆಗಲೇ ಜೆಪಿ ನಗರದಲ್ಲಿ ಆರತಿ ಅವರಿಗೆ ದೊಡ್ಡ ಬಂಗಲೆಯನ್ನು ಕೂಡ ನೀಡಲಾಗುತ್ತೆ. ಸದಾ ಕಾಲ ಒಟ್ಟಿಗೆ ಇರುತ್ತಿದ್ದ ಆರತಿ ಹಾಗೂ ರಘುಪತಿ ಅವರ ಬಗ್ಗೆ ಸಂಜೆವಾಣಿ ಪತ್ರಿಕೆಯಲ್ಲಿಯೂ ಕೂಡ ಇವರಿಬ್ಬರು ಮದುವೆಯಾಗಿದ್ದಾರೆ ಎಂದೇ ಪ್ರಕಟಣೆಯನ್ನು ಹೊರಡಿಸುತ್ತಾರೆ ಆಗ ರಘುಪತಿ ಅವರು ಪತ್ರಿಕೆಯ ವಿರುದ್ಧವೇ ವಾಗ್ವಾದ ನಡೆಸಿದ್ದು ಇದೆ.

ಇತ್ತ ಆರತಿಯಿಂದ ದೂರಾಗುತ್ತಿದ್ದ ಪುಟ್ಟಣ್ಣ ಕಣಗಾಲ್ ಖಿನ್ನತೆಗೂ ಒಳಗಾಗುತ್ತಾರೆ. ಕೊನೆಗೆ 1985ರಲ್ಲಿ ಹಾ’ರ್ಟ್ ಅ’ಟ್ಯಾಕ್ ಆಗಿ ಪುಟ್ಟಣ್ಣ ಕಣಗಾಲ್ ತೀ’ರಿಕೊಳ್ಳುತ್ತಾರೆ. ಪುಟ್ಟಣ್ಣ ಅವರ ಈ ರೀತಿ ನಿಧನಕ್ಕೆ ಆರತಿ ಅವರೇ ಕಾರಣ ಅಂತ ನಟಿ ಆರತಿಯ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತದೆ. ಇದು ರಘುಪತಿ ಯ ಜೊತೆಗಿನ ಸುದ್ದಿಯು ಕಾಡ್ಗೆಚ್ಚಿನಂತೆ ಹಬ್ಬುತ್ತೆ.

ಆರತಿ – ಚಂದ್ರಶೇಖರ್ ಮೂರನೇ ಮದುವೆ!

ಕೊನೆಗೆ ಇವೆಲ್ಲವನ್ನ ತೊರೆದು ಆರತಿ ಅವರು ಚಂದ್ರಶೇಖರ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾಗಿ 1987ರಲ್ಲಿ ಮಗಳೊಂದಿಗೆ ವಿದೇಶಕ್ಕೆ ಹೊರಡುತ್ತಾರೆ. ಆದರೆ ಆರತಿ ಅವರು ಸಿನಿಮಾ ಲೋಕದಿಂದ ರಾಜಕೀಯದಿಂದ ಎಲ್ಲದಿರಿಂದಲೂ ದೂರವಾಗುತ್ತಾರೆ. ಕೊನೆಗೆ ಜೆಪಿ ನಗರದಲ್ಲಿದ್ದ ಬಂಗಲಿಯನ್ನು ಮಾರಿ ಉತ್ತರ ಕರ್ನಾಟಕದಲ್ಲಿ 20 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಆ ಹಳ್ಳಿಗಳಿಗೆ ಅಗತ್ಯ ಸೌಲಭ್ಯವನ್ನು ಮಾಡಿಕೊಡುತ್ತಾರೆ. ಅಲ್ಲದೆ ಇದುವರೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ಆರತಿ ಅವರು ತೊಡಗಿಕೊಂಡಿದ್ದು ನಿಜಕ್ಕೂ ಅವರ ಬಗ್ಗೆ ಅಭಿಮಾನ ಮೂಡಿಸುತ್ತದೆ.

Comments (0)
Add Comment