Actress Bhanupriya: ಹಿರಿಯ ನಟಿ ಭಾನುಪ್ರಿಯ ಅವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಬಹುಭಾಷಾ ನಟಿ ಭಾನುಪ್ರಿಯಾ ಬೇರೆ ಭಾಷೆಯಿಂದ ಕನ್ನಡಕ್ಕೆ ನಟನೆಗಾಗಿ ಬಂದರೂ ಕೂಡ ಕನ್ನಡಿಗರಿಗೆ ಬಹಳ ಆಪ್ತವಾದ ವ್ಯಕ್ತಿತ್ವ. ಕನ್ನಡದ ಬಹುತೇಕ ಸ್ಟಾರ್ ನಟ (Star Actors) ರ ಜೊತೆಗೆ ಅಭಿನಯಿಸಿ ಕಲಾ ರಸಿಕರ ಮನಸೂರಿಗೊಂಡ ಭಾನುಪ್ರಿಯ ಇಂದು ಇಂಥದ್ದೊಂದು ಕಾಯಿಲೆಯಿಂದ ಬಳಲುತ್ತಾರೆ ಎಂದು ಯಾರು ತಾನೆ ಊಹಿಸಿದ್ದರು?
ಬಹುಭಾಷಾ ನಟಿ ಭಾನುಪ್ರಿಯ ವಿಷ್ಣುವರ್ಧನ್ (Vishnuvardhan) ರವಿಚಂದ್ರನ್ (Ravichandran) ಮೊದಲಾದ ದಿಗ್ಗಜ ನಟರ ಜೊತೆಗೆ ಅಭಿನಯಿಸಿದವರು ಕನ್ನಡಿಗರ ಮನಸನ್ನ ಗೆದ್ದವರು. ಸಿಂಹಾದ್ರಿಯ ಸಿಂಹ ಚಿತ್ರ ಇಂದಿಗೂ ಎವರ್ ಗ್ರೀನ್ (Evergreen) ಸಿನಿಮಾ ಎನಿಸಿದೆ ಇದರಲ್ಲಿ ಭಾನುಪ್ರಿಯ ಹಾಗೂ ವಿಷ್ಣುವರ್ಧನ್ ಅವರ ಜೋಡಿಯನ್ನು ಎಲ್ಲರೂ ಮನಸಾರೆ ಹೊಗಳಿದ್ದರು. ಅದೇ ರೀತಿ ರಸಿಕ, ಕದಂಬ ಮೊದಲಾದ ಸಿನಿಮಾ (Film) ಗಳಲ್ಲಿಯೂ ಕೂಡ ಭಾನುಪ್ರಿಯ ನಟಿಸಿ, ಕನ್ನಡಿಗರ ಮೆಚ್ಚಿನ ನಟಿ ಎನಿಸಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಅಷ್ಟೇ ಅಲ್ಲ ಹಿಂದಿ ಭಾಷೆಯ ಸಿನಿಮಾಗಳಲ್ಲಿಯೂ ಕೂಡ ನಟಿಸಿದ ಖ್ಯಾತಿ ಭಾನುಪ್ರಿಯ ಅವರದು ಅವರ ಅದ್ಭುತ ನಟನೆಗೆ ಆ ಕಾಲದಲ್ಲಿ ಟಾಪ್ ಹೀರೋಯಿನ್ (Top Heroine) ಎನಿಸಿಕೊಂಡಿದ್ದರು. ಹೀರೋಯಿನ್ ಆಗಿ ಅಭಿನಯಿಸಿದ ಭಾನುಪ್ರಿಯ ನಂತರ ಕೆಲವು ಪೋಷಕ ಪಾತ್ರಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: Kichcha Sudeep: ದಿಡೀರ್ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡು ರಾಜ್ಯವನ್ನು ಶೇಕ್ ಮಾಡ್ತಾರಾ ಸುದೀಪ್; ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ??
ಅಂದ ಹಾಗೆ ನಟಿ ಭಾನುಪ್ರಿಯ ಅವರ ನೆನಪಿನ ಶಕ್ತಿ ಕುಂದುತ್ತಿದೆಯಂತೆ (Memory Loss) ಅವರಿಗೆ ಸರಿಯಾಗಿ ಡೈಲಾಗ್ ಹೇಳಲು ಆಗ್ತಾ ಇಲ್ಲವಂತೆ. ನನಗೆ ಇತ್ತೀಚಿಗೆ ಎಲ್ಲವೂ ಮರೆತು ಹೋಗುತ್ತಿದೆ ಅಂತ ಭಾನುಪ್ರಿಯ ಅವರೇ ತೆಲುಗು ಭಾಷೆಯ ವಾಹಿನಿ ಒಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Tabu Photos Viral: ಈ ಫೋಟೊದಲ್ಲಿ ಇರುವ ಸ್ಟಾರ್ ನಟಿಯರು ಯಾರು ಎಂದು ಗುರುತಿಸಿದರೆ ನೀವೇ ಬುದ್ಧಿವಂತರು; ನಿಮ್ಮ ನೆಚ್ಚಿನ ಸ್ಟಾರ್ ನಟಿಯರು ಇವರು!
ಭಾನುಪ್ರಿಯ ಅವರ ವೈಯಕ್ತಿಕ ಜೀವನ ನೋಡುವುದಾದರೆ 1998ರಲ್ಲಿ ಆದರ್ಶ ಕೌಶಲ್ ಎನ್ನುವವರ ಜೊತೆ ಭಾನುಪ್ರಿಯ ಅವರ ವಿವಾಹವಾಗಿತ್ತು. ಆದರೆ ಇವರಿಬ್ಬರು ಡಿವೋರ್ಸ್ ಆಗಿದ್ದಾರೆ ಎನ್ನುವ ಸುದ್ದಿಯು ಹಬ್ಬಿತು. ಇದೆಲ್ಲಾ ಸುಳ್ಳು ಅಂತ ಭಾನುಪ್ರಿಯ ಈ ಹಿಂದೆ ಹೇಳಿಕೆ ನೀಡಿದ್ದರು. 2018ರಲ್ಲಿ ಭಾನುಪ್ರಿಯ ಅವರ ಪತಿ ಆದರ್ಶ್ ಹೃದಯಾಘಾತ (Heart Attack) ದಿಂದ ತೀರಿಕೊಳ್ಳುತ್ತಾರೆ. ಇದರಿಂದ ಸಾಕಷ್ಟು ನೋವನ್ನ ಅನುಭವಿಸಿದ ನಟಿ ಭಾನುಪ್ರಿಯ ಖಿನ್ನತೆಯನ್ನ ಕೂಡ ಅನುಭವಿಸಿದ್ದಾರೆ. ಇದರಿಂದಲೇ ನನಗೆ ಮೆಮೊರಿ ಲಾಸ್ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಭಾನುಪ್ರಿಯ ಎಂಬತ್ತರ ದಶಕದಲ್ಲಿ ವೃತ್ತಿ ಜೀವನ ಆರಂಭಿಸಿದಾಗ ಮೊದಲು ನೃತ್ಯದ ಮೂಲಕವೇ ಜನರ ಗಮನ ಸೆಳೆದಿದ್ದರು. ಆದರೆ ಇದೀಗ ಸ್ಟೆಪ್ ಹಾಕುವುದನ್ನೇ ಮರೆಯುತ್ತಿದ್ದಾರೆ ಅಂದ್ರೆ ನಿಜಕ್ಕೂ ಬೇಸರದ ಸಂಗತಿ. ಅದ್ಭುತ ನೃತ್ಯಗಾರ್ತಿಯಾಗಿದ್ದ ಭಾನುಪ್ರಿಯ ತಮ್ಮದೇ ಡ್ಯಾನ್ಸ್ ಕ್ಲಾಸ್ ಆರಂಭಿಸಬೇಕು ಎನ್ನುವ ಇರಾದೆಯನ್ನು ಹೊಂದಿದ್ದರಂತೆ. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಇತ್ತೀಚಿಗೆ ನೆನಪಿನ ಶಕ್ತಿ ಕಡಿಮೆ ಆಗುತ್ತಿರುವ ಕಾರಣಕ್ಕಾಗಿ ಸಿನಿಮಾದಲ್ಲಿ ಭಾನುಪ್ರಿಯ ನಟಿಸುತ್ತಿಲ್ಲ. ಎರಡು ವರ್ಷಗಳಿಂದ ಅವರಿಗೆ ಈ ಸಮಸ್ಯೆ ಕಾಡುತ್ತಿದೆಯಂತೆ. ಆದರೂ ಒಂದೆರಡು ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಲು ಭಾನುಪ್ರಿಯ ಒಪ್ಪಿಕೊಂಡಿದ್ದಾರೆ ಅಂದ ಹಾಗೆ ಭಾನುಪ್ರಿಯ ಅವರು ಬೇಗ ಈ ಕಾಯಿಲೆಯಿಂದ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತಿದ್ದಾರೆ.